📅 ಮಂಗಳವಾರ, ಅಕ್ಟೋಬರ್ 6, 2026
Myna News Logo
ಮೈನಾ

ಸೇಡಂ

ನ್ಯೂಸ್

ಕನ್ನಡ ದಿನ ಪತ್ರಿಕೆ
Editor

ಪ್ರಧಾನ ಸಂಪಾದಕರು:

ಮಹಿಪಾಲರೆಡ್ಡಿ

Ads
Column

'ಅವಳ ಮಗಳು ' ಅರ್ಧದಲ್ಲೆ ಬಿಟ್ಟು ಹೋದ ತ್ರಿವೇಣಿ

ಕಿರಣ್ ಪಾಟೀಲ

ಕಿರಣ್ ಪಾಟೀಲ

ಲೇಖಕರು - ಗಾಯಕರು

ಶನಿವಾರ, ಸೆಪ್ಟೆಂಬರ್ 19, 20262 ನಿಮಿಷ ಓದು4 ವೀಕ್ಷಣೆಗಳು
ಸುದ್ದಿ ಹಂಚಿಕೊಳ್ಳಿ:
'ಅವಳ ಮಗಳು ' ಅರ್ಧದಲ್ಲೆ ಬಿಟ್ಟು ಹೋದ ತ್ರಿವೇಣಿ
ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಸುಂದರ ಬರಹ ಮಹಿಳಾ ಸಂವೇದನೆಯನ್ನು ತನ್ನ ಕಾದಂಬರಿಗಲ್ಲಿ ಅರ್ಥವಂತಿಕೆಯಾಗಿ ಅಷ್ಟೇ ವಿಚಾರ ಪೂರ್ಣಕವಾಗಿ ತ್ರಿವೇಣಿಯವರು ಬಲು ಅರ್ಥವಂತಿಕೆಯಿAದ ಬರಹದಲ್ಲಿ ತೊಡಗಿಕೊಂಡು ಕನ್ನಡ ಕಾದಂಬರಿ ಲೋಕದಲ್ಲಿ ತನ್ನ ಹೆಸರನ್ನು ಶಾಶ್ವತವಾಗಿ ಇರಿಸಿಕೊಂಡಿಹ ತ್ರಿವೇಣಿಯವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಬರಹ ಮತ್ತು ಕಾದಂಬರಿಗಳು ನಮ್ಮನ್ನು ನಿತ್ಯವೂ ಅವರನ್ನು ನೆನಪಿಸುತ್ತಲೆ ಇರುತ್ತವೆ. ಇವರು ಕಾದಂಬರಿ ಲೋಕದಲ್ಲಿ ಮಿನುಗುತಾರೆಯಾಗಿ ಮಿನುಗಿದರು ೨೦ ಕಾದಂಬರಿಗಳು ಮೂರು ಕಥಾ ಸಂಕಲನಗಳು ಇಷ್ಟು ಪುಸ್ತಕಗಳನ್ನ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದು ಅವರು ಕೇವಲ ೧೫ ವರ್ಷಗಳಲ್ಲಿ ಇದರಿಂದಲೇ ತಿಳಿಯಬಹುದು ಅವರು ಓದುಬರಹದಲ್ಲಿ ಅದೆಷ್ಟು ಆಸಕ್ತಿಯಿಂದ ಅಧ್ಯಯನದಲ್ಲಿ ತೊಡಗಿಕೊಂಡು ಬರೆಯುತ್ತಿದ್ದರು ಎಂಬುದು ತಿಳಿಯುತ್ತದೆ ಒಂದು ಬರಹದಲ್ಲಿಯೂ ಸಹ ಅವರು ಜಾಳ ಜಾಳವಾಗಿ ಬರೆಯದೆ ಗಂಭೀರ ಚಿಂತನೆಯಲ್ಲಿ ತೊಡಗಿಕೊಂಡು ಕಾದಂಬರಿಯಾಗಲಿ ಕಥಾ ಸಂಕಲನವಾಗಲಿ ಓದುತ್ತ ಹೋದಂತೆ ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ಓದಿಯೇ ಮುಂದಿನ ಕಾರ್ಯ ಮಾಡಬೇಕು ಎಂಬ ಮನಸ್ಸು ಓದುಗನಿಗೆ ಅನಿಸುತ್ತದೆ ಇವರ ಕಾದಂಬರಿಗಳು ಸಿನಿಮಾ ರಂಗಗಳಲ್ಲಿಯೂ ಪ್ರವೇಶಿಸಿ ಅಲ್ಲಿಯೂ ಸಹ ತಮ್ಮ ಹೆಸರನ್ನು ಶಾಶ್ವತವಾಗಿ ಇರುವಂತೆ ಮಾಡಿದ್ದು ಅವರ ಬರವಣಿಗೆಯ ತಾಕತ್ತು ತೋರಿಸುತ್ತದೆ. ೧೯೬೮ರಲ್ಲಿ ಹಣ್ಣೆಲೆ ಚಿಗುರಿದಾಗ ೧೯೭೧ರಲ್ಲಿ ಬೆಳ್ಳಿಮೋಡ ಮತ್ತು ಶರಪಂಜರ ಕಾದಂಬರಿಗಳು ಸಿನಿಮಾ ಲೋಕವನ್ನು ಪ್ರವೇಶಿಸಿ ಇಂದಿಗೂ ಸಹ ಆ ಚಿತ್ರಗಳು ಅದೆಷ್ಟು ಬಾರಿ ನೋಡಿದರು ಬೇಸರವೆನಿಸುವುದಿಲ್ಲ ಅಂತಹ ಪಾತ್ರಗಳನ್ನ ಸೃಷ್ಟಿಸಿ ಅವುಗಳಿಗೆ ಜೀವ ತುಂಬುವ ಬರವಣಿಗೆಯನ್ನು ಮಾಡಿದ ತ್ರಿವೇಣಿಯವರನ್ನು ಎಂದು ಮರೆಯಲು ಸಾಧ್ಯ. ಬೆಕ್ಕಿನ ಕಣ್ಣು ಕಾದಂಬರಿಯನ್ನು ಕನ್ನಡದ ಸಿನಿಮಾ ಮಾಡಬೇಕೆಂದು ಅಂದುಕೊAಡು ಬಹಳ ಆಸಕ್ತಿಯಿಂದ ಪ್ರತಿಯೊಂದು ಪಾತ್ರಕ್ಕೂ ಅರ್ಥಪೂರ್ಣ ಬದುಕನ್ನ ಕೊಟ್ಟಿದ್ದಾರೆ ಆದರೆ ಕಾರಣಾಂತರಗಳಿAದ ಆ ಕದಂಬರಿ ಮಲಯಾಳಂನಲ್ಲಿ ಪೋಚಕಣ್ಣಿ ಯಾಗಿ ಮಲಯಾಲಂ ಭಾಷೆಯಲ್ಲಿ ಚಿತ್ರಣಗೊಂಡು ಆ ಪ್ರದೇಶದಲ್ಲಿ ಸಾಕಷ್ಟು ಹೆಸರು ಮಾಡಿತು. ಅವರು ಹೋದರು ಅವರು ಸೃಷ್ಟಿಸಿದ ಕಾದಂಬರಿಯ ಪಾತ್ರಗಳು ಇಂದಿಗೂ ಜೀವಂತ ಎನ್ನುವುದಕ್ಕೆ ಚಿತ್ರಣಟಿ ಕಲ್ಪನಾ ಗಂಗಾಧರ ಡಾ ರಾಜ್ ಆರತಿ ಭಾರತಿ ಮುಂತಾದ ನಟನಟಿಯರು ಇಂದಿಗೂ ನಮ್ಮ ಕಣ್ಣ ಮುಂದೆ ಇರುತ್ತಾರೆ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಹುಟ್ಟಿದ ಇವರು ಕರ್ನಾಟಕ ಸ್ಟೇ ಅಲ್ಲವೇ ತಮಿಳುನಾಡು ಆಂಧ್ರ ಮಲಯಾಳಂ ಮುಂತಾದ ರಾಜ್ಯಗಳಲ್ಲಿಯೂ ಸಹ ಇವರ ಹೆಸರು ಇಂದಿಗೂ ಅಜರಾಮರ. ಶ್ರೀಮತಿ ಅನುಸೂಯ ಶಂಕರ್ ಇವರ ಪೂರ್ವದಲ್ಲಿ ಹೆಸರು ಸೆಪ್ಟೆಂಬರ್ ೧.೧೯೨೮ ಜನಿಸಿದ ಇವರು ಮುಂದೆ ಪ್ರವರ್ಧಮಾನಕ್ಕೆ ಬರುತ್ತ ಬರವಣಿಗೆಯಲ್ಲಿ ತೊಡಗಿಸಿ ಕೊಂಡು ತ್ರಿವೇಣಿಯಾಗಿ ಹೆಸರಿಸಿಕೊಂಡ ಇವರ ತಂದೆ ಬಿ ಎಂ ಕೃಷ್ಣಸ್ವಾಮಿ ತಾಯಿ ತಂಗಮ್ಮ. ಪ್ರಾರ್ಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಂಡ್ಯದಲ್ಲಿ ಮುಗಿಸಿ ನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಮನಶಾಸ್ತ್ರ ವಿಷಯದಲ್ಲಿ ಚಿನ್ನದ ಪದಕದೊಂದಿಗೆ ಬಿಎ ಪದವಿಯನ್ನು ಗಳಿಸಿಕೊಂಡು ಇವರು ಕನ್ನಡದ ಹಿರಿಯ ಕವಿ ಬಿಎಂಶ್ರೀ ಅವರ ಸಹೋದರನ ಪುತ್ರಿ ಬಿಎ ತರಗತಿಯಲ್ಲಿ ಮನಶಾಸ್ತ್ರ ವಿಷಯವನ್ನು ಆಯ್ಕೆ ಮಾಡಿಕೊಂಡು ಆಳವಾದ ಅಧ್ಯಯನದಲ್ಲಿ ತೊಡಗಿ ಚಿನ್ನದ ಪದಕವನ್ನು ತೆಗೆದುಕೊಂಡು ಅಷ್ಟೇ ಚಿನ್ನದಂತಹ ಪಾತ್ರಗಳನ್ನು ತನ್ನ ಕಾದಂಬರಿಗಳಲ್ಲಿ ಸೃಷ್ಟಿ ಮಾಡಿದ್ದು ತೆರವು ತೋರಿಸುವಂಥದ್ದು. ಇವರು ಬರವಣಿಗೆಯಲ್ಲಿ ತೊಡಗಿಸಿಕೊಂಡು ಸೃಷ್ಟಿ ಮಾಡಿದ ಕಾದಂಬರಿಗಳು ಕದೆಗಳಲ್ಲಿ ಬರುವ ಕಥೆ ಮತ್ತು ಪಾತ್ರಗಳು ನಮ್ಮ ನಡುವೆ ಇದ್ದ ಇದ್ದಾರೆ ಎನ್ನುವ oತೆ ಇಂದಿಗೂ ಅನಿಸದೆ ಇರದು. ಇವರು ಸೃಷ್ಟಿಸಿದ ಕಾದಂಬರಿಗಳು ಬೆಕ್ಕಿನ ಕಣ್ಣು ಭಾನು ಬೆಳಗಿತು ಹೂವು ಹಣ್ಣು ಬೆಳ್ಳಿಮೋಡ ಶರಪಂಜರ ಹಣ್ಣೆಲೆ ಚಿಗುರಿದಾಗ ಹೃದಯಗೀತೆ ಕಿಲುಗೊಂಬೆ ಅಪಜಯ ಅಪಸ್ವರ ತಾವರೆಯ ಕೊಳ ಮುಚ್ಚಿದ ಬಾಗಿಲು ಹಾಗೂ ಅವಳ ಮನೆ ಜೊತೆಗೆ ದೂರದ ಬೆಟ್ಟ ಕಾಶಿಯಾತ್ರೆ ಇಂತಹ ಅದ್ಭುತ ಕಾದಂಬರಿಗಳನ್ನು ಕನ್ನಡ ಸರಸ್ವತ ಲೋಕಕ್ಕೆ ಕೊಟ್ಟರು. ಆದರೆ ವಿಧಿಯ ಆಟ ಬೇರೆ ಇತ್ತೆಂದು ತರುತ್ತದೆ ಅವರು ಅವಳ ಮನೆ ಕಾದಂಬರಿಯೂ ಪೂರ್ಣಗೊಳ್ಳುವ ಮುನ್ನವೇ ಇಹಲೋಕವನ್ನ ತನ್ನ ಚಿಕ್ಕ ವಯಸ್ಸಿನಲ್ಲಿ ಅಂದರೆ ೩೫ನೇ ವಯಸ್ಸು(ಜುಲೈ ೨೯.೧೯೬೩)ಇದ್ದಾಗ ತೀರಿಕೊಂಡಿದ್ದು ಕನ್ನಡ ಕಾದಂಬರಿ ಲೋಕಕ್ಕೆ ದೊಡ್ಡ ಆಘಾತವೆ ಆಗಿತ್ತು. ಇವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರ ನಿರ್ದೇಶಕರು ನಟ ನಟಿಯರು ಸಾಹಿತ್ಯ ಪ್ರೇಮಿಯರು ಕಾದಂಬರಿ ಓದುಗರು ಅಪಾರ ಅಭಿಮಾನಿ ಬಂಧುಗಳು ಶೋಕದ ದುಃಖ ಸಾಗರದಲ್ಲಿ ಮುಳುಗಿದರು ಇಂತಹ ಅದ್ಭುತ ಲೇಖಕಿ ಇನ್ನೆಂದು ಬಂದಾರು ಎಂಬ ದೊಡ್ಡ ಚಿಂತೆ ಕಾಡು ತೊಡಗಿತು ಕನ್ನಡ. ಕರ್ನಾಟಕದ ಗ್ರಂಥಾಲಯಗಳಲ್ಲಿ ಮತ್ತು ಪುಸ್ತಕ ಮಳಿಗೆಗಳಲ್ಲಿ ಇವರು ಇಂದಿಗೂ ಜೀವಂತವಿದ್ದಾರೆ ಅವರು ಸೃಷ್ಟಿಸಿದ ಪಾತ್ರಗಳು ಇಂದಿಗೂ ನಮ್ಮೊಂದಿಗೆ ಮಾತನಾಡುತ್ತಲೇ ಇವೆ ಇಂತಹ ಮಹಾನ್ ಲೇಖಕಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಶುಭಕೋರೋಣ.
ಟ್ಯಾಗ್ಸ್:#Sedam#Karnataka
ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.

Ads