Literature
ಕಿರಣನ ಕೀಳರಿಮೆ
ಸಣ್ಣ ಕತೆ

ಪ್ರೊ.ಶೋಭಾದೇವಿ ಚೆಕ್ಕಿ
ನಿವೃತ್ತ ಉಸನ್ಯಾಸಕಿ
ಭಾನುವಾರ, ಸೆಪ್ಟೆಂಬರ್ 20, 20262 ನಿಮಿಷ ಓದು8 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಕ್ಷೇಮಲಿಂಗ ಮತ್ತು ಅನೀತಾ ಅವರದು ಅನುರೂಪದ ಜೋಡಿ. ಇವರ ಅನ್ಯೋನ್ಯ ದಾಂಪತ್ಯದ ಫಲವಾಗಿ ಮೂವರು ಗಂಡು ಮಕ್ಕಳು ಜನಿಸಿದರು. ಮೊದಲ ಮಗ ಸುಧೀರ. ಕೊನೆಯ ಮಗ ಶ್ರೀಧರ. ಮಧ್ಯದ ಮಗನೇ ಕಿರಣ್. ಮೂವರು ಮಕ್ಕಳನ್ನು ಅಷ್ಟೇ ಪ್ರೀತಿ ವಾತ್ಸಲ್ಯದಿಂದ ಬೆಳೆಸಿದರು. ಅದೇಕೋ ಕಿರಣ ನಿಗೆ, ತನ್ನ ತಂದೆತಾಯಿ ತನ್ನ ಅಣ್ಣ ಹಾಗೂ ತಮ್ಮನಿಗೆ ತೋರಿಸಿದಷ್ಟು ಪ್ರೀತಿ ತನಗೆ ತೋರುತ್ತಿಲ್ಲ ಅನಿಸತೊಡಗಿತು. ಚೊಚ್ಚಲು ಮಗ ಅಂತ ಸುಧೀರನಿಗೆ, ಕೊನೆಯ ಮಗ ಅಂತ ಶ್ರೀಧರನಿಗೆ, ಹೆಚ್ಚು ಕಾಳಜಿ, ಮಮತೆ ತೋರುವರೆಂದು ಮನದಲ್ಲಿ ಗಟ್ಟಿಯಾಗಿ ಕುಳಿತು ಬಿಟ್ಟಿತು. ಬೆಳೆದು ದೊಡ್ಡವನಾದಂತೆಲ್ಲ ಕಿರಣ್ ನಲ್ಲಿ ಕೀಳರಿಮೆ ಬೆಳೆಯುತ್ತಲೇ ಹೋಯಿತು.
ಕಿರಣ್ ಎಂ.ಎ., ಪಿಎಚ್,ಡಿ. ಪೂರೈಸಿದ. ಪದವಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕನಾಗಿ ನೇಮಕಗೊಂಡ. ಪೂರ್ವ ತಯಾರಿ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಚೆನ್ನಾಗಿ ಪಾಠ ಮಾಡಿದ. ಪದವಿ ವಿದ್ಯಾರ್ಥಿಗಳಿಗಾಗಿ ಪಠ್ಯಪುಸ್ತಕಗಳನ್ನು ರಚಿಸಿದ. ಕಾಲೇಜಿನ ಪ್ರಾಚಾರ್ಯರು ತನಗಿಂತ ಕಿರಿಯ ಉಪನ್ಯಾಸಕರಿಗೆ ಹೆಚ್ಚು ಗೌರವ ನೀಡುವರೆಂದೂ,ವಿದ್ಯಾರ್ಥಿಗಳೂ ಕೂಡಾ ಉಳಿದೆಲ್ಲ ಪ್ರಾಧ್ಯಾಪಕರಿಗೆ ಗೌರವ ಅಭಿಮಾನದಿಂದ ಕಂಡು ತನ್ನನ್ನು ಮಾತ್ರ ಕಡೆಗಣಿಸುವರೆಂದು ಭಾವಿಸತೊಡಗಿದ. ಅಷ್ಟೇ ಅಲ್ಲ ತನಗೆ ಯಾರೂ ಪ್ರಶಂಸೆ ಮಾಡುತ್ತಿಲ್ಲವೆಂದು ಕೀಳರಿಮೆಯನ್ನು ತಳೆದ.
ಕಿರಣ್ ಕನ್ನಡ ಪ್ರಾಧ್ಯಾಪಕಿ ಜ್ಯೋತಿಯನ್ನು ವರಿಸಿದ. ಸ್ನೇಹಜೀವಿಯೂ, ಭಾಷಣಕಾರ್ತಿಯೂ ಆದ ಜ್ಯೋತಿ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಾಧ್ಯಾಪಕಿಯಾದಳು. ಜ್ಯೋತಿಯ ಜನಾನುರಾಗವನ್ನು ಕಂಡು ಕಿರಣ್ ಖುಷಿಪಡದೆ ತನ್ನನ್ನು ಯಾರೂ ಖದರ್ ಮಾಡುತ್ತಿಲ್ಲವೆಂದು ಕೀಳರಿಮೆಯಿಂದ ಬಳಲ ತೊಡಗಿದ. ಅಷ್ಟೇ ಅಲ್ಲ ಹೆಣ್ಣು ಕೊಟ್ಟ ಮಾವ ಕೂಡಾ ತನ್ನ ನಾಲ್ಕು ಜನ ಅಳಿಯಂದಿರಲ್ಲಿ ತನ್ನನ್ನು ಅಷ್ಟಕ್ಕಷ್ಟೇ ನೋಡುತ್ತಾನೆ ಎಂತಲೇ ಭಾವಿಸಿದ. ಎಲ್ಲರೂ ತನ್ನನ್ನೇ ಕೇಳಬೇಕು, ತನಗೇ ಮಹತ್ವ ನೀಡಬೇಕು, ಎಲ್ಲಿಲ್ಲದ ಗೌರವ ಕೊಡಬೇಕು ಅಂತೆಲ್ಲ ಚಿಂತಿಸುವ ಕಿರಣ್ ಇದನ್ನೆಲ್ಲ ಸಿಗದೆ ಹೋದಾಗ ಏನನ್ನೋ ಕಳೆದುಕೊಂಡAತೆ ಚಡಪಡಿಸತೊಡಗಿದ.
ಕಿರಣ್ ನಿಗೆ ಮುದ್ದಾದ ಇಬ್ಬರು ಮಕ್ಕಳು ಜನಿಸಿದರು. ಮಗ ದ್ರುವ್ ಮಗಳು ಧೃತಿ. ಇಬ್ಬರೂ ವಿದ್ಯಾವಂತರಾಗಿ ರೂಪುಗೊಂಡರು. ಧೃತಿ ಮದುವೆಯಾಗಿ ಗಂಡನ ಮನೆಗೆ ತೆರಳಿದಳು. ಆಕೆ ತನ್ನ ಸಂಸಾರದಲ್ಲಿ ಬಿಜಿಯಾಗಿ ಬಿಟ್ಟಳು. ಮಗಳು ತನ್ನನ್ನು ಮರತೇ ಬಿಟ್ಟಳೆಂದು ಕಿರಣ್ ಚಿಂತೆಗೊಳಗಾದ. ದ್ರುವ್ ದೂರದ ಊರಲ್ಲಿ ಉದ್ಯೋಗ ನಿರತನಾದ. ಕೆಲಸದ ಒತ್ತಡದಿಂದಾಗಿ ಹೆತ್ತವರ ಬಳಿ ಬರುವುದು ಕಡಿಮೆ ಮಾಡಿದ. ದ್ರುವ್ ತನ್ನನ್ನು ಕಡೆಗಣಿಸುತ್ತಿರುವನೆಂದೇ ಭಾವಿಸಿದ.
ನಿವೃತ್ತಿ ಹೊಂದಿದ ಕಿರಣ್ ಯಾರೊಂದಿಗೂ ಬೆರೆಯದಾದ. ಯಾರ ಬಗ್ಗೆಯೂ ಸದಭಿಪ್ರಾಯ ತಳೆಯದಾದ. ಕೀಳರಿಮೆಯಿಂದಾಗಿ ಇದ್ದ ಕೆಲವೇ ಕೆಲವು ಗೆಳೆಯರಿಂದ, ಬಂಧುಗಳಿAದ ದೂರವಾದ. ಅಕ್ಷರಶ: ಒಬ್ಬೊಂಟಿಯಾದ. ಹೊರಗಡೆ ಹೋಗಿ ಒಂದಷ್ಟು ವಾಕಿಂಗ್ ಮಾಡಿ ಬರಲು, ಜ್ಯೋತಿ ಕೊಟ್ಟ ಸಲಹೆ ನಿರಾಕರಿಸಿಬಿಟ್ಟ. ಕೀಳರಿಮೆಯ ಕುತ್ತದಲ್ಲಿ ಕುದ್ದು ಕೃಶವಾಗತೊಡಗಿದ.
ಒಂದು ದಿನ ಪಾರ್ಶ್ವವಾಯು ರೋಗಕ್ಕೂ ತುತ್ತಾಗಿಬಿಟ್ಟ. ಮಾತೂ ಹೋಯಿತು. ಕೈಕಾಲು ಬಿದ್ದು ಹೋದವು. ಇಂತಹ ಕೆಟ್ಟ ಪರಿಸ್ಥಿತಿಯನ್ನು ತನಗೆ ತಾನೇ ತಂದುಕೊAಡ. ತನ್ನ ಸ್ವಾರ್ಥ ಚಿಂತನೆಯನ್ನು ಬಿಟ್ಟು ಎಲ್ಲರೊಂದಿಗೆ ಬೆರೆತು ಬಾಳಿದ್ದರೆ ಕೀಳರಿಮೆಯ ಕೀಟ ಕಿರಣ್ ನನ್ನು ಕೊರೆಯುತ್ತಿರಲಿಲ್ಲ ಅಲ್ಲವೇ?
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads