📅 ಮಂಗಳವಾರ, ಅಕ್ಟೋಬರ್ 6, 2026
Myna News Logo
ಮೈನಾ

ಸೇಡಂ

ನ್ಯೂಸ್

ಕನ್ನಡ ದಿನ ಪತ್ರಿಕೆ
Editor

ಪ್ರಧಾನ ಸಂಪಾದಕರು:

ಮಹಿಪಾಲರೆಡ್ಡಿ

Ads
Literature

ಭಾವಕೋಶ ತಾಕುವ ಅಂತಃಕರಣದ ನಾದವಿದೆ

ಡಾ. ಶೈಲಜಾ ಎನ್. ಬಾಗೇವಾಡಿ

ಡಾ. ಶೈಲಜಾ ಎನ್. ಬಾಗೇವಾಡಿ

ಪ್ರಾಧ್ಯಾಪಕರು

ಸೋಮವಾರ, ಆಗಸ್ಟ್ 10, 20262 ನಿಮಿಷ ಓದು4 ವೀಕ್ಷಣೆಗಳು
ಸುದ್ದಿ ಹಂಚಿಕೊಳ್ಳಿ:
ಭಾವಕೋಶ ತಾಕುವ ಅಂತಃಕರಣದ ನಾದವಿದೆ
ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಜಯರಾಮಚಾರಿ ಅವರು ರಚಿಸಿದ ಅವ್ವನ ಕುರಿತಾದ ಕೃತಿಯ ಶೀರ್ಷಿಕೆಯೆ ಆಕರ್ಷಕವಾಗಿದೆ. ಅವ್ವ ಎಂಬ ಪದದಲ್ಲಿ ಒಂದು ನವಿರಾದ ಭಾವವಿದೆ, ಎಲ್ಲರ ಭಾವಕೋಶವನ್ನು ತಾಕುವ ಅಂತಃಕರಣದ ನಾದವಿದೆ. ಅವಳನ್ನು ಪದಗಳಲ್ಲಿ ಕಟ್ಟಿಹಾಕಲು ಆಗದ ಅಕ್ಷರಾತೀತ ವ್ಯಕ್ತಿತ್ವ ಅವ್ವನದು. ಎಲ್ಲರಿಗೂ ಅವರ ಅವ್ವ ಮುಗಿಯದ ಮಹಾಕಾವ್ಯ. ಕನ್ನಡದ ಹಲವು ಸೃಜನಶೀಲ ಮನಸ್ಸುಗಳು ತಾಯಿ ಕುರಿತಾಗಿ ಬರೆದಿದ್ದಾರೆ, ಬರೆಯುತ್ತಿದ್ದಾರೆ ಮುಂದೆ ಕೂಡ ಬರೆಯುತ್ತಾರೆ. ಆದರೆ ಅವಳು ಮಾತ್ರ ಯಾರ ಲೆಕ್ಕಣಿಕೆಯ ತೆಕ್ಕೆಗು ಸಿಕ್ಕಲ್ಲ,ಸಿಗುವುದಿಲ್ಲ. ಅವಳನ್ನು ಪದಗಳಲ್ಲಿ ಅಕ್ಷರಗಳಲ್ಲಿ ಕಟ್ಟಿಹಾಕಲು ಸಾಧ್ಯವಾಗದ ಸಂಗತಿ. ಅವ್ವ ಎಂದರೆ ಅನನ್ಯ, ಅನಂತ, ಅವರ್ಣನೀಯ ಅನುಭೂತಿ. ಪಿ.ಲಂಕೇಶ್ ಕೂಡ ಅವರ ಅವ್ವನ ಕುರಿತಾಗಿ ಬರೆದ ಕೆಲವು ಸಾಲುಗಳು ಇಂತಿದೆ. "ನನ್ನವ್ವ ಬದುಕಿದ್ದು ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ; ಮೇಲೊಂದು ಸೂರು,ಅನ್ನ,ರೊಟ್ಟಿ, ಹಚಡಕ್ಕೆ; ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ". ಎಲ್ಲಾ ತಾಯಂದಿರ ಬಯಕೆಯು ಇದೆ ಆಗಿರುತ್ತದೆ. ಅವಳು ತನಗಾಗಿ ಬದುಕದೆ, ಮನೆ,ಮಕ್ಕಳು, ಮರ್ಯಾದೆ ಎಂದು ಇಡೀ ಬದುಕು ಒದ್ದಾಡುತ್ತಾ, ಕೆಲವೊಮ್ಮೆ ಹುಸಿ ತೋರಿಕೆಗಾಗಿ ಹೈರಾಣಾಗುವ ಹೆಣ್ಣು ಜೀವವದು. 'ನನ್ನವ್ವನ ಬಯೊಗ್ರಫಿ' ಬರೆದ ಲೇಖಕರಾದ ಜಯರಾಮಚಾರಿ ಯವರು ತನ್ನವ್ವನ ವ್ಯಕ್ತಿತ್ವವನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಹಲವು ಪ್ರತಿಭೆಯುಳ್ಳ ಇವರು ಮೆಟ್ರೋ ರೈಲ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಲೇಖಕ ತಮ್ಮ ತಾಯಿಯ ಅಂತಿಮ ದಿನಗಳನ್ನು ಹೇಳುತ್ತಾ ಅವಳ ಇಡೀ ಬದುಕಿನ ಚಿತ್ರಣ ನೀಡಿದ್ದಾರೆ. ಕ್ಯಾನ್ಸರ್ ಎಂಬ ರೋಗ ತಗುಲಿ ತಾಯಿ ಒದ್ದಾಡುವಾಗ ಲೇಖಕ ಅನುಭವಿಸಿದ ಸಂಕಟ,ನೋವು, ಹತಾಶೆ ಕೆಲವೊಮ್ಮೆ ಕೋಪ ಎಲ್ಲವನ್ನೂ ಹೇಳಿದ ರೀತಿ ಮಾತ್ರ ಯಾತನಾಮಯ. ಅವ್ವನ ಬದುಕಿನ ಘಟನಾವಳಿಗಳನ್ನು ಹಿನ್ನೋಟದಲ್ಲಿ ಹೇಳುತ್ತಾ,ಅವಳಲ್ಲಿನ ಮುಗ್ದತೆ, ಅಂತಃಕರಣ ಜೊತೆಗೆ ಕಾಯಕ ಜೀವಿಯಾದ ಅವಳಿಗೆ ಸಂಬAಧಗಳ ಬಗ್ಗೆ ಇದ್ದ ಕಕ್ಕುಲಾತಿ ಕುರಿತು ಸಹಜವಾಗಿ ಹಂಚಿಕೊAಡಿದ್ದಾರೆ. ಏಳು ಮಕ್ಕಳ ತಾಯಿಯಾಗಿ, ಮೊಮ್ಮಕ್ಕಳಿಗೆ ಅಜ್ಜಿಯಾಗಿ ಆಲದಮರದಂತಿದ್ದ ಅವ್ವ, ಜೀವನದ ಕೊನೆಯ ಘಳಿಗೆಯಲ್ಲಿ ನಿಸ್ಸಾಹಾಯಕಳಾಗಿ ಕಂಡಾಗ, ಆ ಸಂದರ್ಭ ಮನಮಿಡಿಯುವಂತಿದೆ. ಲೇಖಕರು ತಾಯಿಯ ರೋಗ, ಅದರ ಯಾತನೆ ಹೇಳುವ ಜೊತೆಗೆ ಅವಳ ಅಂತರAಗವನ್ನು, ಅವಳ ಬದುಕಿನ ಹಲವು ಸನ್ನಿವೇಶಗಳನ್ನು ದಾಖಲಿಸುವ ಮೂಲಕ ಅವ್ವನ ಬಯೋಗ್ರಫಿ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಓದುಗರ ಮನವನ್ನು ಮೀಟಿದ್ದಾರೆ.
ಟ್ಯಾಗ್ಸ್:#Sedam#Karnataka
ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.

Ads