Specials
`ಇರಲಿ ಕನಸು'... ಆ ಕನಸೇ ಇಂದು ಜಗತ್ತನ್ನು ಬೆಸೆದಿದೆ
ರಾಜಧಾನಿಯಿಂದ

ಸೇಡಂ ಶ್ರೀನಿವಾಸ
ಹಿರಿಯ ಪತ್ರಕರ್ತರು ಬೆಂಗಳೂರು
ಶನಿವಾರ, ಸೆಪ್ಟೆಂಬರ್ 19, 20262 ನಿಮಿಷ ಓದು4 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಔಷಧ ದೇಹವನ್ನು ಗುಣಪಡಿಸುತ್ತದೆ, ಆದರೆ, ಕನಸಿನ ನಂಬಿಕೆ ಮನಸ್ಸನ್ನು ಗುಣಪಡಿಸುವ ಶಕ್ತಿ ಇದೆ..
ಮಾನವನ ದೇಹದ ಅತ್ಯಂತ ಶಕ್ತಿ ಶಾಲಿ ಔ಼಼ಷಧ ಯಾವುದು ? “ ಕನಸಿನ ನಂಬಿಕೆ “
ಕನಸು ಇಲ್ಲದ ಮನುಷ್ಯ, ದಿಕ್ಕು ಇಲ್ಲದ ದೋಣಿಯಂತೆ. ಸಮುದ್ರ ಇದೆ. ದೋಣಿಯೂ ಇದೆ. ಆದರೆ ಎಲ್ಲಿಗೆ ಹೋಗಬೇಕು ಎಂಬುದು ಗೊತ್ತಿಲ್ಲ. ಹಾಗಾಗಿ ಬದುಕಿನಲ್ಲಿ ಎಲ್ಲವೂ ಇರಲಿ ಅದು ಒಂದು ಉತ್ತಮ ಕನಸಾಗಿರಲಿ. ಕನಸಿಲ್ಲದ ಬದುಕು, ಬಣ್ಣವಿಲ್ಲದ ಚಿತ್ರದಂತೆ ಎಂದು ಕವಿಯೊಬ್ಬರು ಹೇಳಿದ್ದು ಸದಾ ಜ್ಞಾಪಿಸಿಕೊಳ್ಳಿ. ಪ್ರತಿಯೊಬ್ಬ ಮನುಷ್ಯನ ಜೀವನದ ಯಶಸ್ವಿಯ ಹಿಂದಿರುವುದು ಅವನ ಕನಸು. ಹಕ್ಕಿಗೆ ರೆಕ್ಕೆ ಹೇಗೋ. ಮನುಷ್ಯನಿಗೆ ಕನಸು ಹಾಗೆ. ರೆಕ್ಕೆ ಇಲ್ಲದ ಹಕ್ಕಿ ಹಾರಲಾರದು. ಕನಸು ಇಲ್ಲದ ಮನುಷ್ಯ ಬೆಳೆಯಲಾರನು. ಹಾಗಾಗಿ ನಮ್ಮ ಜೀವನದಲ್ಲಿ ಕಷ್ಟ ಇರಲಿ, ನೋವು ಇರಲಿ, ಸವಾಲು ಇರಲಿ, ಸಮಸ್ಯೆ ಎದುರಾಗಲಿ ಆದರೆ ಒಂದು ಕನಸು ಮಾತ್ರ ಖಂಡಿತ ಇರಲಿ. ಕನಸು ಮತ್ತು ಪರಿಶ್ರಮಗಳು ಹೊಂದಿಕೊAಡರೆ ಅದೊಂದು ಸಹಸ್ರ ಆಯುಧ ಸಮಾನ. ಎಂಥ ಸನ್ನಿವೇಶದಲ್ಲೂ ಸಮತೋಲನವಾಗುವ ರೀತಿಯಲ್ಲಿ ಮಾರ್ಪಡಿಸಿಕೊಳ್ಳಬಹುದು. ಕೆಲವೊಮ್ಮೆ ಮನುಷ್ಯನನ್ನು ಬದುಕಿಸುವುದು ಔಷಧಿಗಿಂತ ಹೆಚ್ಚಾಗಿ ಒಂದು ಬಲವಾದ ಒಂದು ಕಾರಣ, ಒಂದು ಕನಸು, ಒಂದು ಮಾತು, ಒಬ್ಬ ಪ್ರೀತಿಯ ವ್ಯಕ್ತಿ ಅಥವಾ “ನಾನು ಚೆನ್ನಾಗಿ ಬದುಕುತ್ತೇನೆ “ಎನ್ನುವ ಅಂತರಾಳದ ಬಲವಾದ ಕನಸಿನ ನಂಬಿಕೆ.
ಬದುಕಿನ ಭಾಷೆಯಲ್ಲಿ ಇದಕ್ಕಿರುವ ಹೆಸರು ಒಂದೇ ಒಂದು ಅದು “ ಕನಸಿನ ನಂಬಿಕೆ” ಕೆಲವೊಮ್ಮೆ ದೇವರು ಅದ್ಬುತವನ್ನು ಮಾಡುವುದಿಲ್ಲ, ಆದರೆ ಅದ್ಬುತ ನಡೆಯುವಷ್ಟು ಕನಸಿನ ನಂಬಿಕೆಯನ್ನು ನಮ್ಮೊಳಗೆ ಹುಟ್ಟಿಸುತ್ತಾನೆ. ಹಾಗಾಗಿ ಎಂದಿಗೂ ನಾವೇ ತಪ್ಪಾಗಿ ಮಾತಾಡುವುದು . . . ಹಣೆಬರವನ್ನು ಶಪಿಸುವುದು, ನನ್ನ ಕೈಯಲ್ಲಿ ಆಗಲ್ಲ ಎಂದು ನೊಂದುಕೊಳ್ಳುವುದು, ಬೇಡದ ಕೀಳರಿಮೆ ಬೆಳೆಸಿಕೊಳ್ಳುವುದು ಸರ್ವತಾ ಬೇಡ.
ನಾವು ಎಂತಹ ಕನಸು ಕಾಣುತ್ತೇವೆಯೋ ಹಾಗಯೇ ನಮ್ಮ ವ್ಯಕ್ತಿತ್ವ ರೂಪಗೊಳ್ಳುತ್ತದೆ. ದೊಡ್ಡ ಅವಿಸ್ಕಾರಗಳ ಹಿಂದೆ ಒಂದು ಕನಸು ಇದ್ದೇ ಇರುತ್ತದೆ. ಆ ಕನಸೇ ಇಂದು ಜಗತ್ತನ್ನು ಬೆಸೆದಿದೆ.
ನಾವು ರಾತ್ರಿ ಮಲಗಿದಾಗ ಕಾಣುವ ಕನಸು ಇದಲ್ಲ. ಅದು ನಿದ್ರೆಯ ಕನಸು. ನಾವು ಮಾತನಾಡುತ್ತಿರುವುದು ಎಚ್ಚರದ ಕನಸಿನ ಬಗ್ಗೆ, ನಮ್ಮನ್ನು ನಿದ್ದೆ ಮಾಡಲು ಬಿಡದೇ ಇರುವಂಥದ್ದೇ ನಿಜವಾದ ಕನಸು. ಇದು ನಮ್ಮದಾಗಿರಲಿ. ಡಾ. ಎ ಪಿ ಜೆ ಅಬ್ದಲ್ ಕಲಾಂ ಅವರು ಹೇಳಿದಂತೆ “ಕನಸು ಕಾಣಿ, ಕನಸು ಕಾಣಿ, ಕನಸುಗಳು ಅಲೋಚನೆಗಳಾಗಿ ಬದಲಾಗುತ್ತವೆ. ನಂತರ ಆ ಆಲೋಚನೆಗಳು ಕಾರ್ಯಗಳಾಗಿ ಬದಲಾಗುತ್ತವೆ.
ಕನಸು ಎಂದರೆ ನಮ್ಮ ಭವಿಷ್ಯದ ಒಂದು ಚಿತ್ರ. ನಾವು ಹೇಗಿರಬೇಕು, ಏನಾಗಬೇಕು, ಏನನ್ನು ಸಾಧಿಸಬೇಕು ಎಂಬುದರ ಕಲ್ಪನೆ. ಕನಸು ಏಕೆ ಇರಬೇಕು ಎಂಬ ಪ್ರಶ್ನೆಗೆ ಕನಸು ಬದುಕಿಗೆ ಆರ್ಥ ಕೊಡುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಏಳಲು ಒಂದು ಕಾರಣ ಬೇಕು. ಆ ಕಾರಣವೇ ಕನಸು.
ಕನಸು ಇರುವವನು ಸುಮ್ಮನೆ ದಿನ ದೂಡುವುದಿಲ್ಲ. ದಿನವನ್ನು ಸದ್ಬಳಕೆ ಮಾಡಿಕೊಳ್ಳುತ್ತಾನೆ. ಕನಸು ಕಷ್ಟವನ್ನು ಮರೆಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ದಾರಿಯಲ್ಲಿ ನೂರಾರು ಕಲ್ಲುಗಳು ಅಡ್ಡ ಬರುವುದು ಸಹಜ. ಕನಸು ಇಲ್ಲದವನು ಅಡ್ಡ ಬಂದ ಮೊದಲ ಕಲ್ಲಿಗೆ ನಿಂತು ಬಿಡುತ್ತಾನೆ. ಕನಸು ಇರುವವನು ಆ ಕಲ್ಲನ್ನೇ ಮೆಟ್ಟಲು ಮಾಡಿಕೊಂಡು ಎತ್ತರ ಬೆಳೆಯಲು ಪ್ರಯುತ್ನಿಸುತ್ತಾನೆ.
ಕನಸು ನಮ್ಮನ್ನು ದೊಡ್ಡವರನ್ನಾಗಿ ಮಾಡುತ್ತದೆ. ನಾವು ಎಷ್ಟು ದೊಡ್ಡ ಕನಸು ಕಾಣುತ್ತೇವೋ, ಅಷ್ಟು ದೊಡ್ಡವರಾಗಿ ನಾವು ಬೆಳೆಯುತ್ತೇವೆ. ಸಣ್ಣ ಕನಸು ಕಂಡರೆ ಸಣ್ಣವರಾಗಿಯೇ ಉಳಿಯುತ್ತೇವೆ. ದೊಡ್ಡ ಕನಸು ನಮ್ಮ ಯೋಚನೆ, ನಮ್ಮ ಶ್ರಮ, ನಮ್ಮ ವ್ಯಕ್ತಿತ್ವವನ್ನೇ ದೊಡ್ಡದು ಮಾಡುವ ಶಕ್ತಿ ಇಂತಹ ಕನಸಿಗೆ ಮಾತ್ರ ಇದೆ. ಕನಸು ಇರಲಿ ಆಸೆ ಬೇಡ, ಪ್ರಯತ್ನ ಅಗತ್ಯ. ಎಲ್ಲ ಆಸೆಗಳು ಕನಸುಗಳಲ್ಲ. ಇಂದು ಏನೆಲ್ಲ ತಿನ್ನಬೇಕು ಎಂಬುದು ಆಸೆ. ಅದಕ್ಕೆ ಪ್ರಯತ್ನ ಮಾಡಿದರೆ ಒಂದು ದಿನ ನಾವೇ ಒಂದು ರೆಸ್ಟೋರೆಂಟ್ ತೆರೆಯುವಂತೆ ಮಾಡುತ್ತದೆ. ಆಸೆ ಸುಮ್ಮನೆ ಬಯಸಿದರೆ ಸಾಲದು. ಆ ಕನಸಿಗೆ ಪ್ರಯತ್ನ ಮಾಡಿದಾಗ ಆ ಕನಸಿಗೆ ಬೆಲೆ ಬರುತ್ತದೆ. ನಿದ್ದೆ, ಆರಾಮ, ಭಯ ಮತ್ತು ಜನರ ಮಾತು ಎಲ್ಲವನ್ನೂ ಬೆಲೆಯಾಗಿ ಪರಗಣಿಸಬೇಕು. ಆಗ ಆಸೆ ಈಗಲೇ ನೆರವೇರಬೇಕು ಎನ್ನುತ್ತದೆ, ಮುಂದೆ ಇದು ಕನಸು ಕಾಯಲು ಪ್ರೇರಣೆಯೊಂದಿಗೆ ಕಲಿಸುತ್ತದೆ.
ಕನಸು ಕಾಣುವುದು ಮೊದಲ ಹೆಜ್ಜೆ ಮಾತ್ರ. ಅದನ್ನು ನನಸು ಮಾಡಲು ಒಂದು ಮಾರ್ಗವಿದೆ. ಮೊದಲು ಕನಸನ್ನು ಬರೆದಿಡಿ. ಮನಸ್ಸಿನಲ್ಲಿರುವ ಕನಸು ಮಂಜಿನAತೆ. ಬರೆದ ಕನಸು ಕಲ್ಲಿನ ಶಾಸನದಂತೆ. ಒಂದು ಬರೆಯುವ ದಿನಚರಿ ಸ್ಪಷ್ಟವಾಗಿರಲಿ.
ದೊಡ್ಡ ಕನಸನ್ನು ನೋಡಿ ಹೇದರಬೇಡಿ. ಅದನ್ನು ಸಣ್ಣ ಸಣ್ಣ ಗುರಿಗಳಾಗಿ ವಿಂಗಡಿಸಿಕೊAಡು ಪ್ರತಿದಿನ ಒಂದು ಸಣ್ಣ ಪ್ರಯತ್ನ ನಿಮ್ಮದಾಗಲಿ. ಪ್ರತಿ ದಿನದ ಸಣ್ಣ ಗೆಲುವೇ ಒಂದು ದಿನ ದೊಡ್ಡ ಕನಸನ್ನು ಗೆಲ್ಲಿಸುತ್ತದೆ. ಕನಸನ್ನು ನಂಬುವವರ ಆತ್ಮೀಯರ ಬಳಿ ಮಾತ್ರ ಹಂಚಿಕೊಳ್ಳಿ. ಇಲ್ಲಿ ವಿಶ್ವಾಸ ವ್ಯಕ್ತಯಾಗಿರಲಿ. ಇಲ್ಲವಾದಲ್ಲಿ ಹೀಯಾಳಿಸುವವರ ಬಳಿ ಹಂಚಿಕೊAಡಲ್ಲಿ ನಿಮ್ಮ ಕನಸೇ ಜೀವಂತ ಇಲ್ಲದ ದೇಹ ಮಾತ್ರ. ಕನಸಿನ ದಾರಿಯ ಯಶಸ್ವಿ ಮಧ್ಯೆ ಸೋಲು, ಏಳು ಬೀಳು ಸಹಜ ಪ್ರಕ್ರಿಯೆ. ಒಮ್ಮೆ ಸೋತ ಮಾತ್ರಕ್ಕೆ ಕನಸನ್ನೇ ಬದಲಾಯಿಸಿಬೇಡಿ. ದಾರಿಯನ್ನು ಬದಲಾಯಿಸಿ.
ಪ್ರತಿಯೊಬ್ಬರ ಬದುಕಿನಲ್ಲಿ ಎರಡು ದಿನ ಬಹಳ ಪ್ರಮುಖವಾದದ್ದು. ಒಂದು ನಾವು ಹುಟ್ಟಿದ ದಿನ ಇನ್ನೊಂದು ನಾವು ಏಕೆ ಹುಟ್ಟಿದ್ದೇವೆ ಎಂದು ತಿಳಿದ ದಿನ. ಆ ಎರಡೆನೇ ದಿನವೇ ನಾವು ಕಂಡ ಕನಸಿನ ದಿನ.
ನಿಮ್ಮ ಹತ್ತಿರ ಮತ್ತು ಸುತ್ತಲಿನ ಜನರು ಏನು ಹೇಳುತ್ತಾರೆ ಎಂದು ಯೋಚಿಸಬೇಡಿ. ನಿನ್ನ ಬಳಿ ಎಷ್ಟು ಹಣ ಇದೆ ಎಂದು ಯೋಚಿಸಬೇಡಿ.
ಒಂದು ಹಂತದಲ್ಲಿ ಪದವಿ ಇದೆಯೋ ಇಲ್ಲವೋ ಎಂದು ಯೋಚಿಸವುದು ಬೇಡ.
ಕನಸು ಏನು? ಅದಕ್ಕೆ ಉತ್ತರ ಸಿಕ್ಕರೆ ಸಾಕು ದಾರಿ ತಾನಾಗಿಯೇ ಸಿಗುತ್ತದೆ. ಒಟ್ಟಾರೆ, ಜೀವನದಲ್ಲಿ ಒಂದು ಕನಸು ಇರಲಿ. ಆಸೆ ಕ್ಷಣಿಕ, ಕನಸು ಶಾಶ್ವತ. ಕನಸನ್ನು ನನಸು ಮಾಡಲು ತ್ಯಾಗ, ಪರಿಶ್ರಮ, ತಾಳ್ಮೆ ಬೇಕು.ಅಂದಾಗ ಮಾತ್ರ ಕನಸು ನನಸಾಗುವಲ್ಲಿ ಸಾಧ್ಯ. ಕನಸು ಕಾಣುವಲ್ಲಿ ಯಾವುದೇ ಹಣ ಬೇಕಿಲ್ಲ. ಯಾವುದೇ ಜಾತಿ, ವಯಸ್ಸಿನ ಮಿತಿ ಇಲ್ಲ. ಕನಸು ಎಲ್ಲರಿಗೂ ಉಚಿತವಾಗಿ ಸಿಗುವ ಶಕ್ತಿ. ನಾಡಿನ ದಾಸರೊಬ್ಬರು ಹೇಳಿದಂತೆ . . “ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ ‘ . . ಇವೆರಡರ ಮಧ್ಯೆ ಇರುವ ಬದುಕನ್ನು ಆರ್ಥಪೂರ್ಣವಾಗಿ ಸಾಗಿಸಿಕೊಂಡು ಹೋಗುವುದೇ ಇರಲಿ ನಿಜವಾದ “ ನಮ್ಮ ಕನಸು''. ಸುಧಾ ಮೂರ್ತಿ ಅವರು ಹೇಳಿದಂತೆ . . “ ಗುರಿ ಇದ್ದು ಪ್ರಯತ್ನಿಸದೇ ಇದ್ದರೆ, ಅದು ಬರೀ ಕನಸು, ಗುರಿ ಇಲ್ಲದೇ ಪ್ರಯತ್ನಿಸುವುದು ಟೈಮ್ ಪಾಸ್, ಗುರಿ ಹಾಗೂ ಪ್ರಯತ್ನ ಎರಡೂ ಇದ್ದರೇ, ಆ ವ್ಯಕ್ತಿ ಜಗತ್ತನ್ನೇ ಬದಲಾಯಿಸಬಲ್ಲ . .
ಯಾವ ದೇಶಕ್ಕೆ ಅಭಿವೃದ್ದಿಯ ಕನಸು ಇಲ್ಲವೋ ಅದು ಪ್ರಗತಿ ಹೊಂದಲು ಸಾಧ್ಯವಿಲ್ಲ. ಕನಸನ್ನು ನನಸಾಗಿಸಲು ಸೋಮಾರಿತನವನ್ನು ಬದಿಗೊತ್ತಿ ಮುಂದೆ ಬನ್ನಿ. ಮಕ್ಕಳಿಗೆ ಉತ್ತಮ ಭವಿಷ್ಯದ ಕನಸನ್ನು ಹುಟ್ಟಿಸಿ.. ಆದರೆ “ನೀನು ಚಿನ್ನಾಗಿ ಓದಿ ಡಾಕ್ಟರ್ / ಇಂಜನಿಯರ್ / ಐಎಎಸ್/ಏಪಿಎಸ್ ಇತ್ಯಾದಿ ಆಗಿ ಚಿನ್ನಾಗಿ ಲಕ್ಷಾಂತರ ರೂಪಾಯಿ ಸಂಪಾದಿಸು” ಎಂಬ ಲಾಲಸೆ ಹುಟ್ಟಿಸುವುದು ಕನಸಲ್ಲ, ಬದಲಾಗಿ ಈ ಸಮಾಜಕ್ಕೆ / ದೇಶಕ್ಕೆ ಓರ್ವ ಆದರ್ಶ ಡಾಕ್ಟರ್/ಇಂಜನಿಯರ್/ ದೊಡ್ಡ ದೊಡ್ಡ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಅರ್ಹನಾಗಬಲ್ಲ ಕನಸುಗಳನ್ನು ಹುಟ್ಟುಹಾಕಿ. ಆ ಕನಸು ಹೀಗಿರಲಿ. . .ಕನಸಿದ್ದಲ್ಲಿ ಸಾಧನೆ ಇದೆ. . ಸಾಧನೆಯಲ್ಲಿ ಅಭಿವೃದ್ದಿ ಇದೆ. ಬದುಕಿನಲ್ಲಿ ಏನೇ ಇರಲಿ, ಒಂದು ಕನಸು ಇರಲಿ. . . ಇರಲಿ ಕನಸು.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads