Literature
ಕಗ್ಗ ದರ್ಶನ

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರು
ಶನಿವಾರ, ಸೆಪ್ಟೆಂಬರ್ 19, 20262 ನಿಮಿಷ ಓದು3 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
೧೫೨ಪುಣ್ಯಪಾಪ ಋಣಾನುಬಂಧ ವಾಸನೆಗಳಿವು ಜನ್ಮಾಂತರದ ಕರ್ಮಶೇಷದಂಶಗಳು ಎಣ್ಣಿಕೆಗೆ ಸಿಲುಕದಾಕಸ್ಮಿಕ ಯದೃಚ್ಛೆಗಳು ಸನ್ನಿಹಿತ
ದೈವಕದೆ ಮಂಕುತಿಮ್ಮ.
ಈ ಪದ್ಯದಲ್ಲಿ ವಿನಯದಿಂದ ಪ್ರಯತ್ನಿಸಿ; ಫಲವನ್ನು ಸಮಚಿತ್ತದಿಂದ ಸ್ವೀಕರಿಸುವುದನ್ನು ತಿಳಿಸಲಾಗಿದೆ.ನಮ್ಮ ಜೀವನದಲ್ಲಿ ಎದುರಾಗುವ ಸುಖ-ದುಃಖಗಳು,ಲಾಭ-ನಷ್ಟಗಳು,ಸಂಬAಧಗಳು, ಅವಕಾಶಗಳು ಮತ್ತು ಅನಿರೀಕ್ಷಿತ ಘಟನೆಗಳು. ಕೇವಲ ನಮ್ಮ ಹಿಂದಿನ ಪ್ರಯತ್ನದ ಫಲ ಮಾತ್ರವಲ್ಲ; ಅವುಗಳಲ್ಲಿ ಹಿಂದಿನ ಜನ್ಮಗಳಲ್ಲಿ ಮಾಡಿದ ಪುಣ್ಯ,ಪಾಪ,ಕರ್ಮಗಳ ಉಳಿದ ಫಲ ಋಣಾನುಬಂಧ ಮತ್ತು ಸಂಸ್ಕಾರಗಳ ಪ್ರಭಾವವೂ ಇರಬಹುದು. ಮನುಷ್ಯನ ಲೆಕ್ಕಾಚಾರಕ್ಕೆ ಸಿಗದ ಅನೇಕ ಘಟನೆಗಳು ಜೀವನದಲ್ಲಿ ಆಕಸ್ಮಿಕವಾಗಿ ನಡೆಯುತ್ತವೆ.ಇಂತಹ ವುಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾದ ಸಂದರ್ಭಗಳ ಹಿಂದೆ ದೈವ ಅಥವಾ ವಿಧಿಯ ಪಾತ್ರ ಇರುತ್ತದೆ ಎಂಬುದು ಪದ್ಯದ ಭಾವ. "ಪುಣ್ಯಪಾಪ ಋಣಾನುಬಂಧ ವಾಸನೆಗಳಿವು"-ನಮ್ಮ ಹಿಂದಿನ ಕರ್ಮಗಳಿಂದ ಉಂಟಾದ ಪುಣ್ಯ-ಪಾಪ,ಋಣಾನುಬಂಧ ಮತ್ತು ವಯಸ್ಸಿನ ಸಂಸ್ಕಾರಗಳು ನಮ್ಮ ಬದುಕಿನ ಮೇಲೆ ಪರಿಣಾಮ ಬೀರುತ್ತವೆ."ಜನ್ಮಾಂತರದ ಕರ್ಮ ಶೇಷದಂಶಗಳು"- ಹಿಂದಿನ ಜನ್ಮಗಳಲ್ಲಿ ಮಾಡಿದ ಕರ್ಮಗಳೆಲ್ಲವೂ ಅಲ್ಲಿಯೇ ಮುಗಿಯುವುದಿಲ್ಲ; ಅವುಗಳಲ್ಲಿ ಉಳಿದಿರುವ ಕೆಲವು ಫಲಗಳು ಮುಂದಿನ ಜನ್ಮದಲ್ಲಿಯೂ ಅನುಭವಕ್ಕೆ ಬರಬಹುದು ಎಂಬ ಕರ್ಮ ಸಿದ್ದಾಂತವನ್ನು ಇಲ್ಲಿ ಸೂಚಿಸಲಾಗಿದೆ."ಎಣ್ಣಿಕೆಗೆ ಸಿಲುಕದಾಕಸ್ಮಿಕ ಯದೃಚ್ಛೆಗಳು"-ಮನುಷ್ಯನ ಲೆಕ್ಕಾಚಾರ, ತರ್ಕ ಅಥವಾ ಯೋಜನೆಗಳಿಗೆ ಸಿಗದಂತೆ ಕೆಲವು ಘಟನೆಗಳು ಅನಿರೀಕ್ಷಿತವಾಗಿ ಸಂಭವಿಸುತ್ತವೆ.ಹೌದು ಯದೃಚ್ಛೆ ಅಥವಾ ಆಕಸ್ಮಿಕ ಘಟನೆಗಳನ್ನು ಕಾಣುತ್ತವೆ. "ಸನ್ನಿಹಿತ ದೈವಕದೆ ಮಂಕುತಿಮ್ಮ"-ನಮ್ಮ ಬದುಕಿನ ಘಟನೆಗಳ ಸಮಗ್ರ ಕಾರಣವನ್ನು ಮನುಷ್ಯನು ತಿಳಿಯಲಾರನು. ಆದ್ದರಿಂದ ತನ್ನ ಪ್ರಯತ್ನದ ಜೊತೆಗೆ ದೈವ, ವಿಧಿ, ಕರ್ಮಗಳ ಪಾತ್ರವನ್ನು ಒಪ್ಪಿಕೊಳ್ಳಬೇಕೆಂದು ಕವಿ ಹೇಳುತ್ತಾರೆ. ಈ ಕಗ್ಗವು ಕರ್ಮ ಮತ್ತು ದೈವ ಸಂಬAಧವನ್ನು ಬಹಳ ಸೂಕ್ಷ್ಮವಾಗಿ ವಿವರಿಸುತ್ತದೆ.ಮನುಷ್ಯನು ತನ್ನ ಜೀವನವನ್ನು ಸಂಪೂರ್ಣವಾಗಿ,ತನ್ನ ಬುದ್ಧಿ ಮತ್ತು ಪ್ರಯತ್ನದಿಂದಲೇ ನಿಯಂತ್ರಿಸುತ್ತೇನೆ ಎಂದುಕೊಳ್ಳುತ್ತಾನೆ. ಆದರೆ ವಾಸ್ತವದಲ್ಲಿ ಅವನ ಬದುಕಿನಲ್ಲಿ ಅವನ ನಿಯಂತ್ರಣಕ್ಕೆ ಮೀರಿದ ಅನೇಕ ಸಂಗತಿಗಳಿವೆ. ಯಾರನ್ನು ಭೆಟ್ಟಿಯಾಗುತ್ತೇವೆ,ಯಾವ ಕುಟುಂಬದಲ್ಲಿ ಹುಟ್ಟುತ್ತೇವೆ, ಕೆಲವು ಅನಿರೀಕ್ಷಿತ ಅವಕಾಶಗಳು ಅಥವಾ ಸಂಕಷ್ಟಗಳು ಏಕೆ ಬರುತ್ತವೆ ಎಂಬುದಕ್ಕೆ ನೇರವಾದ ಉತ್ತರ ಸಿಗುವುದಿಲ್ಲ.ಭಾರತೀಯ ಕರ್ಮಸಿದ್ದಾಂತದ ದೃಷ್ಟಿಯಲ್ಲಿ ಇವುಗಳಿಗೆ ಹಿಂದಿನ ಕರ್ಮ, ಋಣಾನುಬಂಧ,ವಾಸನೆ ಮತ್ತು ದೈವ ಕಾರಣಗಳಾಗಿರಬಹುದು. ಆದರೆ ಇದನ್ನು"ಎಲ್ಲವೂ ವಿಧಿಯೇ; ಮನುಷ್ಯನ ಪ್ರಯತ್ನಕ್ಕೆ ಬೆಲೆ ಇಲ್ಲ"ಎಂದು ಅರ್ಥೈಸಬಾರದು. ಕಗ್ಗದ ಒಳನೋಟವೆಂದರೆ, ಮನುಷ್ಯನು ತನ್ನ ಕೈಯಲ್ಲಿರುವ ಕರ್ತವ್ಯವನ್ನು ಮಾಡುತ್ತಾ,ತನ್ನ ನಿಯಂತ್ರಣಕ್ಕೆ ಮೀರಿದ ಫಲಿತಾಂಶಗಳನ್ನು ಸಮಚತ್ತ ದಿಂದ ಸ್ವೀಕರಿಸಬೇಕು ಎನ್ನುವುದಾಗಿದೆ.