📅 ಮಂಗಳವಾರ, ಅಕ್ಟೋಬರ್ 6, 2026
Myna News Logo
ಮೈನಾ

ಸೇಡಂ

ನ್ಯೂಸ್

ಕನ್ನಡ ದಿನ ಪತ್ರಿಕೆ
Editor

ಪ್ರಧಾನ ಸಂಪಾದಕರು:

ಮಹಿಪಾಲರೆಡ್ಡಿ

Ads
Kalaburagi

ಯುಪಿಎ ಪಾವತಿಗೆ ಶುಲ್ಕ: ಮುಖ್ಯಮಂತ್ರಿಗಳಿಂದ ಬ್ಯಾಡ್ ಸರ್ಟಿಫಿಕೇಟ್..!

ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಶನಿವಾರ, ಸೆಪ್ಟೆಂಬರ್ 19, 20262 ನಿಮಿಷ ಓದು4 ವೀಕ್ಷಣೆಗಳು
ಸುದ್ದಿ ಹಂಚಿಕೊಳ್ಳಿ:
ಯುಪಿಎ ಪಾವತಿಗೆ ಶುಲ್ಕ: ಮುಖ್ಯಮಂತ್ರಿಗಳಿಂದ ಬ್ಯಾಡ್ ಸರ್ಟಿಫಿಕೇಟ್..!
ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಕಲಬುರ್ಗಿ, ಸೆ.೧೭- ಯುಪಿಐ ಪಾವತಿಗೆ ವರ್ತಕರ ಮೇಲೆ ಶುಲ್ಕ ವಿಧಿಸಿರುವ ಕೇಂದ್ರ ಸರ್ಕಾರ ಪಿಕ್ ಪಾಕೆಟ್ ಮಾಡುತ್ತಿದೆ. ಶಿಕ್ಷಕರಿಗೆ ಟಿಆರ್., ಎಂಜಿನಿಯರ್‌ಗಳಿಗೆ ಇಆರ್., ಗೌರವಯುತ ಪದನಾಮ ನೀಡಿರುವಂತೆ ಕೇಂದ್ರ ಸರ್ಕಾರದ ಎಲ್ಲ ಸಚಿವರಿಗೂ ಪಿಕ್ ಪಾಕೆಟ್ ನಲ್ಲಿ ಪಿಎಚ್‌ಡಿ ನೀಡಬೇಕಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಲೇವಡಿ ಮಾಡಿದರು. ನಗರದ ಐವಾನ್ ಶಾಹಿ ಅತಿಥಿಗೃಹದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮೆಲ್ಲ ವರ್ತಕರು ಈಗ ಕೇಂದ್ರ ವಿಧಿಸಲು ಹೊರಟಿರುವ ಯುಪಿಐ ಶುಲ್ಕದ ಭಾರವನ್ನ ಗ್ರಾಹಕರ ಮೇಲೆ ಹಾಕುತ್ತಾರೆ. ಇದು ಕೇಂದ್ರ ಸರ್ಕಾರದಿಂದ ಜನ ಸಾಮಾನ್ಯರ ಹೊಸ ಪಿಕ್ ಪಾಕೆಟ್. ನಾನು ಇದನ್ನು ಖಂಡಿಸುತ್ತೇನೆ. ಯಪಿಐ ಶುಲ್ಕ ಜಾರಿಯ ವಿರುದ್ದ ವಿರುದ್ಧ ಪ್ರತಿಭಟನೆ ಮಾಡಲೇ ಬೇಕಾಗುತ್ತದೆ. ಹೊರಗಿನ ದೇಶದ ವರ್ತಕರಿಗೆ ಅನುಕೂಲ ಮಾಡಿಕೊಡಲು ಇಂಥ ಘೋರ ತೀರ್ಮಾನ ಮಾಡಲಾಗಿದೆ. ಇದನ್ನು ವಾಪಸ್ಸು ಪಡೆದು ಮೊದಲಿನ ಸ್ಥಿತಿ ತರಲು ಒತ್ತಾಯಿಸುತ್ತೇವೆ ಎಂದರು. ಯಾವ ಕಾರಣಕ್ಕೆ ಕ್ಯಾಸ್ ಲೆಸ್ ಇಂಡಿಯಾ ಎಂದು ಅವರು ಕರೆದರು. ನೋಟು ಬ್ಯಾನ್ ಮಾಡಿದ್ದು ಯಾವ ಕಾರಣಕ್ಕೆ ಈಗ ಮತ್ತೆ ಹಳೆಯ ಪದ್ದತಿ ಕಡೆಗೆ ಹೋಗುವಂತೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ಎನ್‌ಪಿಸಿಐ ತೆರಿಗೆ ರಹಿತ ಲಾಭವೇ ೬,೧೧೯ ಕೋಟಿ ಎಂದು ಹೇಳಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವ ಬಗ್ಗೆ ಕೇಳಿದಾಗ ಬಗ್ಗೆ ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರ ಬಳಿ ಮಾತನಾಡುತ್ತೇನೆ. ಅವರಿಗೆ ಎಲ್ಲಿ ಬೇಕೋ ಅಲ್ಲಿ ಜಾಗ ಕೊಡೋಣ ಎಂದರು. ಬಿಜೆಪಿಯವರಿಗೆ ರಾಜಕೀಯವೇ ಮುಖ್ಯ. ರೈತರು ಹಾಗೂ ಬಡವರ ಬಗ್ಗೆ ಅವರಿಗೆ ಕಾಳಜಿ ಇಲ್ಲ. ವಿಧಾನಮಂಡಲದ ಅಧಿವೇಶನವನ್ನು ನಡೆಸಲು ಕೂಡ ಬಿಡಲಿಲ್ಲ. ಆ ಪಕ್ಷದ ಶಾಸಕರೇ ನಮ್ಮ ಬಳಿ ಬಂದು ಗೋಳು ತೋಡಿಕೊಂಡಿದ್ದಾರೆ. ಅವರು ಏನು ಬೇಕಾದರೂ ಮಾಡಲಿ ಎಂದು ತೀರ್ಮಾನಿಸಿ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಕಸ್ತೂರಿ ರಂಗನ್ ವರದಿ, ಬರಗಾಲ ಹಾಗೂ ರೈತರ ಸಮಸ್ಯೆ ಬಗ್ಗೆ ಚರ್ಚಿಸಲಾಗುವುದು. ಇದನ್ನು ಬಿಟ್ಟರೆ ಬೇರೆ ಯಾವ ಚರ್ಚೆಯೂ ನಡೆಯುವುದಿಲ್ಲ ಎಂದು ಅವರು ಹೇಳಿದರು. ವಿರೋಧ ಪಕ್ಷದವರು ಚರ್ಚೆಗೆ ಅವಕಾಶ ನೀಡುತ್ತಾರೆಯೇ ಎಂದು ಕೇಳಿದಾಗ, ಅವರು ಏನೂ ಮಾಡಿದರೂ ನಾವಂತೂ ಚರ್ಚೆಗೆ ಸಿದ್ದ. ಅವರಿಗೆ ಆಸಕ್ತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಚರ್ಚೆಗೆ ಅವಕಾಶ ಕಲ್ಪಿಸಿಕೊಳ್ಳಲು ನಮಗೂ ಅಲ್ಪ ಸ್ವಲ್ಪ ಅರಿವಿದೆ ಎಂದು ಹೇಳಿದ ಅವರು, ಬರಪೀಡಿತ ತಾಲ್ಲೂಕುಗಳ ರೈತರ ಸಾಲ ಪಾವತಿ, ವಸೂಲಾತಿಯನ್ನು ಬ್ಯಾಂಕ್ ಗಳು ಒಂದು ವರ್ಷ ಮುಂದೂಡಿರುವ ಬಗ್ಗೆ ಕೇಳಿದಾಗ, ಮೂರು ದಿನ ತಡೆಯಿರಿ. ಬ್ಯಾಂಕುಗಳ ಜೊತೆಗೆ ಮಾತನಾಡಬೇಕು. ಸಾಲ ಮನ್ನಾ ಮಾಡಿ ಎಂದು ಕೆಲಸವರು ಹೇಳಿದ್ದಾರೆ. ಆರ್.ಅಶೋಕ್, ವಿಜಯೇಂದ್ರ ಅವರನ್ನೆಲ್ಲಾ ಕರೆದುಕೊಂಡು ನವದೆಹಲಿಗೆ ಪ್ರಧಾನಿಗಳನ್ನು ಭೇಟಿ ಮಾಡಲು ಹೋಗಬೇಕಲ್ಲಾ. ಕೇಂದ್ರ ಸರ್ಕಾರ ದೊಡ್ಡ ದೊಡ್ಡವರ ಸಾಲ ಮನ್ನಾವನ್ನು ಒಂದೇ ಏಟಿಗೆ ಮಾಡುತ್ತಿದ್ದಾರೆ. ಅದೇ ರೀತಿ ನಮ್ಮ ರೈತರನ್ನೂ ಬದುಕಿಸಿ ಎಂದು ಅವರೆಲ್ಲಾ ಹೇಳಲು ಬರಬೇಕಲ್ಲ. ವಿಧಾನಮಂಡಲದಲ್ಲಿ ಅವರು ಈ ಬಗ್ಗೆ ಸಲಹೆಗಳನ್ನು ನೀಡಲಿ ಎಂದು ಹೇಳಿದರು. ಜಿಲ್ಲೆಯ ಕಲ್ಯಾಣಕ್ಕಾಗಿ ಮಾಡಿರುವ ಘೋಷಣೆಗಳಿಗೆ ಅನುದಾನದ ಪೂರೈಕೆ ಬಗ್ಗೆ ಕೇಳಿದಾಗ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನವೂ ಸರ್ಕಾರದ ಅನುದಾನವೇ ಆಗಿರುತ್ತದೆ. ನಾನು ಆಡಳಿತ ಪಕ್ಷದ ಮುಖ್ಯಮಂತ್ರಿಯಾಗಿ ಹೇಳುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದ ಜನರು ನಮ್ಮ ಸರ್ಕಾರದ ಮೇಲೆ ಅಪಾರ ವಿಶ್ವಾಸವನ್ನಿಟ್ಟಿದ್ದಾರೆ. ಸರ್ಕಾರ ಹಾಗೂ ಸರ್ಕಾರದ ಭಾಗವೇ ಆಗಿರುವ ಕೆಕೆಆರ್ ಡಿ ಬಿ ಯೂ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಘೋಷಣೆ ಮಾಡಿರುವ ಕಾರ್ಯಕ್ರಮಗಳಿಗೆ ಅನುಗುಣವಾಗಿ ಸೂಕ್ತ ಅನುದದಾನವನ್ನು ಪೂರೈಸಲಾಗುವುದು ಎಂದರು. ಮೋಡ ಬಿತ್ತನೆ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಳಿದಾಗ, 'ಕಳೆದೊಂದು ವಾರದಿಂದ, ಅವಕಾಶವಿರುವ ಕಡೆಗಳಲ್ಲಿ ಮೋಡಬಿತ್ತನೆ ಕಾರ್ಯವನ್ನು ಕೈಗೆತ್ತಿಕೊಳ್ಳ ಲಾಗಿದೆ. ರಾಷ್ಟ್ರದ ಹಂತದಲ್ಲಿಯೇ ಭೀಮಾ ನದಿ ನೀರಿನ ಅತಿಯಾದ ಬಳಕೆ ಬಗ್ಗೆ ಮಾತನಾಡಿ, ಮಹಾರಾಷ್ಟ್ರದಲ್ಲಿಯೇ ಭೀಮಾನದಿ ನೀರಿನ ಅತಿಯಾದ ಬಳಕೆಯಾಗುತ್ತಿರುವ ಸ್ಥಳೀಯ ಶಾಸಕರು ಮಾಹಿತಿ ನೀಡಿದ್ದಾರೆ. ಇದರಿಂದ ಗಡಿ ಜಿಲ್ಲೆಗಳಿಗೆ ಕುಡಿಯುವ ನೀರಿಗೆ ತೊಂದರೆಯುAಟಾಗಿದೆ. ಈ ಬಗ್ಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯವರೊAದಿಗೆ ಚರ್ಚಿಸಲಿದ್ದೇನೆ ಎಂದರು. ಹಿಂದುಳಿದ ಜಿಲ್ಲೆಗಳಲ್ಲೂ ಸಚಿವ ಸಂಪುಟಸಭೆ ನಡೆಸುವ ಬಗ್ಗೆ ಕೇಳಿದಾಗ, ಮಂಗಳೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ನಡೆಯಲಿದೆ. ಆ ಭಾಗದ ಶಾಸಕರು, ಜನಪ್ರತಿನಿಧಿಗಳು ಹಾಗೂ ಮುಖಂಡರು ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಅನೇಕ ವಿಚಾರಗಳನ್ನು ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಅಪೌಷ್ಠಿಕತೆ ನಿವಾರಣೆಗೆ ಸರ್ಕಾರದ ಕ್ರಮಗಳ ಬಗ್ಗೆ ಕೇಳಿದಾಗ 'ಪೌಷ್ಠಿಕತೆ ಹೆಚ್ಚಿಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕರ್ನಾಟಕ ಪ್ರೋಟೀನ್ ಮಿಷನ್ ಜಾರಿ ಮಾಡಲಿದೆ. ವಿಪ್ರೋ ಸಂಸ್ಥೆಯ ಅಜೀಂ ಪ್ರೇಮ್ ಜಿ ಅವರ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ ಹಾಗೂ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ನೆರವು ಒದಗಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕದ ಆರ್ಥಿಕ ಮಿಷನ್ ಗೋವಿಂದರಾವ್ ಸಮಿತಿ ವರದಿ ಮೇಲೆಯೇ ರೂಪಿತವಾಗಿದೆ' ಎಂದು ಉತ್ತರಿಸಿದರು.
ಟ್ಯಾಗ್ಸ್:#Sedam#Karnataka
ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.

Ads