📅 ಮಂಗಳವಾರ, ಅಕ್ಟೋಬರ್ 6, 2026
Myna News Logo
ಮೈನಾ

ಸೇಡಂ

ನ್ಯೂಸ್

ಕನ್ನಡ ದಿನ ಪತ್ರಿಕೆ
Editor

ಪ್ರಧಾನ ಸಂಪಾದಕರು:

ಮಹಿಪಾಲರೆಡ್ಡಿ

Ads
Specials

ನಿಸ್ವಾರ್ಥ ಸೇವೆಯೇ ದಾನ

ಕಿರಣ್ ಪಾಟೀಲ

ಕಿರಣ್ ಪಾಟೀಲ

ಲೇಖಕರು - ಗಾಯಕರು

ಸೋಮವಾರ, ಆಗಸ್ಟ್ 10, 20262 ನಿಮಿಷ ಓದು16 ವೀಕ್ಷಣೆಗಳು
ಸುದ್ದಿ ಹಂಚಿಕೊಳ್ಳಿ:
ನಿಸ್ವಾರ್ಥ ಸೇವೆಯೇ ದಾನ
ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಮನುಷ್ಯ ಮನುಷ್ಯ ತನ್ನ ಪ್ರಪಂಚದಲ್ಲಿ ಬಹಳ ದಾನ ಧರ್ಮ ಮತ್ತು ಪರಮ ಧರ್ಮದಲ್ಲಿ ಸದಾ ತನ್ನನ್ನು ತಾನು ತೊಡಗಿಸಿಕೊಂಡು ಅಲ್ಲಿಯೂ ಸಹ ತನ್ನ ದಾನದ ಬಗ್ಗೆ ಚಿಂತನೆ ಮಾಡುತ್ತಿರುತ್ತಾನೆ ಅಂದರೆ ನಿಸ್ವಾರ್ಥ ಸೇವೆ ಮಾಡುವುದು ದಾನದ ಇನ್ನೊಂದು ರೂಪವೇ ಆಗಿದೆ ಅಲ್ಲಿ ತನ್ನ ಹಿತವನ್ನು ಕಾಪಾಡಿಕೊಳ್ಳದೆ ಪರರ ಹಿತವನ್ನು ಕಾಪಾಡುವ ದೊಡ್ಡ ಆಶೆಯನ್ನು ಇಟ್ಟುಕೊಂಡಿರುತ್ತಾನೆ ಇದು ನಿಸ್ವಾರ್ಥ ಸೇವೆಯ ಇನ್ನೊಂದು ರೂಪವಾಗಿದೆ. ಅಂದರೆ ಈ ಮನುಷ್ಯ ಪ್ರಪಂಚದಲ್ಲಿ ಸ್ವಾರ್ಥತನವೇ ಹೆಚ್ಚಾಗಿ ಇರುವುದರಿಂದ ತಾನು ಮಾಡಿದ ಸೇವೆ ಇತರರಿಗೆ ಮಾದರಿಯಾಗಿರಬೇಕು ಅಂದರೆ ನಿಸ್ವಾರ್ಥತನದಲ್ಲಿ ಅಥವಾ ದಾನದ ರೂಪದಲ್ಲಿ ಸೇವೆಗೈದರೆ ಅಲ್ಲಿ ಪರಮಾತ್ಮನು ನೆಚ್ಚುತ್ತಾನೆ ಎನ್ನುವ ಮಾತಿನಂತೆ ಸ್ವಾರ್ಥ ತನದಲ್ಲಿ ಕೂಡಿರದ ಆಸೆ ಯಾವತ್ತು ಫಲವನ್ನೇ ಕೊಡುತ್ತದೆ. ಅಂದರೆ ತಾನು ಇತರರಿಗಾಗಿ ಮಾಡುವ ಸೇವೆಯು ದಾನವೆಂದು ತಿಳಿಯಬೇಕಾಗುತ್ತದೆ ಅಂದರೆ ದಾನ ಕೊಡುವ ಕೈಗಳು ಯಾವತ್ತೂ ಶುದ್ಧವಾಗಿ ಕಲ್ಮಶವಿಲ್ಲದೆ ನಿಸ್ವಾರ್ಥ ತನ್ನ ದಿಂದ ದಾನವನ್ನು ಮಾಡಿದರೆ ಅದು ಇತರರಿಗೆ ಹೇಳುವ ಹಾಗಿಲ್ಲ ಆಗ ನಾವು ಪರಹಿತ ಬಯಸುವ ಚಿಂತನೆ ಆಗಿರಬೇಕು ಅಂದಾಗ ಮಾತ್ರ ದಾನಕ್ಕೆ ಒಂದು ಅರ್ಥವಾಗುತ್ತದೆ. ನಿಸ್ವರ್ಥ ಸೇವೆ ಮಾಡುವ ಮನುಷ್ಯ ಸದಾ ಕಾಲವು ಸುಖಿಯಾಗಿ ಇರುತ್ತಾನೆ. ಇಂದಿನ ಜಗತ್ತಿನಲ್ಲಿ ನನಗೇನು ಲಾಭ ಎಂಬ ಮನೋಭಾವನೆ ಹೆಚ್ಚಾಗಿದೆ ಯಾವುದೇ ಪ್ರತಿಫಲವನ್ನು ಬಯಸದ ಸೇವೆ ಅದು ಇನ್ನೊಂದು ರೂಪವನ್ನು ಪಡೆದುಕೊಂಡು ದಾನ ಮಾಡಿದ ಶ್ರೇಷ್ಠ ಕೆಲಸ ಸೇವೆ ಮಾಡಿದಾಗಲು ಆಗಿರುತ್ತದೆ. ನಮ್ಮಲ್ಲಿ ಇರುವುದನ್ನು ನೋಡಿ ಬೀಗುವುದಕ್ಕಿಂತ ಇದು ಪರಮಾತ್ಮನು ಕೊಟ್ಟ ಪ್ರಸಾದ ಎಂದು ಧನ್ಯತಾ ಭಾವನೆ ಇರಬೇಕು ನನಗೆ ಕೊಟ್ಟರೆ ಧರ್ಮ ಎನ್ನುವ ಮನೋಭಾವನೆಯನ್ನು ಹೊಂದಿರುವ ಮನುಷ್ಯ ಯಾವುದನ್ನು ಚಿಂತನೆಯಲ್ಲಿ ತೊಡಗಿಕೊಳ್ಳಬೇಕು. ನನ್ನಲ್ಲಿ ಏನು ಇಲ್ಲ ಇನ್ನು ನಾನು ಏನನ್ನು ಕೊಡಲಿ ಎಂಬ ಭಾವನೆಯನ್ನು ಹೊಂದಿರುವ ಜನಗಳೇ ತುಂಬಿರುವ ಈ ಪರಿಸರದಲ್ಲಿ ಕೊನೆ ಪಕ್ಷ ನಿಮ್ಮಲ್ಲಿರುವ ಸದ್ಗುಣ ಸಹಾಯ ಹಸ್ತ ವಿಚಾರವಂತಿಕೆ ಜ್ಞಾನ ಸಂಪತ್ತು ಇವುಗಳನ್ನೇ ಪರರಿಗೆ ಹೇಳುವ ಮೂಲಕ ಅವರನ್ನು ಸಮಾಜದ ಸರಿದಾರಿಗೆ ತರುವ ಮಹತ್ವದ ಕೆಲಸ ಆಗುತ್ತದೆ ಇದು ಕೂಡ ಒಂದು ನಿಸ್ವಾರ್ಥ ಸೇವೆಯ ರೂಪದಲ್ಲಿ ದಾನವಾಗಿ ಕಾಣಬಹುದು. ಇಂದಿನ ದಿನಗಳಲ್ಲಿ ಸಮಾಜದಲ್ಲಿ ಯಾರಿಗಾದರೂ ಸಣ್ಣ ಸಹಾಯ ಮಾಡಿದರೆ ಅದನ್ನು ಆತನು ಜಗಜ್ಜಜಾಹಿರ ಮಾಡುವುದನ್ನು ಬಿಟ್ಟು ಬಲಗೈಯಿಂದ ಕೊಟ್ಟ ದಾನ ಎಡಗೈಗೆ ತಿಳಿಯಬಾರದು ಅಂತಹ ಮನೋಭಾವನೆಯನ್ನು ಹೊಂದಿ ಮಾಡುವ ದಾನ ಶ್ರೇಷ್ಠವಾಗಿರುತ್ತದೆ ಇಲ್ಲಿ ಕೊಡುವುದು ಕಡಿಮೆ ಹೇಳಿಕೊಳ್ಳುವುದೇ ಜಾಸ್ತಿ ಯಾಗಿರುವ ಈ ದಿನಮಾನದಲ್ಲಿ ಈ ದಾನಕ್ಕೆ ಏನೆಂದು ಅರ್ಥ ಬರೆದೆ ಅದು ಸ್ವಾರ್ಥತನದ ಸೇವೆಯ ಇನ್ನೊಂದು ರೂಪವನ್ನು ಪಡೆದುಕೊಳ್ಳುತ್ತದೆ. ದೇವರುಗಳಿಗೆ ಗಂಟೆಯ ಕನ್ನಡಿಯು ಪ್ರಸಾದ ಬಟ್ಟಲವು ಅಥವಾ ಇನ್ಯಾವುದೋ ವಸ್ತುವನ್ನು ಕೊಡುವಾಗ ಅದರ ಮೇಲೆ ತನ್ನ ಹೆಸರನ್ನು ಧರಿಸಿ ಕೊಟ್ಟಾಗ ಇದು ಸ್ವಾರ್ಥದ ಕಲ್ಪನೆಯಾಗಿ ಮಾರ್ಪಡುತ್ತದೆ. ಏಕೆಂದರೆ ತಾನು ಕೊಟ್ಟದ್ದು ಇತರರಿಗೆ ಗೊತ್ತಾಗಬೇಕಲ್ಲ ಎಂಬ ಮನೋಭಾವನೆಯನ್ನು ಹೊಂದಿ ಆ ವಸ್ತುವಿನ ಮೇಲೆ ತನ್ನ ಹೆಸರನ್ನು ಬರೆಸಿ ಕೊಡುವ ಪರಿಪಾಟು ಇಂದಿನ ದಿನಮಾನದಲ್ಲಿ ಕಂಡು ಬರುತ್ತದೆ ಆದರೆ ದೇವರಿಗೆ ಕೊಡುವ ದಾನವು ಕೇವಲ ಹೆಸರಿಗೆ ಮಾತ್ರ ಆಗಿರಬಾರದು ಅದು ಇತರರು ಅಂದರೆ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ದಾನ ರೂಪದಲ್ಲಿ ಕೊಟ್ಟ ವಸ್ತುಗಳನ್ನ ನೋಡಿ ಎಂತ ಉಪಯುಕ್ತ ವಸ್ತುವನ್ನು ಧಾನ್ಯ ರೂಪದಲ್ಲಿ ಕೊಟ್ಟ ಮಹನೀಯ ಯಾರಿರಬಹುದು ಎಂದು ಕೆಲ ಸೆಕೆಂಡ್ಗಳ ಕಾಲ ಯೋಚಿಸಬೇಕು ಅಂದಾಗ ಅಂತಹ ಧಾನಕ್ಕೆ ಮಹತ್ವ ಬರುತ್ತದೆ. ಅದನ್ನು ಬಿಟ್ಟು ತಾನು ಕೊಡುವ ವಸ್ತುವಿನ ಮೇಲೆ ಹೆಸರನ್ನು ಧರಿಸಿ ಕೊಟ್ಟಾಗ ಆ ವಸ್ತು ದೇವಸ್ಥಾನದ ಜಾಗದಲ್ಲಿ ಇರುತ್ತದೆ ಅಲ್ಲಿ ಕೊಟ್ಟ ವಸ್ತುವಿಗಿಂತ ತನ್ನ ಹೆಸರೇ ದೊಡ್ಡದಾಗಿ ಕಾಣುವಂತೆ ಮಾಡಿರುತ್ತಾರೆ ಆದರೆ ಇದು ಸ್ವಾರ್ಥತನದ ಸೇವೆ ಆಗಿರುತ್ತದೆ ಇಂತಹ ಸಣ್ಣ ವಿಷಯವನ್ನು ಅರಿಯದ ಮನುಜ ಪದೇ ಪದೇ ಇಂತಹ ತಪ್ಪುಗಳನ್ನೇ ಮಾಡುತ್ತ ಇರುತ್ತಾರೆ ಆದರೆ ನಾವು ಬೆಳೆದಂತೆ ನಮ್ಮ ವಿಚಾರ ಶಕ್ತಿ ಬುದ್ಧಿಮಟ್ಟ ಜ್ಞಾನದ ಸಂಪತ್ತು ಹೆಚ್ಚಾಗಬೇಕು ಅಂದರೆ ಪರಹಿತವನ್ನು ಕಾಪಾಡಿಕೊಂಡು ಹೋಗುವ ಸದ್ಗುಣ ಹೊಂದಿದ ಮನುಜ ಈ ಮೇಲೆ ಹೇಳಿದ ಸಣ್ಣ ತಪ್ಪನ್ನು ಮಾಡಲು ಹೋಗುವುದಿಲ್ಲ. ನಮ್ಮಲ್ಲಿ ಹೆಚ್ಚಾಗಿದ್ದನ್ನು ನಾವು ಇತರರಿಗೆ ಕೊಡುತ್ತೇವೆ ಇದು ನಿಸ್ವಾರ್ಥ ಭಾವನೆ ಆಗಿರುವುದಿಲ್ಲ ನಮ್ಮ ಬಳಿ ಎಲ್ಲವೂ ಇವೆ ಹೆಚ್ಚಾದ್ದನ್ನು ಕೊಟ್ಟರಾಯಿತು ಎನ್ನುವ ಮನೋಬಲಾಸೆ ಹೊಂದಿದ ಮನುಜ ಈ ವ್ಯವಹಾರಕ್ಕೆ ಕೊಡುಕೊಳ್ಳುವಿಕೆ ಎನ್ನಬೇಕೇ ವಿನಹ ಇದು ದಾನದ ರೂಪವನ್ನು ಪಡೆದುಕೊಳ್ಳುತ್ತದೆ. ಇದು ವ್ಯವಹಾರವಾಗಿ ಕಾಣುತ್ತದೆ ವಿನಹ ನಿಜವಾದ ಧಾನವಾಗುವುದಿಲ್ಲ. ಹೊಟ್ಟೆನೆಂಬ ಅಹಂಕಾರವನ್ನು ಹೊಂದಬಾರದು ಈ ಅಹಂಕಾರದ ದುರ್ಗಣ ಮೊದಲು ನಮ್ಮನ್ನು ಹಾಳುಮಾಡುತ್ತದೆ ಕೇವಲ ಪ್ರದರ್ಶನಕ್ಕಾಗಿ ಕೊಡುವ ರೂಢಿಯನ್ನು ಮಾಡಿಕೊಳ್ಳಬಾರದು ಇಲ್ಲಿ ಯಾವತ್ತೂ ಪರರ ಹಿತವನ್ನೇ ಬಯಸಿ ಕೊಡಬೇಕು ತನಗೆ ಹೆಚ್ಚಾಯಿತೆಂದು ಕೆಟ್ಟು ಹೋಗುತ್ತದೆ ಎಂದು ಕೆಟ್ಟ ಗುಣದಿಂದ ನಾವು ಕೊಡುವ ದಾನವು ಅದು ಯಾವುದಕ್ಕೂ ಸಲ್ಲುವುದಿಲ್ಲ. ಮನೆಯಲ್ಲಿ ಅಡುಗೆ ಮಾಡುವ ಅಮ್ಮನು ನಾನು ಪ್ರಸಾದವನ್ನು ತಯಾರಿಸುತ್ತೇನೆ ಎಂದು ಮನದಲ್ಲೇ ಪರಮಾತ್ಮನನ್ನು ನಮಿಸಿ ಮಾಡುವ ಅಡುಗೆ ಅದು ಅಮೃತಕ್ಕೆ ಸಮಾನ ಆದರೆ ಅಡಿಗೆ ಮನೆಯಲ್ಲಿ ಅಮ್ಮ ಕೂಳು ಬೀಸುತ್ತೇನೆ ಎಂದು ಕೊಂಡರೆ ಅದು ಎಂದಿಗೂ ಪ್ರಸಾದ ವಾಗದೆ ಕೂಳಾಗಿ ಪರಿಣಮಿಸುತ್ತದೆ. ಅದಕ್ಕೆ ಅಮ್ಮ ಅಡಿಗೆ ಮನೆಯಲ್ಲಿ ಸದ್ಗುಣ ವಿಚಾರವಂತಿಕೆ, ಪರಹಿತ ಇದೆಲ್ಲವನ್ನು ಮಾಡುವುದು ದೇವರಿಗೆ ಸಮರ್ಪಿತ ಎಂಬ ಉನ್ನತ ವಿಚಾರವನ್ನು ಚಿಂತನೆಯನ್ನು ಹೊಂದಿ ಸದ್ಭಕ್ತಿಯ ರೂಪದಲ್ಲಿ ಅಡುಗೆ ಮಾಡಿದಾಗ ಅದು ಪ್ರಸಾದವಾಗಿ ಪರಿಣಮಿಸಿ ಉಣ್ಣುವ ಭಕ್ತನಿಗೆ ಸದಾ ಪ್ರಸಾದವಾಗಿ ಕಾಣುತ್ತದೆ ಅಂದರೆ ಇಲ್ಲಿ ಮಾಡುವ ಕೈಗಳು ಶುದ್ಧ ಅಷ್ಟಾಗಿರಬೇಕು, ಅಂದಾಗ ಮಾತ್ರ ಎಲ್ಲವೂ ಪರಿಶುದ್ಧವಾಗಿ ಇರುತ್ತದೆ.
ಟ್ಯಾಗ್ಸ್:#Sedam#Karnataka
ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.

Ads