Column
ಸುಗಮ ಸಂಗೀತದ ಕಾಳಿಂಗರಾಯರನ್ನು ನೆನೆಯುತ್ತ

ಕಿರಣ್ ಪಾಟೀಲ
ಲೇಖಕರು - ಗಾಯಕರು
ಶನಿವಾರ, ಸೆಪ್ಟೆಂಬರ್ 19, 20262 ನಿಮಿಷ ಓದು4 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಅಂತಿAತ ಹೆಣ್ಣು ನೀನಲ್ಲ ನಿನ್ನಂತ ಹೆಣ್ಣು ಇಲ್ಲಿಲ್ಲ ಎಂದು ಶುರುವಾಗುವ ಮೈಸೂರು ಮಲ್ಲಿಗೆಯ ಕವಿ ಕೆ ಎಸ್ ನರಸಿಂಹ ಸ್ವಾಮಿ ಅವರ ರಚನೆಯ ಹಾಡನ್ನು ಹಾಡಿರುವ ಗಾಯಕ ಪಿ ಕಾಳಿಂಗರಾವ್.
ಕನ್ನಡದ ಕೋಗಿಲೆ ಪಂಡೇಶ್ವರ ಕಾಳಿoಗರಾವ್ ಅವರೆ ಪಿ ಕಾಳಿಂಗರಾವ್. (೧೯೧೪-೧೯೮೧)ಇಪ್ಪತ್ತನೇ ಶತಮಾನ ಕಂಡ ಮಹಾನ್ ಸಂಗೀತಗಾರರಲ್ಲಿ ಇವರು ಇವರು ಹುಟ್ಟಿದ್ದು ೧೯೧೩ ನೇಯ ಆಗಸ್ಟ್ ೩೧ ರಂದು ದಕ್ಷಿಣ ಕನ್ನಡ ಜಿಲ್ಲೆಯ ಆರೂರಿನಲ್ಲಿ. ಇವರ ತಂದೆಯವರು ಯಕ್ಷ ಗಾಯನದಲ್ಲಿ ದೊಡ್ಡ ಹೆಸರು ಮಾಡಿದ್ದರು ಅವರೆ ಗೆಜ್ಜೆ ಪುಟ್ಟಯ್ಯ ಎಂದೆ ಕರೆಯಲ್ಪಡುತ್ತಿದ್ದರು, ತಾಯಿ ನಾಗಮ್ಮ ಮಗ ಹುಟ್ಟಿದ ಸಂತೋಸದಲ್ಲಿ ಅಪ್ಪ ಅಮ್ಮ ಬಲು ಖುಷಿ ಪಟ್ಟು ಮುಂದೆ ಇವನು ನಮ್ಮ ಹೆಸರನ್ನು ತರುವವನಾಗುತ್ತಾನೆ ಎಂದು ಅನಿಸಿತ್ತಂತೆ ಗೆಜ್ಜೆ ಪುಟ್ಟಯ್ಯರಿಗೆ, ತಾಯಿ ನಾಗಮ್ಮ ಮಗ ಹುಟ್ಟಿದಾಗ ತಮ್ಮ ಮನೆಯ ದೇವರಾದ ಸುಬ್ರಮಣ್ಯ ಆಗಿದ್ದರಿಂದ ಇವರಿಗೆ ಸುಬ್ಬರಾಯ ಶ್ಯಾನುಭೋಗ ಎಂದು ನಾಮ ಕರಣ ಮಾಡಿದರು ಆದರೆ ಅದು ಮುಂದೆ ಕಾಳಿಂಗ ಶರ್ಮಾ ಆಗಿ ಮುಂದೆ ಕಾಳಿಂಗರಾವ್ ಎಂದು ಶಾಶ್ವತವಾಗಿ ಬದಲಾಯಿತು ಅವರೆ ಮುಂದೆ ಹಾಡುತ್ತ ಹಾಡುತ್ತ ಚಲನ ಚಿತ್ರ ಗೀತೆಗಳಿಗೆ ಧ್ವನಿಕೊಡುತ್ತ ಭಾವಗೀತೆಗಳಿಗೆ ಭಾವನೆ ತುಂಬಿ ಹಾಡಿ ಪಿ ಕಾಳಿಂಗರಾವ್ ಎಂದೆ ಪ್ರಸಿದ್ದಿ ಹೊಂದಿದರು.
ಇವರ ಬಾಲ್ಯ ಜೀವನ ಆರಂಭದ ಶಿಕ್ಷಣ ಅವರ ಸೋದರ ಮಾವನ ಊರು ಸುರಾಲ್ ದಲ್ಲಿ ಸೋದರಮಾವ ಮಂಜಯ್ಯ ಅವರು ಶಾಸ್ತ್ರಿಯ ಸಂಗೀತದಲ್ಲಿ ಆಗಿನ ಕಾಲದಲ್ಲಿ ಹೆಸರು ಮಾಡಿದ್ದರು. ಅಲ್ಲದೆ ಬಹಳ ವಿದ್ವಾಂಸರು ಆಗಿದ್ದರು.
ಹಾಗಾಗಿ ಕಾಳಿಂಗ ರಾಯರಿಗೆ ಸಂಗೀತದ ಬಗ್ಗೆ ತುಂಬಾ ಆಸಕ್ತಿ ಬಂದಿತು, ಅಲ್ಲದೆ ಜೊತೆಗೆ ಅಭಿನಯಕುಡಾ ಕಲಿತರು. ಅಂತೇಲೆ ಅವರು ಎರಡನೇಯ ತರಗತಿ ಇದ್ದಾಗಲೇ ಚಂದ್ರಹಾಸ ನಾಟಕದಲ್ಲಿ ಅಭಿನಯಿಸಿ ಬಹುಮಾನ ಪಡೆದಿದ್ದರು. ಬಾಲಕನ ಇಂತಹ ಅದ್ಬುತ ಪ್ರತಿಭೆ ಕಂಡ ಮಂಗಳೂರಿನ ಅಂಬಾ ಪ್ರಸಾದಿತಾ ನಾಟಕ ಮಂಡಳಿಯ ಮುಂಡಾಜೆ ರಂಗನಾಥ ಭಟ್ಟರು ಕಾಲಿಂಗ ರಾಯರ ತಾಯಿ ನಾಗಮ್ಮನವರನ್ನು ಕೇಳಿ ಮನ ವಲಿಸಿ ತಮ್ಮ ನಾಟಕ ಕಂಪನಿಗೆ ಸೇರಿದಿಕೊಂಡರು.
ಕಾಲ ಜಾರಿದಂತೆ ಮನ ಪಕ್ವಾ ಆಗುತ್ತಾ ಸಾಗಿತು ಪಾತ್ರದಿಂದ ಪಾತ್ರಕ್ಕೆ ಸುಧಾರಣೆ ಕಂಡ ಭಟ್ಟರು ಇವರಿಗೆ ಸ್ತ್ರೀ ಪಾತ್ರ ಏಕೆ ಕೊಡಬಾರದು ಎಂದು ಅನಿಸಿ ಹೆಣ್ಣು ಪಾತ್ರ ಕೊಟ್ಟರು ಅಲ್ಲಿಯೂ ಇವರು ತುಂಬಾ ಹೆಸರು ಮಾಡಿದರು. ಬರು ಬರುತ್ತ ಅಂಬಾ ಪ್ರಸಾದಿತಾ ನಾಟಕ ಕಂಪನಿ ಉತ್ತರ ಕರ್ನಾಟಕದಲ್ಲಿ ಮುಚ್ಚುವ ಪ್ರಸಂಗ ಬಂದಾಗ ಇದೆ ಕಾಲಿಂಗರಾಯರು ಆ ನಾಟಕ ಕಂಪನಿಯ ಜವಾಬ್ದಾರಿ ಹೊತ್ತು ಅವರದೇ ಮುಂದಾಳತ್ವದಲ್ಲಿ ರಾಯರ ಸೊಸೆ ನಾಟಕವನ್ನು ಬೆಂಗಳೂರಿನಲ್ಲಿ ಆಡಿಸಿದರು. ಈ ನಾಟಕದಲ್ಲಿ ಇವರೆ ನಾಯಕ ನಟನಾಗಿ ಅಭಿನಯಿಸಿದರು ಆ ನಾಟಕ ಬಹು ಕಾಲ ನಡೆಯದೆ ನಿಂತಿತು. ಇದು ಏಕೋ ನನಗೆ ಸರಿ ಬರದು ಎಂದು ಅರಿತು ಕೊಂಡು ತಮ್ಮ ಅಭಿನಯ ಕಲೆಯನ್ನು ಮುಖಕ್ಕೆ ಅಚ್ಚುತ್ತಿದ್ದ ಬಣ್ಣವನ್ನು ಅಳಿಸಿ ಸಂಗೀತದ ಭಾವ ಲೋಕದ ಪಯಣವನ್ನು ಆರಂಭಿಸಿದರು.
ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಎಂಬ ಹಾಡನ್ನು ಹಾಡಿ ಪ್ರಸಿದ್ದಿ ಪಡೆಯುತ್ತಾ ಇವರ ಪಯಣ ಸಾಗಿತು. ತಮ್ಮ ಹದಿನಾರನೇಯ ವಯಸ್ಸಿನಲ್ಲಿ ಶಿವಮೊಗ್ಗದಲ್ಲಿ ತಮ್ಮ ಮೊದಲ ಸಂಗೀತ ಕಚೇರಿಯನ್ನು ನಡೆಸಿಕೊಟ್ಟರು. ಅಲ್ಲದೆ ನಾಟಕ ರತ್ನ ಎಂದೆ ಹೆಸರು ಗಳಿಸಿದ್ದ ಗುಬ್ಬಿ ವೀರಣ್ಣ ಅವರ ನಾಟಕ ಧಶಾವತಾರ ಎಂಬ ನಾಟಕಕ್ಕೆ ಹಿನ್ನೆಲೆ ಸಂಗೀತ ನೀಡಿ ಹೆಸರು ಘಳಿಸಿದರು. ಇವರ ಸಂಗೀತ ಪಯಣ ಮುಂದೆ ಮುಂದೆ ಸಾಗಿ ನಂತರ ಮದರಾಸಿನ ದಕ್ಷಿಣ ಭಾರತದ ಹಿಂದಿ ಪ್ರಚಾರ ಸಭೆಯ ಸಂಗೀತ ವಿಭಾಗದ ಪ್ರಾಚಾರ್ಯರಾಗಿದ್ದರು , ಇವರಲ್ಲಿಗೆ ಕಲಿಯಲು ಬಂದ ಉತ್ತರ ಭಾರತದ ಸೋಹನ ಕುಮಾರಿ ಮತ್ತು ಮೋಹನ ಕುಮಾರಿ. ಇವರು ಸುಶ್ರಾವ್ಯವಾಗಿ ಹಾಡಲು ಕಲಿತರು. ಮುಂದೆ ಅ ನ ಕೃ ಅವರ ಪ್ರೇರಣೆಯoತೆ ಶಾಸ್ತ್ರಿಯ ಸಂಗೀತಕ್ಕೆ ಸಲ್ಪು ಬ್ರೇಕ್ ಕೊಟ್ಟುಸಾಮಾನ್ಯ ಜನರಿಗೂ ತಿಳಿಯುವ ಹಾಗೂ ಅವರು ಹಾಡಲು ಬರುವಂತಹ ಜನಪ್ರಿಯ ಜಾನಪದ ಭಾವಗೀತೆಗಳಿಗೆ ಸಂಗೀತ ನಿರ್ದೇಶನ ಕೊಟ್ಟು ಅಲ್ಲಿಯೂ ಯಶಶ್ವಿ ತಂದುಕೊಟ್ಟರು.
ಇವರ ಮೂಡಲ ಕುಣಿಗೇರಿ ಕೆರೆ ಹಾಡು ಸಾಕಷ್ಟು ಹಿಟ್ ಆಗಿತು. ಹೀಗೆ ನವ್ಯ ಶೈಲಿಯಲ್ಲಿ ಹಾಡುಗಳನ್ನು ಹಾಡುತ್ತ ಸಾಗಿದ ಇವರ ಸಂಗೀತ ಪಯಣ ಜೋರಾಗಿ ಸಾಗಿತು ಸೋಹನ ಮತ್ತು ಮೋಹನ್ ಕುಮಾರಿ ಜೊತೆಗೂಡಿ ದೇಶನ ರಾಜ್ಯದ ನಾನಾ ಕಡೆ ಸಂಗೀತ ಕಾರ್ಯಕ್ರಮ ಕೊಟ್ಟು ಬಹಳೆ ಪ್ರಸಿದ್ದಿ ಪಡೆದರು. ಹೀಗೆ ಅತಿ ಸಲ್ಪ ಸಮಯದಲ್ಲಿ ಇವರ ಹಾಡಿನ ಮೋಡಿಯ ಧ್ವನಿ ಚಲನ ಚಿತ್ರದತ್ತ ಗಮನ ಸೆಳೆದು ಕನ್ನಡ ಪ್ರೇಮ ಸಾಗರ ಚಿತ್ರಕ್ಕೆ ಮೊದಲ ಸಂಗೀತ ನೀಡಿದ ಸಿನೆಮಾ ಆಯಿತು. ಆರ್ ನಾಗೇಂದ್ರ ರಾಯರ ವಸಂತ ಸೇನಾ ಸೇರಿದಂತೆ ಶ್ರೀ ಕೃಷ್ಣಾ ಲೀಲಾ ಭಕ್ತ ರಾಮದಾಸ ಕೈವಾರ ಮಹಾತ್ಮೆ ಇನ್ನು ಮುಂತಾದ ಚಿತ್ರಗಳಿಗೆ ತಮ್ಮ ಸಂಗೀತ ಸುದೆಯಾ ರಸದೌತಣ ಉಣಬಡಿಸಿದರು.
ಕಲ್ಯಾಣ್ ಕುಮಾರ ನಟನೆಯ ನಟಸೆಖರ ಚಿತ್ರಕ್ಕೆ ಸಂಗೀತ ಇವರದ್ದೇ. ಹೀಗೆ ಪ್ರಸಿದ್ದಿ ಪಡೆಯುತ್ತಾ ಸಾಗಿದ ಜನಪ್ರಿಯತೆ ಮದ್ದೆ ಬಾರಕೂರಿನ ಮೀನಾಕ್ಷಿಯನ್ನು ಕೈ ಹಿಡಿದು ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದರು. ನಾಲ್ವರು ಮಕ್ಕಳು. ಮೊದಲನೆಯವಳು ಪ್ರೇಮಾ ನಂತರ ಮೂರೂ ಮಕ್ಕಳು ಗಂಡು ಶರತ್ ವಸಂತ ಹಾಗೂ ಸಂತೋಷ.ಹಾಡುವುದಿರಲಿ
ಓದಲು ಕಷ್ಟ ಎಸಿದ್ದ ಜಿ ಪಿ ರಾಜರತ್ಮo ಅವರ ರತ್ನನ ಪದಗಳನ್ನು ಸೊಗಸಾಗಿ ಹಾಡಿ ನಾಡಿನದ್ಯoತ ಜನಪ್ರಿಯ ಗೊಳಿಸಿದ್ದು ಇದೆ ಕಾಳಿಂಗರಾಯರು.
ಕೇವಲ ಎರಡನೆಯ ತರಗತಿ ಓದಿದ್ದ ಇವರನ್ನು ಸೊಗಸುಗಾರನನ್ನಾಗಿ ಮಾಡಿದ್ದು ಜಯಲಕ್ಮಿ ಇಂಗ್ಲಿಷ್ ಮತ್ತು ಇತರೆ ಭಾಷೆ ಕಲಿತಿದ್ದು ಇವರಿಂದಲೇ. ನಂತರ ಜೀವನ ಸೊಗಸು ಹಾಗೂ ಕುಟುಂಬ ನಿರ್ವಹಣೆ ಮಾಡಿಕೊಳ್ಳಲು ಕಲಿಸಿದ್ದು ಗುಬ್ಬಿ ನಾಟಕ ಕಂಪನಿಯ ಸ್ವರ್ಣಮ್ಮ.
ಎಂತಹ ಸಮಾರಂಭವೇ ಇರಲಿ ಕುಳಿತು ಹಾಡಿದವರೆ ಅಲ್ಲ ನಿಂತುಕೊAಡೆ ಹಾಡುತ್ತಿದ್ದರು. ಇದ್ದಾಗ ಕೊಡಿಗೈ ದಾನಿಯಾಗಿ ಬಾಳಿದ ಇವರುಕಷ್ಟ ಅಂತ ಬಂದವರಿಗೆ ಹಾಗೆ ಕಳಿಸಿದವರಲ್ಲ ಒಬ್ಬ ಭಿಕ್ಷುಕನ್ನು ನೋಡಿ ಅವನು ಬರಿ ಮೈಲಿ ಇದ್ದದ್ದನ್ನೂ ನೋಡಿ ತಾವು ಹಾಕಿದ ಅಂಗಿಯನ್ನೇ ಬಿಚ್ಚಿಕೋಟ್ಟು ತಾವು ಬರಿ ಮೈಲಿ ಇರುತ್ತಿದ್ದರು,ಕೊನೇಕಾಲದಲ್ಲಿ ಬಹಳ ಸಂಕಷ್ಟ ಜೀವನ ನಡೆಸಿದರು. ೬೭ ವಸಂತಗಳನ್ನು ಕಂಡು ೨೧.೦೯.೧೯೮೧ ರಂದು ಕೊನೆ ಉಸಿರನ್ನು ಎಳೆದರು. ಭೌತಿಕವಾಗಿ ಇವರು ಇಲ್ಲದೆ ಇರಬಹುದು ಇವರ ಕಂಚಿನ ಕಂಠದಿAದ ಇಂದಿಗೂ ನಮ್ಮೊಂದಿಗಿದ್ದಾರೆ.ಆಗಸ್ಟ್ ೩೧ ಇವರ ಜನ್ಮ ದಿನ ಇವರ ಕಂಠದ ಹಾಡುಗಳನ್ನು ಕೇಳುತ್ತ ಅಷ್ಟೆ ಖುಷಿ ಖಿಷಿಯಿಂದ ಆಚಸಿದೆವು.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads