📅 ಮಂಗಳವಾರ, ಅಕ್ಟೋಬರ್ 6, 2026
Myna News Logo
ಮೈನಾ

ಸೇಡಂ

ನ್ಯೂಸ್

ಕನ್ನಡ ದಿನ ಪತ್ರಿಕೆ
Editor

ಪ್ರಧಾನ ಸಂಪಾದಕರು:

ಮಹಿಪಾಲರೆಡ್ಡಿ

Ads
Literature

ಕಗ್ಗ ದರ್ಶನ

ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಶನಿವಾರ, ಸೆಪ್ಟೆಂಬರ್ 19, 20262 ನಿಮಿಷ ಓದು4 ವೀಕ್ಷಣೆಗಳು
ಸುದ್ದಿ ಹಂಚಿಕೊಳ್ಳಿ:
ಕಗ್ಗ ದರ್ಶನ
ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
೧೪೫.ಮಾಯೆಯೇ ಸರಸಿ; ನಿರ್ಗುಣಸತ್ತ್ವದಿಂದೇನು? ಮಾಯೆ ಬಿಡೆ ಜಗವೆತ್ತ? ಜೀವ ಕಥೆಯೆತ್ತ? ಮೇಯವಲ್ಲದ ಮಹಿಮೆ ಛಾಯೆಯಾ ಬ್ರಹ್ಮನದು ತಾಯವಳು ನೀಂ ಮಗುವು ಮಂಕುತಿಮ್ಮ. ಈ ಪದ್ಯದಲ್ಲಿ ಮಾಯೆ, ಬ್ರಹ್ಮ, ಜೀವ ಮತ್ತು ಜಗತ್ತು ಇವುಗಳ ನಡುವಿನ ಸಂಬAಧವನ್ನು ಸರಳವಾದ ರೂಪಕದ ಮೂಲಕ ವಿವರಿಸಲಾಗಿದೆ. ಮಾಯೆಯನ್ನು ಸಂಪೂರ್ಣ ಸುಳ್ಳು ಎಂದು ತಳ್ಳಿ ಹಾಕಲೂ ಆಗದು; ಅದನ್ನೇ ಪರಮ ಸತ್ಯವೆಂದು ಒಪ್ಪಿಕೊಳ್ಳಲೂ ಆಗದು. ನಾವು ಕಾಣುವ ಜಗತ್ತು ಮಾಯೆಯ ಮೂಲಕ ಅನುಭವಕ್ಕೆ ಬರುತ್ತದೆ. ಆದರೆ ಅದು ಶಾಶ್ವತವಲ್ಲ;ಅದರ ಹಿಂದೆ ಇರುವ ನಿತ್ಯವಾದ ಸತ್ಯ ಬ್ರಹ್ಮ. ಮನುಷ್ಯನು ಮಾಯೆಯ ಪ್ರಭಾವಕ್ಕೆ ಒಳಗಾಗಿ ಬದುಕುತ್ತಿದ್ದರೂ ಅದರ ನಿಜ ಸ್ವರೂಪವನ್ನು ಅರಿತು ಬ್ರಹ್ಮ ತತ್ವದ ಕಡೆಗೆ ಸಾಗಬೇಕು ಎಂಬುದು ಪದ್ಯದ ಭಾವ. "ಮಾಯೆಯೇ ಸರಸಿ ನಿರ್ಗುಣಸತ್ತ್ವದಿಂದೇನು?"- ಮಾಯೆ ಈ ಜಗತ್ತಿನ ಚಲನೆಗೆ, ಸೃಷ್ಟಿಗೆ ಕಾರಣವಾಗಿರುವ ಶಕ್ತಿಯಂತೆ ಕಾಣುತ್ತದೆ. ನಿರ್ಗುಣವಾದ ರೂಪ,ಗುಣಗಳಿಲ್ಲದ ಬ್ರಹ್ಮವನ್ನು ಮಾತ್ರ ತಿಳಿದುಕೊಂಡು ನೋಡಿದರೆ ಜಗತ್ತಿನ ವೈವಿಧ್ಯವನ್ನು ಅರ್ಥಮಾಡಿಕೊಳ್ಳುವುದು ಕಷ್ಟ. "ಮಾಯೆಬಿಡೆ ಜಗವೆತ್ತ? ಜೀವ ಕಥೆಯೆತ್ತ?"- ಮಾಯೆಯನ್ನು ಸಂಪೂರ್ಣವಾಗಿ ಬದಿಗಿಟ್ಟರೆ ಈ ಜಗತ್ತು ಎಲ್ಲಿದೆ? ಜೀವಿಗಳ ಜೀವನ ಅವರ ಸುಖ, ದುಃಖ ಸಂಬAಧಗಳು, ಅನುಭವಗಳು ಇವೆಲ್ಲವೂ ಹೇಗೆ ಅರ್ಥವಾಗುತ್ತದೆ. ಅಂದರೆ, ನಮ್ಮ ಅನುಭವದ ಜಗತ್ತಿನಲ್ಲಿ ಮಾಯೆಗೆ ಮಹತ್ವದ ಸ್ಥಾನವಿದೆ ."ಮೇಯವಲ್ಲದ ಮಹಿಮೆ ಛಾಯೆಯಾ ಬ್ರಹ್ಮನದು"-ಈ ಜಗತ್ತು ಮತ್ತು ಅದರ ವೈಭವ ಶಾಶ್ವತವಾದ ಸತ್ಯವಲ್ಲ;ಅದು ಬ್ರಹ್ಮನ ನಿಜವಾದ ಮಹಿಮೆಯ ಛಾಯೆ ಅಥವಾ ಪ್ರತಿಬಿಂಬದAತಿದೆ. ಕಾಣುವ ಜಗತ್ತು ಬದಲಾಗುತ್ತದೆ;ಬ್ರಹ್ಮ ಮಾತ್ರ ಶಾಶ್ವತವಾದ ಸತ್ಯ. "ತಾಯವಳು ನೀಂ ಮಗುವು ಮಂಕುತಿಮ್ಮ"- ಮಾಯೆಯನ್ನು ತಾಯಿಗೆ,ಜೀವಿಯನ್ನು ಮಗುವಿಗೆ ಹೋಲಿಸಲಾಗಿದೆ. ಮಾಯೆಯ ಮಡಿಲಿನಲ್ಲಿ ಬೆಳೆದ ಮಗುವಿನಂತೆ, ಮನುಷ್ಯನು ಜಗತ್ತಿನ ಅನುಭವಗಳಲ್ಲಿ ಸಿಲುಕಿಕೊಂಡಿರುತ್ತಾನೆ. ಆದ್ದರಿಂದ ಮಾಯೆಯನ್ನು ಅರಿತುಕೊಂಡು ಅದರ ಸ್ವರೂಪವನ್ನು ತಿಳಿದು ಅದರ ಆಚೆ ಇರುವ ಬ್ರಹ್ಮ ಸತ್ಯವನ್ನು ಅರಿಯಬೇಕು ಎಂಬ ಸಂದೇಶ ಸಾರಲಾಗಿದೆ. ಮಾಯೆ ಜಗತ್ತಿನ ಅನುಭವಕ್ಕೆ ಕಾರಣ. ಜಗತ್ತು ಬ್ರಹ್ಮನ ಮಹಿಮೆಯ ಛಾಯೆ. ಮನುಷ್ಯನು ಮಾಯ ಎಂಬ ತಾಯಿಯ ಮಡಿಲಿನ ಮಗುವಿನಂತೆ. ಆದರೆ ಮಾಯೆಯ ಆಚೆ ಇರುವ ಶಾಶ್ವತ ಬ್ರಹ್ಮ ಸತ್ಯವನ್ನು ಅರಿಯುವುದೇ ಜೀವನದ ಪರಮ ಗುರಿ ಎನ್ನುವುದಾಗಿದೆ. ಇದನ್ನು ಭಗವದ್ಗೀತೆಯ ನೆಲೆಯಲ್ಲಿ ನೋಡಿದರೂ, "ದೈವೀಹ್ಯೇಷಾ ಗುಣಮಯಿ ಮಮ ಮಾಯಾ ದುರತ್ಯಯಾ ಮಾಮೇವ ಯೇ ಪ್ರಪದ್ಯಂತೇ ಮಾಯಾಮೇತಾಂ ತರಂತಿ ತೇ." ಎಂದರೆ, ನನ್ನ ಈ ದೈವಿ ಮಾಯೆಯು ಮೂರು ಗುಣಗಳಿಂದ ಕೂಡಿದ್ದು, ಅದನ್ನು ದಾಟುವುದು ಬಹಳ ಕಷ್ಟಕರವಾಗಿದೆ. ಆದರೆ ನನ್ನನ್ನೇ ಶರಣಾಗಿ ಹೊಂದಿದವರು ಈ ಮಾಯೆಯನ್ನು ದಾಟುತ್ತಾರೆ. ಮಾಯೆಯು ತನ್ನದೇ ಶಕ್ತಿಯಾಗಿದ್ದು,ಅದು ಸತ್ವ,ರಜಸ್ಸು ಮತ್ತು ತಮಸ್ಸು ಎಂಬ ಮೂರು ಗುಣಗಳಿಂದ ಕೂಡಿದೆ. ನಾವು ಕಾಣುವ ಜಗತ್ತು ಶಾಶ್ವತ ಸತ್ಯವಲ್ಲ; ಅದು ಪರಮ ಸತ್ಯವಾದ ಬ್ರಹ್ಮನ ಮಹಿಮೆಯ ಛಾಯೆ ಯಂತಿದೆ. ಮನುಷ್ಯನು ಮಾಯೆಯ ಬಂಧನಕ್ಕೆ ಒಳಗಾಗುವುದನ್ನು ತಿಳಿಸಿ, ಭಗವಂತನ ಶರಣಗತಿಯ ಮೂಲಕ ಮಾಯೆಯನ್ನು ದಾಟಬಹುದು ಎಂಬುದನ್ನು ಗೀತೆಯಲ್ಲಿಯೂ ಹೇಳಲಾಗಿದೆ. ಡಿವಿಜಿಯವರು ಈ ಪದ್ಯದಲ್ಲಿ ಮಾಯೆ, ಬ್ರಹ್ಮ ಮತ್ತು ಜೀವದ ಸಂಬAಧವನ್ನು ತಾತ್ವಿಕವಾಗಿ ಸೂಚಿಸಿದ್ದಾರೆ. ಕವಿ ಸಾಮಾನ್ಯ ಮನುಷ್ಯನಿಗೆ ಕಾಣುವ ಜಗತ್ತು ಮತ್ತು ಅದರ ಹಿಂದಿರುವ ಪರಮ ಸತ್ಯದ ನಡುವಿನ ವ್ಯತ್ಯಾಸವನ್ನು ಸರಳವಾದ ಪ್ರಶ್ನೆಗಳ ಮೂಲಕ ತೆರೆದಿಡುತ್ತಾರೆ. ನಿರ್ಗುಣವಾದ ಬ್ರಹ್ಮನನ್ನು ಮಾತ್ರ ಪರಿಗಣಿಸಿದರೆ, ಅನುಭವಕ್ಕೆ ಬರುವ ಜಗತ್ತನ್ನು ವಿವರಿಸುವುದು ಕಷ್ಟ ಎಂಬ ವಿಚಾರವನ್ನು ಇಲ್ಲಿ ವ್ಯಕ್ತಪಡಿಸಲಾಗಿದೆ. ಮಾಯೆಯ ಮೂಲಕವೇ ಬ್ರಹ್ಮನ ಸೃಷ್ಟಿ ಶಕ್ತಿ ಜಗತ್ತಿನಲ್ಲಿ ಪ್ರಕಟವಾಗುತ್ತದೆ.ಮನುಷ್ಯನ ಜೀವನ, ಅವನ ಸಂಬAಧಗಳು ಸುಖ, ದುಃಖಗಳು ಆಸೆ, ಆಕಾಂಕ್ಷೆಗಳು ಇವೆಲ್ಲವೂ ಮಾಯೆಯ ಅನುಭವದ ವ್ಯಾಪ್ತಿಯಲ್ಲಿವೆ. ಆದ್ದರಿಂದ ಮಾಯೆಯನ್ನು ಸಂಪೂರ್ಣವಾಗಿ ನಿರಾಕರಿಸುವುದು ಸುಲಭವಲ್ಲ; ಕಾಣುವ ಜಗತ್ತು ಶಾಶ್ವತವಾದ ಪರಮ ಸತ್ಯವಲ್ಲ, ಅದು ಬ್ರಹ್ಮನ ಮಹಿಮೆಯ ಛಾಯೆಯಂತಿದೆ. ಹೀಗಾಗಿ ಕವಿ ದೃಶ್ಯ ಜಗತ್ತಿನ ನಶ್ವರತೆ ಮತ್ತು ಬ್ರಹ್ಮನ ನಿತ್ಯತೆಯನ್ನು ಸೂಚಿಸುತ್ತಾರೆ. ಒಟ್ಟಿನಲ್ಲಿ ಈ ಕಗ್ಗವು ಕೇವಲ ಆಧ್ಯಾತ್ಮಿಕ ವಿಚಾರವನ್ನು ಹೇಳುವುದಲ್ಲದೇ, ಕಾಣುವುದು ಸತ್ಯವೇ? ಕಾಣುವುದರ ಹಿಂದೆ ಇರುವ ಸತ್ಯವೇನು? ಎಂಬ ಗಂಭೀರ ಪ್ರಶ್ನೆಯನ್ನು ನಮ್ಮ ಮುಂದಿಡುತ್ತದೆ. ಸರಳವಾದ ಭಾಷೆ, ಪ್ರಶ್ನಾರ್ಥಕ ನಿರೂಪಣೆ ಮತ್ತು ತಾಯಿ-ಮಗು ರೂಪಕಗಳ ಮೂಲಕ ಡಿವಿಜಿಯವರು ಕಠಿಣವಾದ ವೇದಾಂತದ ವಿಚಾರವನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಮಾಡಿದ್ದಾರೆ. ಇದೆ ಈ ಪದ್ಯದ ಪ್ರಮುಖ ಸಾಹಿತ್ಯಿಕ ಹಾಗೂ ತಾತ್ವಿಕ ವೈಶಿಷ್ಟವಾಗಿದೆ.
ಟ್ಯಾಗ್ಸ್:#Sedam#Karnataka
ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.

Ads