Kalaburagi
ಕಲಾವಿದರಿಗೆ ಸತ್ಯ ಚಿತ್ರಿಸುವ ಮನೋಭಾವನೆ ಮುಖ್ಯ: ಬಾಬುರಾವ್

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರು
ಮಂಗಳವಾರ, ಆಗಸ್ಟ್ 11, 20262 ನಿಮಿಷ ಓದು3 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
📸 ಬಿಸಿಲು ಆರ್ಟ ಕಲಾ ಗ್ಯಾಲರಿಯಲ್ಲಿ ಯುವ ಚಿತ್ರಕಲಾವಿದ ಸುರೇಶ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
Ads
ಕಲಬುರಗಿ: ಭಾವನೆಗಳ ಅಭಿವ್ಯಕ್ತಿಗೆ ಚಿತ್ರಕಲಾ ಮಾಧ್ಯಮ ಸಮರ್ಥವಾಗಿದ್ದು ಸತ್ಯವನ್ನು ಚಿತ್ರಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಸುಳ್ಳುಗಳ ಪ್ರಚಾರವೇ ಹೆಚ್ಚುತ್ತಿರುವ ಪ್ರಸ್ತುತ ದಿನಗಳಲ್ಲಿ ಸತ್ಯವನ್ನು ಬಿಂಬಿಸುವುದು ಚಿತ್ರಕಲಾದರ ಜವಾಬ್ದಾರಿಯಾಗಿದೆ ಎಂದು ಹಿರಿಯ ಚಿತ್ರ ಮತ್ತು ಶಿಲ್ಪಕಲಾವಿದ ಬಾಬುರಾವ್ ಎಚ್ ಅಭಿಪ್ರಾಯಪಟ್ಟರು.
ಕನ್ನಡ ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ರಾಮಮಂದಿರ ಹತ್ತಿರದ ಮಾನಕರ್ ಬಡಾವಣೆಯ ಬಿಸಿಲು ಆರ್ಟ ಗ್ಯಾಲರಿಯಲ್ಲಿ ಯುವ ಚಿತ್ರಕಲಾವಿದ ಸುರೇಶ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ವೇಗವಾಗಿ ಜಗತ್ತು ಬೆಳೆಯುತ್ತಿದೆ. ಆದರೆ, ಎಂಜಲು ಎಲೆಯ ಮೇಲೆ ಹೊರಳಾಡಿದರೆ ರೋಗ ಮತ್ತು ಸೋಂಕುಗಳು ನಿವಾರಣೆಯಾಗುತ್ತವೆ ಎಂಬ ಭ್ರಮೆ ಮತ್ತು ಸುಳ್ಳುಗಳನ್ನು ಜನಮಾನಸದಲ್ಲಿ ಬಿತ್ತಲಾಗುತ್ತಿದೆ. ಆದರಿಂದ ಸಮಾಜದ ಮುಖವಾಣಿ ಆಗಿರುವ ದೃಶ್ಯಕಲಾವಿದರು ಮತ್ತು ಸಾಹಿತಿಗಳು ವೈಜ್ಞಾನಿಕ ಚಿಂತನೆ ಮೂಲಕ ಸತ್ಯವನ್ನು ಜನರಿಗೆ ತಿಳಿಸುವ ಜವಾಬ್ದಾರಿ ಸಮಕಾಲೀನ ಸಂದರ್ಭದಲ್ಲಿ ಬಹಳ ಜರೂರಿದೆ ಎಂದರು.
ಚಿತ್ರಕಲಾವಿದ ಹಾಗೂ ಚಿತ್ರಕಲಾ ಶಿಕ್ಷಕ ಸೂರ್ಯಕಾಂತ ನಂದೂರ ಅವರು ಯುವ ಕಲಾವಿದ ಸುರೇಶ್ ಅವರು ರಚಿಸಿ ಪ್ರದರ್ಶಿಸದ ಕಲಾಕೃತಿಗಳನ್ನು ಕುರಿತು ಮಾತನಾಡಿ ಯುವ ಕಲಾವಿದರು ವಿಭಿನ್ನ ಕಲ್ಪನೆ ಮತ್ತು ಚಿಂತನೆಯಿAದ ಸಮಾಜದ ಅನೇಕ ಸಂಗತಿಗಳನ್ನು ಚಿತ್ರಕಲಾಕೃತಿಗಳ ಮೂಲಕ ಸಂಚಲನ ಮೂಡಿಸುತ್ತಿದ್ದಾರೆ. ಕಲಬುರಗಿ ಯುವ ಕಲಾವಿದರು ಹೊಸ ಕಲ್ಪನೆ, ವಿನೂತನ ಆಲೋಚನೆಯಿಂದ ವೀಕ್ಷಕರನ್ನು ಸೆಳೆಯುವಂತಹ ಚಿತ್ರಗಳನ್ನು ರಚನೆ ಮಾಡಿ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಮಾಧ್ಯಮ, ಚಿತ್ರದ ಆಕಾರ, ರೂಪ, ಲಯ, ಮೈವಳಿಕೆ, ಪ್ರಮಾಣ, ಬಣ್ಣಗಳಿಂದ ಚಿತ್ರಿಸುವ ಜೊತೆಗೆ ಸಮಾಜವನ್ನು ವಿವಿಧ ಆಯಾಮಗಳಲ್ಲಿ ನೋಡುವ ಮನಸ್ಸು ಬಹಳ ಮುಖ್ಯ. ಯುವ ಮತ್ತು ಕಿರಿಯ ಚಿತ್ರ ಕಲಾವಿದರು ಪ್ರಯೋಗಶೀಲತೆ, ಸೃಜನಶೀಲತೆ ಮತ್ತು ಹೊಸ ಮಾಧ್ಯಮಗಳ ಬಳಕೆ ಬಗ್ಗೆ ತಿಳಿದುಕೊಂಡು ಕಲಾಕೃತಿ ರಚಿಸಲು ಸಲಹೆ ನೀಡಿದರು.
ಬಿಸಿಲು ಆರ್ಟ ಗ್ಯಾಲರಿ ಮುಖ್ಯಸ್ಥ ಹಾಗೂ ಹಿರಿಯ ಚಿತ್ರಕಲಾವಿದ ವ್ಹಿ. ಬಿ. ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿ ಚಿತ್ರಕಲೆಯಲ್ಲಿ ಅಗಾಧ ಸೌಂದರ್ಯದ ಹೊಳವು ಇದೆ. ಮುಕ್ತ ಮನಸ್ಸಿನಿಂದ ವೀಕ್ಷಿಸಿದರೆ ಮಾತ್ರ ಕಣ್ಣಿಗೆ ಆನಂದ ಸಿಗುತ್ತದೆ. ಚಿತ್ರಕಲಾಕೃತಿಗಳ ಮಾರಾಟದ ಬೆಲೆಗಿಂತ ಅವುಗಳಲ್ಲಿರುವ ಆಂತರಿಕ ಸೌಂದರ್ಯ ಮತ್ತು ಪರಿಕಲ್ಪನೆಗೆ ಮೌಲ್ಯ ಹೆಚ್ಚು ಎಂದರು.
ಕಲಾವಿದರಾದ ಶ್ರೀಶೈಲ ಗುಡೇದ, ಅಂಬಾರಾಯ ಚಿನ್ಮಳ್ಳಿ, ಶೈಲಜ ಬೀರಾದಾರ, ನಿಂಗಣ್ಣ ಕೇರಿ, ಗಿರೀಶ್ ಕುಲಕರ್ಣಿ, ಶಶಿಕಾಂತ್ ಪಾಟೀಲ್, ರಾಮಗಿರಿ ಪೋಲಿಸ್ ಪಾಟೀಲ್, ಬಿ. ಎನ್. ಪಾಟೀಲ್, ಕುಪೇಂದ್ರ, ವಿಜಯಕುಮಾರ್ ಅವರಾದ, ದಾನಯ್ಯ ಚೌಕಿಮಠ, ಕವಿತಾ ಕಟ್ಟೆ ಮತ್ತು ಕಲಾಸಕ್ತರಾದ ಚಂದ್ರಶೇಖರ್ ಮ್ಯಾಳಗಿ, ಬಸವಂತಪ್ಪ ನಾಗನಹಳ್ಳಿ, ಬಸವರಾಜ ಕರದಳ್ಳಿ, ಮಲ್ಲಿಕಾರ್ಜುನ ಕುಂಟೋಜಿ, ಶಿವರಾಜ ಅಂಡಗಿ, ಸುನಂದಾ ಮ್ಯಾಳಗಿ, ಸುಲೋಚನಾ ಪರಚಂಡಿ, ಭಾಗ್ಯಶ್ರೀ ಕೌಳಸ ಮತ್ತು ಚಿತ್ರಕಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕು. ನಾಗವೇಣಿ ಪ್ರಾರ್ಥಿಸಿದರು. ಡಾ. ಪರಶುರಾಮ ಸ್ವಾಗತಿಸಿದರು. ಮಲ್ಲಿಕಾರ್ಜುನ್ ಮುಗುಳಿ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾರ್ಜುನ ಕೋರಳ್ಳಿ ವಂದಿಸಿದರು.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads