Karnataka
ಎಸ್‌ಐಆರ್ ಪ್ರಕ್ರಿಯೆ ವಿರುದ್ಧ ನಟ ಪ್ರಕಾಶ್‌ರಾಜ್ ಆಕ್ರೋಶ

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರು
ಶುಕ್ರವಾರ, ಸೆಪ್ಟೆಂಬರ್ 25, 20262 ನಿಮಿಷ ಓದು4 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಕಲಬುರ್ಗಿ, ಸೆ.೨೪- ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯಲ್ಲಿ ಸಾಮಾನ್ಯ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಬಹುಭಾಷಾ ನಟ ಪ್ರಕಾಶ್‌ರಾಜ್ ಆರೋಪಿಸಿದರು.
ನಗರದ ರಿಂಗ್ ರಸ್ತೆಯ ರಾಮನಗರ ಹಾಗೂ ಮಿಸ್ಬಾ ಕಾಲೋನಿಯಲ್ಲಿ ಎಸ್‌ಐಆರ್ ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸದ ಅಂಗವಾಗಿ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ಒಂದು ಕುಟುಂಬದ ನಾಲ್ವರು ಸದಸ್ಯರ ಪೈಕಿ ಒಬ್ಬರನ್ನು ಮತದಾರರ ಪಟ್ಟಿಯಲ್ಲಿ 'ಮೃತ' ಎಂದು ನಮೂದಿಸಿ, ಉಳಿದ ಮೂವರನ್ನು ಶಾಶ್ವತವಾಗಿ ಸ್ಥಳಾಂತರಗೊAಡವರು' ಎಂದು ದಾಖಲಿಸುವಂತಹ ಪ್ರಕರಣಗಳು ನಡೆಯುತ್ತಿವೆ ಎಂದು ಪ್ರಕಾಶ್ ರಾಜ್ ಹೇಳಿದರು. "ಹೀಗೆ ಮಾಡಿದರೆ ಜನರು ಎಲ್ಲಿಗೆ ಹೋಗಬೇಕು? ಎಂದು ಪ್ರಶ್ನಿಸಿದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅರ್ಜಿಗಳನ್ನು ಬಿಎಲ್‌ಒಗಳು ಪಡೆದು ಅಪ್‌ಲೋಡ್ ಮಾಡುತ್ತಿದ್ದಾರೆ. ಕೆಲವೆಡೆ ಸ್ಪೆಲ್ಲಿಂಗ್ ತಪ್ಪುಗಳಿದ್ದರೂ ಅವುಗಳನ್ನು ಮತ್ತೊಮ್ಮೆ ಪರಿಶೀಲಿಸಲು ಅವಕಾಶ ನೀಡುವ ಬದಲು ಜನರನ್ನು ಗೊಂದಲಕ್ಕೀಡು ಮಾಡಲಾಗುತ್ತಿದೆ ಎಂಬ ಆರೋಪವನ್ನು ಅವರು ಮಾಡಿದರು.
ಎಎಸ್‌ಡಿಒ ಪಟ್ಟಿಯಲ್ಲಿ ೫,೨೧,೯೫೭ ಜನರನ್ನು ಸೇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು ಅವರಿಗೆ ಸಮಯ ನೀಡಲಾಗುತ್ತದೆ ಎಂದು ಹೇಳುತ್ತಾರೆ. ಆದರೆ ಸ್ಪೆಲ್ಲಿಂಗ್ ತಪ್ಪುಗಳಿದ್ದರೆ ಅವುಗಳನ್ನು ಕ್ರಾಸ್‌ಚೆಕ್ ಮಾಡಲು ಮತ್ತೊಮ್ಮೆ ಏಕೆ ಅವಕಾಶ ನೀಡಬಾರದು? ಅಧಿಕಾರಿಗಳು ಮನೆಗಳಿಗೆ ಬಂದು ಪರಿಶೀಲನೆ ನಡೆಸುತ್ತಿಲ್ಲ ಏಕೆ?" ಎಂದು ಪ್ರಕಾಶ್ ರಾಜ್ ಅವರು ಪ್ರಶ್ನಿಸಿದರು.
ಎಸ್‌ಐಆರ್‌ಗೆ ಸಂಬAಧಿಸಿದAತೆ ನೋಟಿಸ್‌ಗಳು ನೀಡಲಾಗುತ್ತಿದ್ದು, ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬುದರ ಬಗ್ಗೆ ಜನರಿಗೆ ಸ್ಪಷ್ಟತೆ ಇಲ್ಲ. ಸುಪ್ರೀಂ ಕೋರ್ಟ್ ಕೂಡ ಯಾವ ದಾಖಲೆಗಳನ್ನು ತರಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದು ಹೇಳಿದೆ. ಯಂತ್ರಗಳು ಕೆಲಸ ಮಾಡುತ್ತಿವೆಯೋ, ಮನುಷ್ಯರು ಕೆಲಸ ಮಾಡುತ್ತಿದ್ದಾರೋ ಎಂಬ ಪ್ರಶ್ನೆಯನ್ನೂ ನ್ಯಾಯಾಲಯ ಎತ್ತಿದೆ. ಜನರು ಯಾವ ದಾಖಲೆಗಳನ್ನು ನೀಡಬೇಕು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ಗೆ ಸಂಬAಧಿಸಿದAತೆ ದೊಡ್ಡ ಸಂಖ್ಯೆಯಲ್ಲಿ ಪ್ರಕರಣಗಳು ಟ್ರಿಬ್ಯುನಲ್‌ಗಳಿಗೆ ಹೋಗಿವೆ ಎಂದು ಉಲ್ಲೇಖಿಸಿದ ಪ್ರಕಾಶ್ ರಾಜ್ ಅವರು, ಅಲ್ಲಿನ ಪ್ರಕರಣಗಳ ವಿಚಾರಣೆ ಮುಗಿಯಲು ಹಲವು ವರ್ಷಗಳು ಬೇಕಾಗಬಹುದು. ಅಂತಹ ಪರಿಸ್ಥಿತಿ ಕರ್ನಾಟಕದಲ್ಲಿ ನಿರ್ಮಾಣವಾಗಲು ಬಿಡಬಾರದು ಎಂದರು.
ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನದ ರೇಣುಕಾ ಸರಡಗಿ, ಕೆ.ನೀಲಾ, ಮೀನಾಕ್ಷಿ ಬಾಳಿ, ಕೆ.ಎಲ್. ಅಶೋಕ್, ಲಕ್ಷ್ಮಣ ಮಾಗಣಗೇರಾ, ರೇಣುಕಾ ಸಿಂಗೆ, ಸಲೀಂ ಚಿತ್ತಾಪುರಿ, ಮುಬೀನ್ ಅಹ್ಮದ್, ಮತ್ತಿತ್ತರರು ಉಪಸ್ಥಿತರಿದ್ದರು.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads