Literature
ಕಗ್ಗ ದರ್ಶನ

ಡಾ. ಜಗನ್ನಾಥ ತರನಳ್ಳಿ
ಲೇಖಕ
ಶುಕ್ರವಾರ, ಸೆಪ್ಟೆಂಬರ್ 18, 20262 ನಿಮಿಷ ಓದು4 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
೧೪೭.ಮಾಯೆಯೊಮ್ಮೊಮ್ಮೆ ತೋರುವಳು
ಮಿಗಿಲಕ್ಕರೆಯ ಮಾಯಿಪಳು ಗಾಯಗಳನೀವಳಿಷ್ಟಗಳ ಮೈಯ ನೀಂ ಮರೆಯೆ ನೂಕುವುಳಾಗ ಪಾತಳಕೆ ಪ್ರೇಯಪೂತನಿಯವಳು ಮಂಕುತಿಮ್ಮ.
ಈ ಪದ್ಯದಲ್ಲಿ ಮಾಯೆಯ ಸ್ವರೂಪ ಮತ್ತು ಮನುಷ್ಯನ ಮೇಲೆ ಅದರ ಪ್ರಭಾವವನ್ನು ಅತ್ಯಂತ ಗಹನವಾಗಿ ತಿಳಿಸಲಾಗಿದೆ. ಮಾಯೆ ಮನುಷ್ಯನನ್ನು ಮೊದಲು ಸುಖ ಮತ್ತು ಆಕರ್ಷಣೆಯ ಮೂಲಕ ಸೆಳೆಯುತ್ತದೆ.ಅವನ ಆಸೆಗಳನ್ನು ಪೂರೈಸಿದಂತೆ ತೋರುತ್ತದೆ.ಆದರೆ ಅದೇ ಮಾಯೆ ಮುಂದೆ ಅವನಿಗೆ ದುಃಖವನ್ನುಂಟು ಮಾಡಿ, ಅವನ ವಿವೇಕವನ್ನು ಮರೆಮಾಡಿ,ಅಧ:ಪತನಕ್ಕೆ ಕಾರಣವಾಗಬಹುದು. ಆದ್ದರಿಂದ ಜೀವನದಲ್ಲಿ ಬರುವ ಸುಖ,ದುಃಖ,ಆಸೆ,ಮೋಹಗಳಿಗೆ ಅತಿಯಾಗಿ ಒಳಗಾಗದೆ, ವಿವೇಕದಿಂದ ಬದುಕಬೇಕು ಎಂಬುದು ಪದ್ಯದ ಭಾವ."ಮಾಯೆಯೊಮ್ಮೊಮ್ಮೆ ತೋರುವಳು ಮಿಗಿಲಕ್ಕರೆಯ"- ಮಾಯೆಯು ಕೆಲವೊಮ್ಮೆ ಅತ್ಯಂತ ಆಕರ್ಷಕವಾದ, ಮನಸ್ಸಿಗೆ ಮುದ ನೀಡುವ ರೂಪದಲ್ಲಿ ನಮ್ಮ ಮುಂದೆ ಕಾಣಿಸಿಕೊಳ್ಳುತ್ತಾಳೆ.ಸುಖ,ಸಂಪತ್ತು,ಅಧಿಕಾರ,ಪ್ರೀತಿ, ಕೀರ್ತಿ ಮುಂತಾದವುಗಳ ಮೂಲಕ ಮನುಷ್ಯನನ್ನು ಸೆಳೆಯುತ್ತಾಳೆ."ಮಾಯಿಪಳು ಗಾಯಗಳನೀವಳಿಷ್ಟಗಳ"- ಆದರೆ ಆಕರ್ಷಣೆಯ ಹಿಂದೆ ನೋವು ಮತ್ತು ಗಾಯಗಳು ಇರುತ್ತವೆ.ನಾವು ಬಹಳವಾಗಿ ಬಯಸಿದ ವಸ್ತುಗಳೇ ಕೆಲವೊಮ್ಮೆ ನಮಗೆ ದುಃಖ, ನಿರಾಸೆ ಮತ್ತು ಮಾನಸಿಕ ನೋವನ್ನು ಉಂಟುಮಾಡುತ್ತವೆ."ಮೈಯ ನೀಂ ಮರೆಯೆ ನೂಕುವಳಾಗ ಪಾತಳಕೆ"-ಮನುಷ್ಯನು ತನ್ನ ನಿಜ ಸ್ವರೂಪವನ್ನು, ಜೀವನದ ಸತ್ಯವನ್ನು ಮರೆತು ಮಾಯೆಯ ಹಿಂದೆ ಹೋದಾಗ ಅವನನ್ನು ಅಧ:ಪತನದ ಕಡೆಗೆ ಕೊಂಡುಯುತ್ತಾಳ.ಅAದರೆ ಆಸೆ,ಮೋಹಗಳಲ್ಲಿ ಸಿಲುಕಿದರೆ ವಿವೇಕ ಕಳೆದುಕೊಳ್ಳುವ ಅಪಾಯವಿದೆ ಎಂಬುದು ಸೂಚಿಸಲಾಗಿದೆ. "ಪ್ರೇಯಪೂತನಿಯವಳು ಮಂಕುತಿಮ್ಮ"-ಮಾಯೆಯು ಹೊರನೋಟಕ್ಕೆ ಬಹಳ ಪ್ರಿಯವಾದವಳಂತೆ, ಸುಂದರವಾದ ಮೋಹಿನಿಯಂತೆ ಕಾಣುತ್ತಾಳೆ. ಆದರೆ ಅವಳ ನಿಜ ಸ್ವರೂಪದಲ್ಲಿ ಅಪಾಯ ಅಡಗಿದೆ.ಆದ್ದರಿಂದ ಮನುಷ್ಯನು'ಪ್ರೇಯ'(ತಕ್ಷಣ ಇಷ್ಟವಾಗುವುದು) ಮತ್ತು'ಶ್ರೇಯ' (ನಿಜವಾದ ಒಳಿತನ್ನು ನೀಡುವುದು) ಇವೆರಡರ ವ್ಯತ್ಯಾಸವನ್ನು ಅರಿತುಕೊಳ್ಳಬೇಕು ಎಂಬುದು ಇಲ್ಲಿಯ ಸೂಚನೆಯಾಗಿದೆ.ಈ ಪದ್ಯದಲ್ಲಿ ಮಾಯೆ ಎಂದರೆ ಕೇವಲ ಭ್ರಮೆಯಲ್ಲ; ಮನುಷ್ಯನನ್ನು ಬಂಧಿಸುವ ಆಸೆ,ಮೋಹ,ಬೋಗ ಮತ್ತು ಅಹಂಕಾರಗಳ ಸಮೂಹ ಎಂದು ಗ್ರಹಿಸಬಹುದು. ಮನುಷ್ಯನಿಗೆ ಇಷ್ಟವಾದದ್ದೆಲ್ಲವೂ ಅವನಿಗೆ ಹಿತಕರವಾಗಿರುವುದಿಲ್ಲ. ಇಷ್ಟವಾದದ್ದನ್ನು ಪಡೆಯುವುದಕ್ಕಿಂತ, ನಿಜವಾಗಿ ಒಳಿತಾದದ್ದನ್ನು ಆಯ್ಕೆ ಮಾಡುವುದು ಜ್ಞಾನವಾಗುತ್ತದೆ.ಮೋಹವು ಮೊದಲು ಮಧುರವಾಗಿ ಕಾಣುತ್ತದೆ,ಅದರ ಹಿಂದೆ ದುಃಖವು ಅಡಗಿರಬಹುದು. ಆದ್ದರಿಂದ ಇಷ್ಟದ ಹಿಂದೆ ಓಡುವುದಕ್ಕಿಂತ,ವಿವೇಕದ ಮಾರ್ಗವನ್ನು ಹಿಡಿಯಬೇಕು ಎನ್ನುವುದಾಗಿದೆ.ಇದನ್ನು ಭಗವದ್ಗೀತೆಯ ನೆಲೆಯಲ್ಲಿ ನೋಡಿದರೂ,"ಧ್ಯಾಯತೋ ವಿಷಯಾನ್ ಪುಂಸ:ಸAಗಸ್ತೇಷೂಪಜಾಯತೇ ಸಂಗಾತ್ಸAಜಾಯತೆ ಕಾಮ: ಕಾಮೋತ್ಕ್ರೋಧೋಭಿಜಾಯತೇ"ಎಂದರೆ,ವಿಷಯಗಳನ್ನು ನಿರಂತರವಾಗಿ ಚಿಂತಿಸುವುದರಿAದ ಅವುಗಳ ಮೇಲೆ ಆಸಕ್ತಿ ಹುಟ್ಟುತ್ತದೆ. ಆಸಕ್ತಿಯಿಂದ ಕಾಮನೆ, ಕಾಮನೆಯಿಂದ ಕ್ರೋಧ, ಕ್ರೋಧದಿಂದ ಮೋಹ,ಮೋಹದಿಂದ ಸ್ಮೃತಿ ಭ್ರಂಶ,ನAತರ ಬುದ್ಧಿನಾಶವಾಗಿ ಮನುಷ್ಯನ ಪತನವಾಗುತ್ತದೆ.ಮಾಯೆಯ ಆಕರ್ಷಣೆಗೆ ಒಳಗಾಗಿ ತನ್ನನ್ನು ತಾನು ಮರೆಯಬಾರದು. ಮಾಯೆಯನ್ನು ದಾಟಲು ಭಗವಂತನ ಶರಣಾಗತಿ ಮತ್ತು ವಿವೇಕ ಅಗತ್ಯ ಎನ್ನುವುದು ಗೀತೆಯಲ್ಲಿಯೂ ಹೇಳಲಾಗಿದೆ.ಡಿವಿಜಿ ಅವರು ಈ ಪದ್ಯದಲ್ಲಿ ಮಾಯೆಯ ದ್ವಂದ್ವ ಸ್ವರೂಪವನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.ಮಾಯೆ ಮನುಷ್ಯನಿಗೆ ಮೊದಲಿಗೆ ಸುಂದರವಾಗಿ,ಪ್ರಿಯವಾಗಿ, ಆಕರ್ಷಕವಾಗಿ ಕಾಣಿಸುತ್ತದೆ. ಆದರೆ ಅದರ ಹಿಂದೆ ದುಃಖ, ಮೋಹ ಮತ್ತು ಅಧ:ಪತನದ ಸಾಧ್ಯತೆಯೂ ಅಡಗಿರುತ್ತದೆ.'ಪ್ರೇಯ'ಮತ್ತು 'ಶ್ರೇಯ'ಗಳ ನಡುವಿನ ಸಂಘರ್ಷವನ್ನು ಇಲ್ಲಿ ಸೂಕ್ಷ್ಮವಾಗಿ ತಿಳಿಸಲಾಗಿದೆ. ತಕ್ಷಣ ಸುಖ ಕೊಡುವುದು ಪ್ರೇಯ.ಆದರೆ ದೀರ್ಘಕಾಲದ ಒಳಿತನ್ನು ನೀಡುವುದು ಶ್ರೇಯ. ಮಾಯೆ ಸಾಮಾನ್ಯವಾಗಿ ಪ್ರೇಯದ ರೂಪದಲ್ಲಿ ಬರುತ್ತದೆ. ಜ್ಞಾನಿ ಮಾತ್ರ ಅದರ ಹಿಂದೆ ಅಡಗಿರುವ ಪರಿಣಾಮವನ್ನು ಗುರುತಿಸಿ ಶ್ರೇಯದ ಮಾರ್ಗವನ್ನು ಆರಿಸುತ್ತಾನೆ.ಮಾಯೆಯನ್ನು ಸ್ತ್ರೀ ರೂಪದಲ್ಲಿ ಚಿತ್ರಿಸಿರುವುದು ಕಗ್ಗದ ಪ್ರಮುಖ ಕಾವ್ಯ ತಂತ್ರವಾಗಿದೆ.ಮಾಯೆ, ಗಾಯ,ಇಷ್ಟ,ಮರೆಯು, ಪಾತಾಳ ಎಂಬ ಭಾವಕ್ರಮದಲ್ಲಿ ಮನುಷ್ಯನ ಪತನದ ಚಿತ್ರಣ ದೊರೆಯುತ್ತದೆ.ಸರಳವಾದ ಪದಗಳಲ್ಲಿ ಗಹನವಾದ ವೇದಾಂತ ತತ್ವವನ್ನು ಹೇಳಿರುವುದು ಡಿವಿಜಿಯವರ ಕಾವ್ಯ ಪ್ರತಿಭೆಯ ವಿಶೇಷತೆ. ಹೊರಗಿನ ಸೌಂದರ್ಯ ಮತ್ತು ಒಳಗಿನ ಅಪಾಯದ ವಿರೋಧಾಬಾಸ ಕಗ್ಗಕ್ಕೆ ಹೆಚ್ಚಿನ ಪರಿಣಾಮವನ್ನು ನೀಡುತ್ತದೆ.ಇದರಲ್ಲಿ ಮಾಯೆಯನ್ನು ಸಂಪೂರ್ಣವಾಗಿ ನಿರಾಕರಿಸುವದಿಲ್ಲ;ಬದಲಾಗಿ ಮಾಯೆ ಸ್ವರೂಪವನ್ನು ಅರಿತು, ಅದಕ್ಕೆ ದಾಸರಾಗದೇ ಬದುಕಬೇಕು ಎಂದು ಎಚ್ಚರಿಸಲಾಗಿದೆ.ಆಸೆ, ಮೋಹ ಮತ್ತು ಭೋಗಗಳು ಜೀವನದ ಸಹಜ ಭಾಗಗಳಾದರೂ ಅವುಗಳ ನಿಯಂತ್ರಣ ತಪ್ಪಿದಾಗ ಮನುಷ್ಯನ ಸ್ವಾತಂತ್ರ‍್ಯ ಮತ್ತು ವಿವೇಕ ನಾಶವಾಗುತ್ತದೆ. ಆದ್ದರಿಂದ ಮಾಯೆಯು ಸುಂದರವಾಗಿ ಕಾಣಬಹುದು, ಆದರೆ ಅದರ ಮೋಹಕ್ಕೆ ಒಳಗಾಗಿ ಆತ್ಮ ವಿಶ್ಮೃತಿ ಆಗಬಾರದು.ವಿವೇಕದಿಂದ 'ಪ್ರೇಯ'ವನ್ನು ಮೀರಿ ಶ್ರೇಯವನ್ನು ಆರಿಸುವುದೇ ಸಾರ್ಥಕ ಜೀವನವಾಗುತ್ತದೆ ಎಂಬ ಸಂದೇಶವನ್ನು ಈ ಕಗ್ಗದ ಮೂಲಕ ತಿಳಿಸಲಾಗಿದೆ.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads