📅 ಮಂಗಳವಾರ, ಅಕ್ಟೋಬರ್ 6, 2026
Myna News Logo
ಮೈನಾ

ಸೇಡಂ

ನ್ಯೂಸ್

ಕನ್ನಡ ದಿನ ಪತ್ರಿಕೆ
Editor

ಪ್ರಧಾನ ಸಂಪಾದಕರು:

ಮಹಿಪಾಲರೆಡ್ಡಿ

Ads
Column

ಸೋಲೂ ಶಿಕ್ಷಕನೆ

ಓ ಮನಸೇ..

ಆರತಿ ಕಡಗಂಚಿ

ಆರತಿ ಕಡಗಂಚಿ

ಉಪನ್ಯಾಸಕಿ

ಶನಿವಾರ, ಸೆಪ್ಟೆಂಬರ್ 19, 20262 ನಿಮಿಷ ಓದು3 ವೀಕ್ಷಣೆಗಳು
ಸುದ್ದಿ ಹಂಚಿಕೊಳ್ಳಿ:
ಸೋಲೂ ಶಿಕ್ಷಕನೆ
ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಶಾಲೆಯಿಂದ ಬಂದ ಮಗು ಪತ್ರವೊಂದನ್ನು ತಾಯಿಯ ಕೈಗೆ ನೀಡಿತು.“ನಿಮ್ಮ ಮಗನಿಗೆ ಇಲ್ಲಿ ಓದು ಮುಂದುವರಿಸುವುದು ಕಷ್ಟ. ಇನ್ನು ಮುಂದೆ ಶಾಲೆಗೆ ಕಳುಹಿಸಬೇಡಿ” ಎಂದು ಬರೆಯಲಾಗಿತ್ತು.ತಾಯಿ ಅದನ್ನು ತನ್ನ ಮಗನ ಅಂತಿಮ ಸತ್ಯವೆಂದು ಒಪ್ಪಲಿಲ್ಲ. ಶಾಲೆಯ ಬಾಗಿಲು ಮುಚ್ಚಿದಾಗ,ಸೋಲನ್ನು ಸ್ವೀಕರಿಸಿ,ತಾನೇ ಮಗನ ಮೊದಲ ಶಿಕ್ಷಕಿಯಾದಳು. ಅವನೊಳಗಿನ ಕೊರತೆ ಹುಡುಕುವುದಕ್ಕಿಂತ, ಅವನೊಳಗಿನ ಸಾಮರ್ಥ್ಯ ಹುಡುಕಿದಳು. ಅವಳ ನಂಬಿಕೆ ಮಗುವಿಗೆ ಶಿಕ್ಷಣವನ್ನಷ್ಟೇ ನೀಡಲಿಲ್ಲ; “ನನ್ನಿಂದ ಸಾಧ್ಯ” ಎಂಬ ಆತ್ಮವಿಶ್ವಾಸವನ್ನೂ ನೀಡಿತು.ಆ ಮಗು ಮುಂದೆ ಕತ್ತಲೆಯನ್ನು ದೂರಮಾಡಿ ಬೆಳಕು ನೀಡಿದವನಾಗಿ ಜಗತ್ತೇ ಚಪ್ಪಾಳೆ ಹೊಡೆಯುವಂತೆ ಬೆಳೆದ. ಇಂದು ೯೯ ಶೇಕಡಾ ಅಂಕ ಪಡೆದ ವಿದ್ಯಾರ್ಥಿಯ ಕಣ್ಣಿಗೆ ಉಳಿದ ಒಂದು ಶೇಕಡಾ ಮಾತ್ರ ಕಾಣುತ್ತಿದೆ. ಮತ್ತೊಬ್ಬನಿಗೆ ನಿರೀಕ್ಷಿಸಿದ ಓಇಇಖಿ ಫಲಿತಾಂಶ ಸಿಗಲಿಲ್ಲವೆಂಬ ನೋವು ಇಡೀ ಬದುಕಿನ ಸೋಲಿನಂತೆ ಕಾಣುತ್ತಿದೆ. ಒಂದು ಪರೀಕ್ಷೆ, ಒಂದು ರ‍್ಯಾಂಕ್, ಒಂದು ಅವಕಾಶ ಸಿಗದಿದ್ದರೂ,ಬದುಕಿನ ಮುಂದಿನ ಸಾಧ್ಯತೆಗಳನ್ನೇ ಕಾಣದಷ್ಟು ಕುಗ್ಗುತ್ತಾರೆ. ಮಕ್ಕಳಿಗೆ ಗೆಲುವನ್ನು ಆಚರಿಸುವುದನ್ನು ನಾವು ಚೆನ್ನಾಗಿ ಕಲಿಸಿದ್ದೇವೆ. ಆದರೆ ಸೋತಾಗ ಮನಸ್ಸನ್ನು ಹೇಗೆ ಹಿಡಿದಿಟ್ಟುಕೊಳ್ಳಬೇಕು, ತಪ್ಪಿನಿಂದ ಹೇಗೆ ಕಲಿಯಬೇಕು, ಅಗತ್ಯವಿದ್ದರೆ ದಾರಿಯನ್ನು ಹೇಗೆ ಬದಲಿಸಬೇಕು ಎಂಬುದನ್ನೂ ಕಲಿಸಬೇಕಾಗಿದೆ.ನಾವು ಸದಾ ಮಕ್ಕಳಿಗೆ ಒತ್ತಿ ಒತ್ತಿಹೇಳುವುದು “ಮೊದಲ ಸ್ಥಾನ ಬರಬೇಕು.” “ಚೆನ್ನಾಗಿ ಅಂಕ ತೆಗೆಯಬೇಕು.” “ಸ್ಪರ್ಧೆಯಲ್ಲಿ ಗೆಲ್ಲಬೇಕು.” “ಎಲ್ಲರಿಗಿಂತ ಮುಂದೆ ಇರಬೇಕು.” ಸರಿ ಸಾಮರ್ಥ್ಯ ಗುರುತಿಸಿ ಹುರುದುಂಬಿಸಿ ಬೇಡ ಎನ್ನುತ್ತಿಲ್ಲ. ಆದರೆ ಒತ್ತಡ ಮಾನಸಿಕ ಹಿಂಸೆ ರೂಪ ಪಡೆಯದಿರಲಿ. ಸೋಲಿನ ಪಾಠ ಕಲಿತವನು ಮಾತ್ರ ಗೆಲುವಿನ ನಿಜ ಸಂಭ್ರಮ ಪಡುತ್ತಾನೆ. ಸೋತಾಗ ಎಲ್ಲಿ ತಪ್ಪಾಗಿದೆ ಎಂದು ಆತ್ಮಾವಲೋಕನ ಮಾಡಿಸಿ. ದಿಕ್ಕು ಬದಲಾಯಿಸಿಕೊಳ್ಳಲು ತಿಳಿಸಿ. ಹೆಚ್ಚು ಪ್ರಯತ್ನ ಪಡುವಂತೆ ಪ್ರೇರೇಪಿಸುವುದು ಇಂದಿನ ಅವಶ್ಯಕತೆಯಾಗಿದೆ. ಬೇಕು ಏನ್ನುವುದನ್ನು ಪಡೆಯುವ ಛಲವಿರಬೇಕು ನಿಜ. ಆದರೆ ದೊರೆಯದಿದ್ದಾಗ ಖಿನ್ನತೆಗೆ, ಸಾವಿಗೆ ಶರಣಾಗುವುದು ಎಷ್ಟರ ಮಟ್ಟಿಗೆ ಸರಿ ಅಲ್ಲವೆ? ಜೀವನದಲ್ಲಿ ಸಾಕಷ್ಟು ಆಯ್ಕೆ, ಅವಕಾಶಗಳಿವೆ ಒಂದಿಲ್ಲದಿದ್ದರೇನು? ಮತ್ತೊಂದು ಎಂಬAತೆ ಮುಂದೆ ಸಾಗಬೇಕು. ಈ ಸೋಲಿನ ಪಾಠ ಕಲಿಸುವ ಶಿಕ್ಷಕನ ತರಗತಿ ಸ್ವಲ್ಪ ಕಠಿಣ. ಇಲ್ಲಿ ಪಾಠಪುಸ್ತಕ ಇರುವುದಿಲ್ಲ. ಅನುಭವವೇ ಪುಸ್ತಕ. ತಪ್ಪುಗಳೇ ಪ್ರಶ್ನೆಗಳು. ಆತ್ಮಾವಲೋಕನವೇ ಉತ್ತರ. ಮತ್ತೆ ಪ್ರಯತ್ನಿಸುವುದೇ ಪರೀಕ್ಷೆ.ಸೋತಾಗ ಕಷ್ಟವಾಗಿರ ಬಹುದು.ಆದರೆ ನಾಳೆ ಬದಲಾಗಬಹುದು. ಪರಿಸ್ಥಿತಿಗಳು ಬದಲಾಗಬಹುದು. ನಿಮ್ಮ ಸಾಮರ್ಥ್ಯ ಬೆಳೆಯಬಹುದು. ಹೊಸ ಜನರು ಬದುಕಿಗೆ ಬರಬಹುದು. ಹೊಸ ಅವಕಾಶಗಳು ಎದುರಾಗಬಹುದು.ತಂದೆ-ತಾಯಿ, ಶಿಕ್ಷಕರು, ಸ್ನೇಹಿತರು ಅಥವಾ ನಂಬಿಕೆಯ ವ್ಯಕ್ತಿಯೊಂದಿಗೆ ಮಾತನಾಡಿ. ಸಹಾಯ ಕೇಳುವುದು ದೌರ್ಬಲ್ಯವಲ್ಲ; ಅದು ತನ್ನ ಬದುಕಿನ ಬಗ್ಗೆ ಕಾಳಜಿ ಹೊಂದಿರುವ ಬಲವಾದ ಹೆಜ್ಜೆ.ಸೋಲು ಬದುಕಿನ ಪೂರ್ಣವಿರಾಮವಲ್ಲ.ಅದು ಮತ್ತೊಂದು ಪುಟ ತಿರುಗಿಸುವ ಕ್ಷಣ.ಸೋಲನ್ನು ಶಿಕ್ಷಕನನ್ನಾಗಿ ಸ್ವೀಕರಿಸಿದವನು,ಒಂದು ದಿನ ತನ್ನದೇ ಬದುಕಿನ ಉತ್ತಮ ವಿದ್ಯಾರ್ಥಿಯಾಗುತ್ತಾನೆ.ಗೆಲುವು ಸಿಕ್ಕಾಗ ಸಂತೋಷದಿAದ ಸ್ವೀಕರಿಸುವುದು ಬದುಕಿನ ಒಂದು ಭಾಗ.ಸೋಲು ಬಂದಾಗ ಕುಗ್ಗದೆ, ಅದರ ಪಾಠವನ್ನು ಸ್ವೀಕರಿಸಿ ಮತ್ತೆ ಬದುಕಿನತ್ತ ಹೆಜ್ಜೆ ಇಡುವುದು ಬದುಕಿನ ದೊಡ್ಡ ಕಲೆ.ಕೆಲವೊಮ್ಮೆ ಅರ್ಹತೆ ಇದ್ದರೂ ಅವಕಾಶ ಸಿಗುವುದಿಲ್ಲ. ಕೆಲವೊಮ್ಮೆ ಶ್ರಮಪಟ್ಟರೂ ಫಲಿತಾಂಶ ನಿರೀಕ್ಷೆಯಂತೆ ಬರುವುದಿಲ್ಲ.ಕೆಲವೊಮ್ಮೆ ಸರಿಯಾದ ನಿರ್ಧಾರ ತೆಗೆದುಕೊಂಡರೂ ಪರಿಸ್ಥಿತಿ ನಮ್ಮ ಕೈಯಲ್ಲಿರುವುದಿಲ್ಲ.ಬದುಕು ಪರೀಕ್ಷೆಯ ಪ್ರಶ್ನೆಪತ್ರಿಕೆಯಂತಿಲ್ಲ. ಇಲ್ಲಿ ಪ್ರತಿಯೊಂದು ಪ್ರಶ್ನೆಗೂ ನಮಗೆ ಗೊತ್ತಿರುವ ಉತ್ತರ ಬರುವುದಿಲ್ಲ. ನಾವು ಎಷ್ಟೇ ಸಿದ್ಧರಾಗಿದ್ದರೂ ಕೆಲವು ಫಲಿತಾಂಶಗಳು ನಮ್ಮ ನಿರೀಕ್ಷೆಯಂತೆ ಇರುವುದಿಲ್ಲ. ಸೋಲಿನೊಂದಿಗೆ ಮುಖಾಮುಖಿಯಾಗುವುದನ್ನು ಕಲಿಯಬೇಕು.ಗೆಲುವು ಬಂದಾಗ ಸಂತೋಷಪಡೋಣ. ಸೋಲು ಬಂದಾಗ ಪಾಠ ಕಲಿಯೋಣ. ಸೋಲೂ ಒಬ್ಬ ಶಿಕ್ಷಕನೇ , ಹೇಳುವ ಪಾಠ ಕೇಳಿಸಿಕೊಳ್ಳುವ ಮನಸ್ಸಿದ್ದರೆ, ಅದು ಮುಂದಿನ ಗೆಲುವಿನ ಪಾಠವಾಗುತ್ತದೆ.
ಟ್ಯಾಗ್ಸ್:#Sedam#Karnataka
ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.

Ads