📅 ಮಂಗಳವಾರ, ಅಕ್ಟೋಬರ್ 6, 2026
Myna News Logo
ಮೈನಾ

ಸೇಡಂ

ನ್ಯೂಸ್

ಕನ್ನಡ ದಿನ ಪತ್ರಿಕೆ
Editor

ಪ್ರಧಾನ ಸಂಪಾದಕರು:

ಮಹಿಪಾಲರೆಡ್ಡಿ

Ads
Specials

ಬಡಿಸುವುದು ಒಂದು ಕಲೆ: ಆಹಾರ ಉಳಿಸುವುದು ದೇಶಸೇವೆ

ರಾಜಧಾನಿಯಿಂದ

ಸೇಡಂ ಶ್ರೀನಿವಾಸ,

ಸೇಡಂ ಶ್ರೀನಿವಾಸ,

ಹಿರಿಯ ಪತ್ರಕರ್ತರು ಬೆಂಗಳೂರು

ಶನಿವಾರ, ಸೆಪ್ಟೆಂಬರ್ 19, 20262 ನಿಮಿಷ ಓದು3 ವೀಕ್ಷಣೆಗಳು
ಸುದ್ದಿ ಹಂಚಿಕೊಳ್ಳಿ:
ಬಡಿಸುವುದು ಒಂದು ಕಲೆ: ಆಹಾರ ಉಳಿಸುವುದು ದೇಶಸೇವೆ
ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಬಡಿಸುವುದು ಕೇವಲ ಕೆಲಸವಲ್ಲ , ಅದೊಂದು ಕಲೆ, ಅಡುಗೆ ಮಾಡುವುದು ಎಷ್ಟು ಮುಖ್ಯವೋ, ಬಡಿಸುವುದು ಅಷ್ಟೇ ಪ್ರಮುಖವಾದದ್ದು. ಪ್ರೀತಿಯಿಂದ, ಅಳತೆಯಿಂದ, ಅವರವರ ಅವಶ್ಯಕತೆಗೆ ತಕ್ಕಂತೆ ಬಡಿಸಿದಾಗ ಮಾತ್ರ ಅನ್ನಕ್ಕೆ ಬೆಲೆ ಮತ್ತು ಗೌರವ ಸಿಗುತ್ತದೆ. ಆದರೆ ಇಂದು ಹೆಚ್ಚು ಬಡಿಸಿ, ಹೆಚ್ಚು ಚೆಲ್ಲಿ, ಕೊನೆಗೆ ಕಸದ ತೊಟ್ಟಿಗೆ ಎಸೆಯುವ ಪರಿಹಾರ ನಮ್ಮಲ್ಲಿ ಇಂದಿಗೂ ಹೆಚ್ಚಾಗಿದೆ. ಇದು ತಪ್ಪು ಮಾತ್ರವಲ್ಲ, ದೇಶದ ಹಿತದ ದೃಷ್ಟಿಯಿಂದಲೂ ಅಪಾಯಕಾರಿ. ಬಡಿಸುವ ಕೈಯಲ್ಲಿ ಪ್ರೀತಿ, ಶಿಸ್ತು ಮತ್ತು ಸಮಾನತೆಯ ಭಾವ ಇರಬೇಕು. ನಮ್ಮ ನಾಡು/ದೇಶದ (ಇಂದು ವಿದೇಶಗಳಲ್ಲಿಯೂ) ಎಲೆ ಊಟದ ನಮ್ಮ ದೇಶದ ಸಂಸ್ಖçತಿಯಲ್ಲಿ ಬಡಿಸುವವರೇ ನಿಜವಾದ ಅತಿಥೇಯರು “ಹಸಿವಿನ ಬೆಲೆ ಅರಿಯಬೇಕು “ ನಮ್ಮ ದೇಶದಲ್ಲಿ ಇಂದಿಗೂ ಕೋಟ್ಯಾಂತರ ಜನರು ಒಂದು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ಒಂದು ಕಡೆ ಮದುವೆ, ಹೋಟಲ್, ಪಾರ್ಟಿಗಳಲ್ಲಿ ತಟ್ಟೆ ತುಂಬಾ ಬಡಿಸಿ ಅರ್ಧಕ್ಕಿಂತ ಹೆಚ್ಚು ಎಸೆಯಲಾಗುತ್ತದೆ. ಇನ್ನೊಂದು ಕಡೆ ಅದೇ ಆಹಾರಕ್ಕಾಗಿ ಮಕ್ಕಳು ಪರಿತಪಿಸುತ್ತಿರುತ್ತಾರೆ. ನಾವು ಎಸೆಯುವ ಒಂದು ತುತ್ತು ಅನ್ನದ ಹಿಂದೆ ರೈತನ ೬-೮ ತಿಂಗಳ ಬೆವರು, ನೀರು, ಮಣ್ಣಿನ ಶ್ರಮವಿದೆ ಎಂದು ಮರೆಯಬಾರದು. ಆಹಾರವನ್ನು ಹಾಳು ಮಾಡುವುದು ರೈತನ ಶ್ರಮಕ್ಕೆ ಮತ್ತು ದೇಶದ ಆರ್ಥಿಕತೆಗೆ ವಿಶೇಷವಾಗಿ ಆಹಾರಕ್ಕಾಗಿ ಅಳುವ ಬಡ ಮಕ್ಕಳಿಗೆ ಮಾಡುವ ಅಪಮಾನ. ದೇವರು ನೀಡಿದ ಅನ್ನವನ್ನು ಬೇಕಾಬಿಟ್ಟಿ ಹಾಳು ಮಾಡಬಾರದು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಊಟದ ಮುಂದೆ ಕುಳಿತಾಗ “ಅನ್ನ ಬ್ರಹ್ಮ” ‘ಅನ್ನಪೂರ್ಣೇಶ್ವರಿ ತಾಯಿ ‘ ಎಂದು ಕೈ ಮುಗಿದು ಊಟದ ಮಧ್ಯೆ ದೇವರನ್ನು ಸ್ಮರಿಸುತ್ತಾ ಊಟ ಮಾಡುವ ಸಂಪ್ರದಾಯ ಇಂದಿಗೂ ಇದೆ.. ಆದರೂ ಕ್ರಮೇಣ ಈ ಸಂಸ್ಕೃತಿ ಇಂದು ಮರೆಯಾಗುತ್ತಿದೆ. ಬಫೆ ಪದ್ದತಿಯಲ್ಲಿ ತಟ್ಟೆ ತುಂಬಾ ಹಾಕಿಸಿಕೊಂಡು ಇಲ್ಲವೇ ಸ್ವತ: ಹಾಕಿಕೊಂಡು , ರುಚಿ ನೋಡಿ ಬಿಸಾಡುವುದು ಆಧುನಿಕತಯ ಸಾಮಾನ್ಯ ಪದ್ದತಿ ಆಗಿದೆ. ಕೆಲವರು ಬಫೆ ಪದ್ದತಿಯಲ್ಲಿ ಎಷ್ಟು ಸಲ ಹೋಗಿ ಬಡಸಿಕೊಳ್ಳುವುದು ಇಲ್ಲವೇ ಹಾಕಿಸಿಕೊಳ್ಳುವುದು ಎಂಬ ಸೋಮಾರಿತನವೂ ಒಂದು ಭಾಗವಾಗಿ ಅವಶ್ಯಕತೆಗಿಂತ ಹೆಚ್ಚು ಹಾಕಿಸಿಕೊಂಡು ನಂತರ ಚೆಲ್ಲುವುದು ಸಾಮಾನ್ಯ. “ಅವಶ್ಯಕತೆ ತಕ್ಕಂತೆ ಬಡಿಸುವುದೇ / ಬಡಿಸಿಕೊಳ್ಳುವುದೇ ಜಾಣ್ಮೆ’ ಬಡಿಸುವ ಕಲೆ ಅಂದರೆ ಅತಿಥಿಯ ಹಸಿವು, ವಯಸ್ಸು, ಅಭಿರುಚಿಯನ್ನು ಅರಿತು ಬಡಿಸುವುದು ಇಲ್ಲವೇ ಬಡಿಸಿಕೊಳ್ಳುವುದು ಒಂದು ನಿಜವಾದ ಕಲೆ. ಎಲೆ/ತಟ್ಟೆಯಲ್ಲಿ ಅನ್ನ ಬಡಿಸುವಾಗ ಇಲ್ಲವೇ ಬಡಿಸಿಕೊಳ್ಳುವಾಗ ಚೆಲ್ಲದಂತೆ ರೂಢಿಸಿಕೊಳ್ಳುವುದು ಇಂದಿನ ಮೊದಲ ಪಾಠವಾಗಲಿ. ಎಲೆಯ ಅಂಚಿಗೆ ಹೋಗಿ ಸಾರು, ಪಾಯಸ ಚೆಲ್ಲಿದರೆ ಎಲೆ ಅಶುದ್ದವಾಗುತ್ರದೆ. ಊಟ ಮಾಡುವವರಿಗೆ ಅಸಹ್ಯವಾಗುತ್ತದೆ. ಒಂದು ಕಾಳು ಅನ್ನ, ಒಂದು ಹನಿ ಮೊಸರು ಚೆಲ್ಲಿದರೂ ಅದು ವ್ಯರ್ಥ ಅಲ್ಲವೇ.? ಲಕ್ಷಾಂತರ ಎಲೆಗಳಲ್ಲಿ ದಿನವೂ ಚೆಲ್ಲುವ ಆಹಾರವನ್ನು ಲೆಕ್ಕ ಹಾಕಿದರೆ ಅದು ಟನ್ ಗಟ್ಟಲೇ ಆಗುತ್ತದೆ. ಹಾಗಾಗಿ ಚೆಲ್ಲದಂತೆ ಬಡಿಸುವುದು/ ಬಡಿಸಿಕೊಳ್ಳುವುದು ಕೇವಲ ಶಿಸ್ತಲ್ಲ, ಅದು ರಾಷ್ಟçದ ಸಂಪತ್ತು ಉಳಿಸುವ ದೊಡ್ಡ ಕಾರ್ಯ. ಅನ್ನವು ಬ್ರಹ್ಮ ದೇವರು ತುಳಿಯುವಂತೆ ಮಾಡಬಾರದು ಎಂಬುದು ನನ್ನ ಒಳಗೊಂಡAತೆ ಅನೇಕಾನೇಕ ಜನರ ಮನದಾಳದ ಇಂಗಿತ. ಬಡಿಸುವಲ್ಲಿ ತಾರತಮ್ಮ, ಸಾಲು ಪದ್ದತಿ ಕಡೆಗಣನೆ ಸಲ್ಲದು. ಸಾಲಿನಲ್ಲಿ ಕುಳಿತವರೆಲ್ಲರೂ ಒಂದೇ. ಮುಂದೆ ಕುಳಿತವರು ಗಣ್ಯರು, ಸಂಬAಧಿಕರು, ನಂತರ ಸಾಲಿನಲ್ಲಿ ಕುಳಿತವರು ಸಾಮಾನ್ಯರು ಎಂಬ ಭೇದ ಮಾಡಲೇ ಬಾರದು. ಅಂದಾಗ ಮಾತ್ರ ಬಡಿಸುವಲ್ಲಿ ಪಾವಿತ್ರತೆ ಉಳಿಯುತ್ತದೆ. ಎಲ್ಲರ ಎಲೆಗೂ ಸಮನಾಗಿ, ಸಮ ಪ್ರಮಾಣದಲ್ಲಿ ನಗುಮೊಗದಿಂದ ಬಡಿಸಬೇಕು. ಕೆಲವರು ಇಷ್ಟದವರಿಗೆ/ಸಂಬAಧಿಕರಿಗೆ ಹೆಚ್ಚು ತುಪ್ಪ, ಸಿಹಿ ಒಳಗೊಂಡ ಮಹತ್ವದ ಪದಾರ್ಥಬಡಿಸಿ, ಉಳಿದವರನ್ನು ನಿರ್ಲಕ್ಷಿಸುವುದು ಸಂಸ್ಕೃತಿಗೆ ವಿರುದ್ದ. ಬಡಿಸುವವನ ಕೈ ದೇವರ ಕ್ಯೆ ಇದ್ದಂತೆ. ಅದು ಎಲ್ಲರಿಗೂ ಸಮಾನವಾಗಿರಬೇಕು. ಮದುವೆ, ಜಾತ್ರೆ, ಉತ್ಸವಗಳಲ್ಲಿ, ಆರಾಧನೆಗಳಲ್ಲಿ ಮರಳಿ ಬರುವುದು ಕಷ್ಟ ಎಂಬ ಹಿನ್ನಲೆಯಲ್ಲಿ ಅವಶ್ಯಕತೆಗಿಂತ ಹೆಚ್ಚು ಹಾಕಿಸಿಕೊಳ್ಳುವುದು ಮತ್ತು ಬಂದ ಪದಾರ್ಥ ಎಲ್ಲವನ್ನೂ ಹಾಕಿಸಿಕೊಳ್ಳುವುದು ಸಾಮಾನ್ಯ. ಈ ದಿಸೆಯಲ್ಲಿ ಆಯೋಜಕರು ಹೆಚ್ಚಿನ ಮುತುವರ್ಜಿ ವಹಿಸಿ ೨-೩ ಸಲ ಆದರೂ ಸರಿ ಮರಳಿ ಮರಳಿ ಕೇಳುವ ಪದ್ದತಿ ಜಾರಿಗೆ ಮತ್ತಷ್ಟು ಸುಧಾರಣೆ ಆಗಬೇಕಾಗಿದೆ. ಇಂತಹ ಬೃಹತ್ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಹೆಚ್ಚು ಸೇವಾ ಮನೋಭಾವನೆ ಹೊಂದಿರುವ ಮಾನವ ಸಂಪನ್ಮೋಲ ಅಗತ್ಯತೆ ಇದೆ. ಪಂಕ್ತಿಯಲ್ಲಿ ಬಡಿಸುವವರು ಹತ್ತಿರ ಬಂದಾಗ ಇನ್ನಷ್ಟು-ಮತ್ತಷ್ಟು..ಇನ್ನೂ ಸ್ವಲ್ಪ..ಇನ್ನೂ ಸ್ವಲ್ಪ ಪದೇ ಪದೇ ಕೇಳುವುದು. ಈ ಆತುರತೆ ಬಡಿಸುವವರಿಗೆ ಸ್ವಲ್ಪ ಕಿರಿಕಿರಿ . ಕೆಲವರು ಕೋಪಗೊಳ್ಳುವ ಸಾಧ್ಯತೆಯೂ ಉಂಟು. ನಿಧಾನವಾಗಿ ಗೌರವದಿಂದ ಕೇಳಿ ಎಷ್ಟು ಬೇಕೋ ಅಷ್ಟನ್ನು ಮಾತ್ರ ಹಾಕಿಸಿಕೊಳ್ಳಬೇಕು. ಒಟ್ಟಿನಲ್ಲಿ, ಬಡಸುವಾಗ / ಬಡಿಸಿಕೊಳ್ಳುವಾಗ ಶುಚಿ, ಸಮಾನತೆ ಮತ್ತು ಸಂಯಮತೆ ಇರಲಿ. ಚೆಲ್ಲದ ಕೈ, ಪಕ್ಷಪಾತವಿಲ್ಲದ ಮನಸ್ಸು ಮತ್ತು ತಾಳ್ಮೆಯ ಊಟ ಈ ಮೂರು ಇದ್ದರೆ ಆ ಪಂಕ್ತಿ ಕೇವಲ ಊಟವಲ್ಲ.. ಒಂದು ಪ್ರಸಾದ ರೂಪದ ಸಂಸ್ಕಾರವಾಗುತ್ತದೆ. ಬಡಿಸುವವರಿಗೂ ಊಟ ಮಾಡುವವರಿಗೂ ಜೊತೆ ಜೊತೆಗೆ ದೇಶಕ್ಕೂ ಒಳಿತು.
ಟ್ಯಾಗ್ಸ್:#Sedam#Karnataka
ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.

Ads