ಇದನ್ನು ಭಗವದ್ಗೀತೆಯ ನೆಲೆಯಲ್ಲಿ ನೋಡಿದರೂ, "ಕರ್ಮಣೋ ಹ್ಯಪಿ ಬೋದ್ಧವ್ಯಂ ಚ ವಿಕರ್ಮಣ:ಅಕರ್ಮಣಶ್ಚ ಬೋದ್ಧವ್ಯಂ ಗಹನಾ ಕರ್ಮಣೋ ಗತಿ"ಎಂದರೆ, ಕರ್ಮವೆಂದರೇನು ವಿಕರ್ಮವೆಂದರೇನು, ಅಕರ್ಮ ವೆಂದರೇನು ಎಂಬುದನ್ನು ತಿಳಿಯಬೇಕು. ಏಕೆಂದರೆ ಕರ್ಮದ ಗತಿ ಬಹಳ ಗಹನವಾದದ್ದು, ಸುಲಭವಾಗಿ ಅರ್ಥವಾಗುವಂತದ್ದಲ್ಲ. ಮನುಷ್ಯನ ಹಿಂದಿನ ಜೀವನದ ಅನುಭವಗಳ ಹಿಂದೆ, ಇಂದಿನ ಕರ್ಮಗಳ ಪರಿಣಾಮಗಳು ಇರಬಹುದು."ಗಹನಾ ಕರ್ಮಣೋ ಗತಿ" ಎಂದು ಕರ್ಮದ ಫಲಗತಿಯನ್ನು ಅತ್ಯಂತ ಸಂಕೀರ್ಣವೆAದು ಗೀತೆಯಲ್ಲಿಯೂ ಹೇಳಲಾಗಿದೆ.ಈ ಕಗ್ಗವು ಕರ್ಮ, ದೈವ, ಪೂರ್ವಜನ್ಮ, ಋಣಾನುಬಂಧ ಮತ್ತು ಮನುಷ್ಯನ ನಿಯಂತ್ರಣಕ್ಕೆ ಮೀರಿದ ಘಟನೆಗಳನ್ನು ಕುರಿತು ಚಿಂತನೆಗೆ ಹಚ್ಚುತ್ತದೆ ಈ ಪದ್ಯದ ಶಕ್ತಿ ಅದರ ತಾತ್ವಿಕ ಆಳದಲ್ಲಿದೆ.ಜೀವನದ ಎಲ್ಲಾ ಘಟನೆಗಳಿಗೂ ಸರಳವಾದ ಕಾರಣವನ್ನು ಹುಡುಕುವ ಮನುಷ್ಯನ ಮನೋಭಾವವನ್ನು ಇದು ಪ್ರಶ್ನಿಸುತ್ತದೆ.ಆದರೆ, ಪುನರ್ಜನ್ಮದ ಕರ್ಮ ಅಥವಾ ದೈವವನ್ನು ಪ್ರತಿಯೊಂದು ಘಟನೆಗೂ ಕಾರಣವೆಂದು ನಿಶ್ಚಯವಾಗಿ ಒಪ್ಪಿಕೊಳ್ಳುವುದು ವೈಜ್ಞಾನಿಕವಾಗಿ ಪರಿಶೀಲಿಸಲಾಗದ ನಂಬಿಕೆ. ಆದ್ದರಿಂದ ಈ ಕಗ್ಗವನ್ನು ಅಕ್ಷರಶ:ವಿಧಿವಾದವಾಗಿ ಸ್ವೀಕರಿಸುವ ಬದಲು, ಮಾನವ ಜೀವನದ ಅನಿಶ್ಚಿತತೆ, ಕಾರಣಗಳ ಸಂಕೀರ್ಣತೆ ಮತ್ತು ನಮ್ಮ ನಿಯಂತ್ರಣದ ಮಿತಿಗಳ ಕುರಿತು ತಾತ್ವಿಕ ಚಿಂತನೆಯಾಗಿ ಓದುವುದು ಹೆಚ್ಚು ಸಮಾಜಸೇನಿಸುತ್ತದೆ. ಹಿಂದಿನ ಕರ್ಮದ ಪರಿಣಾಮ ಇರಬಹುದು; ಜೀವನದಲ್ಲಿ ಅನಿರೀಕ್ಷಿತ ಸಂಗತಿಗಳು ಇರಬಹುದು; ಎಲ್ಲವನ್ನು ಮನುಷ್ಯನ ಲೆಕ್ಕಕ್ಕೆ ತರಲು ಸಾಧ್ಯವಿಲ್ಲ. ಆದರೂ ತನ್ನ ಕೈಯಲ್ಲಿರುವ ಕರ್ತವ್ಯವನ್ನು ಪ್ರಮಾಣಿಕವಾಗಿ ಮಾಡಬೇಕು ಒಟ್ಟಿನಲ್ಲಿ ಈ ಪದ್ಯವು ಕರ್ಮ ಸಿದ್ದಾಂತ, ದೈವ, ಮಾನವ ಪ್ರಯತ್ನ ಮತ್ತು ಜೀವನದ ಅನಿಶ್ಚಿತತೆಗಳ ನಡುವೆ ಸಮತೋಲನ ಸಾಧಿಸುವ ತಾತ್ವಿಕ ಸಂದೇಶವನ್ನು ನೀಡುತ್ತದೆ.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads