📅 ಮಂಗಳವಾರ, ಅಕ್ಟೋಬರ್ 6, 2026
Myna News Logo
ಮೈನಾ

ಸೇಡಂ

ನ್ಯೂಸ್

ಕನ್ನಡ ದಿನ ಪತ್ರಿಕೆ
Editor

ಪ್ರಧಾನ ಸಂಪಾದಕರು:

ಮಹಿಪಾಲರೆಡ್ಡಿ

Ads
Column

ಮುಂದೆ ಬನ್ನಿ

ಓ ಮನಸೇ..

ಆರತಿ ಕಡಗಂಚಿ

ಆರತಿ ಕಡಗಂಚಿ

ಉಪನ್ಯಾಸಕರು

ಭಾನುವಾರ, ಸೆಪ್ಟೆಂಬರ್ 20, 20262 ನಿಮಿಷ ಓದು5 ವೀಕ್ಷಣೆಗಳು
ಸುದ್ದಿ ಹಂಚಿಕೊಳ್ಳಿ:
ಮುಂದೆ ಬನ್ನಿ
ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಗೆಲ್ಲುವವರನ್ನು ಗೆಲ್ಲಿಸುವವರು, ಓದುವವರ ಬೆನ್ನು ತಟ್ಟುವವರು, ಮಾಡುವವರ ಪ್ರಶಂಸಿಸುವವರೂ ಬೇಕು ನಿಜ. ಆದರೆ ಸೋಲುತ್ತಿರುವವನಿಗೆ “ಮತ್ತೊಮ್ಮೆ ಪ್ರಯತ್ನಿಸು” ಎಂದು ಧೈರ್ಯ ತುಂಬು ವವರು. ಪ್ರತಿಭಾವಂತರ ಗುರುತಿಸಿ ಅವರ ಸಾಧನೆಯನ್ನು ಜಗತ್ತಿಗೆ ಪರಿಚಯಿಸುವವರು. ಮುಂದೆ ಬರಲು ಅವಕಾಶ ಸಿಗದೆ ಹಿಂದೆಯೇ ಉಳಿದವನ ಕೈ ಹಿಡಿದು, “ನೀನೂ ಮಾಡಬಲ್ಲೆ” ಎಂದು ನಂಬಿಕೆ ತುಂಬುವವರೂ ಬೇಕು.ಮೊದಲ ಸ್ಥಾನ ಪಡೆದವರನ್ನು ವೇದಿಕೆಗೆ ಕರೆದು ಸನ್ಮಾನಿಸುವುದು. ಫಸ್ಟ್ಕ್ಲಾಸ್ ಬರುವವರಿಗೆ ಅಭಿನಂದನೆ ಹೇಳುವುದು ಸುಲಭ. ಆದರೆ ಸಾಮಾನ್ಯವಾಗಿ ಯಾರೂ ಗಮನಿಸದ ಮಗುವಿನೊಳಗಿನ ಒಂದು ಸಣ್ಣ ಆಸಕ್ತಿಯನ್ನು ಗುರುತಿಸಿ, ಅದನ್ನು ಬೆಳೆಸುವುದು ಅಷ್ಟು ಸುಲಭವಲ್ಲ. ಓದುವ ಹಂಬಲ, ಹಠ, ಛಲ ಇರುವವರು ನಾವು ಹೇಳಿದರೂ, ಹೇಳದಿದ್ದರೂ ಓದುತ್ತಾರೆ. ತಮ್ಮ ಗುರಿ ಗೊತ್ತಿರುವವರು ದಾರಿ ಹುಡುಕಿಕೊಂಡು ಹೋಗುತ್ತಾರೆ. ತಮ್ಮ ಸಾಮರ್ಥ್ಯ ಅರಿತವರು ಅವಕಾಶವನ್ನು ತಾವೇ ಸೃಷ್ಟಿಸಿಕೊಳ್ಳುತ್ತಾರೆ.ಆದರೆ ಹಿಂದಿರುವವರನ್ನು ಮುಂದಕ್ಕೆ ತರುವವರಾರು? ಒಬ್ಬನಿಗೆ ಓದಿನಲ್ಲಿ ಆಸಕ್ತಿ ಇಲ್ಲ. ಕಡಿಮೆ ಅಂಕ ಪಡೆಯುವುದು. ವೇದಿಕೆಯಲ್ಲಿ ಮಾತನಾಡಲು ಹೆದರುವುದು. ತರಗತಿಯಲ್ಲಿ ಮೌನ. ಯಾವ ಸ್ಪರ್ಧೆಯಲ್ಲೂ ಮುಂದೆ ಬಾರದವರು.ಎಂದರೆ ಅವರಲ್ಲಿ ಸಾಮರ್ಥ್ಯವೇ ಇಲ್ಲ ಎಂದರ್ಥವಲ್ಲ.ಅವರಿಗೆ ಬೇಕಾಗಿರುವುದು ಉಪದೇಶವಲ್ಲ. ನಂಬಿಕೆ, ಅವಕಾಶ, ಪ್ರೋತ್ಸಾಹ, “ನಿನ್ನಿಂದ ಸಾಧ್ಯ” ಎನ್ನುವ ಒಂದು ಧೈರ್ಯದ ಸ್ಪರ್ಶ. ಒಬ್ಬ ಪ್ರತಿಭಾವಂತನನ್ನು ಗುರುತಿಸುವುದು ಸಾಧನೆ. ಆದರೆ ಪ್ರತಿಭೆ ಕಾಣದವನೊಳಗಿನ ಸಾಮರ್ಥ್ಯ ಗುರುತಿಸುವುದು ಅದಕ್ಕಿಂತ ದೊಡ್ಡ ಸಾಧನೆ. ಮುಂದಿರುವವರನ್ನು ಇನ್ನಷ್ಟು ಮುಂದೆ ಕಳುಹಿಸುವವರು ಅನೇಕರು. ಆದರೆ ಹಿಂದೆ ಉಳಿದವರಿಗಾಗಿ ಒಂದು ಹೆಜ್ಜೆ ಹಿಂದಕ್ಕೆ ಬಂದು, ಅವರ ಕೈ ಹಿಡಿದು ಮುಂದೆ ಕರೆತರುವವರು ವಿರಳ. ಅಂಥವರೇ ನಿಜವಾದ ಮಾರ್ಗದರ್ಶಕರು, ಶಿಕ್ಷಕರು, ಸಮಾಜ ಕಟ್ಟುವವರು.ಏಕೆಂದರೆ ಬೆಳಗುತ್ತಿರುವ ದೀಪಕ್ಕೆ ಎಣ್ಣೆ ಹಾಕುವುದು ಸುಲಭ. ಕರಾಳತೆಯ ದೂರ ಸರಿಸಲು ಸಣ್ಣ ದೀಪವಾಗುವುದೇ ನಿಜ ಸಾರ್ಥಕತೆ. “ಮುಂದಿರುವವರನ್ನು ಮೆಚ್ಚಿಸುವುದಕರೂಂದಿಗೆ,ಹಿAದಿರುವವರನ್ನು ಎಬ್ಬಿಸುವುದು ದೊಡ್ಡತನ”. ಚೆನ್ನಾಗಿ ಓದುವವನಿಗೆ ಇನ್ನೊಂದು ಪುಸ್ತಕ ಕೊಡುವುದರ ಜೊತೆಗೆ, ಓದದವನ ಕೈಗೂ ಒಂದು ಪುಸ್ತಕ ಕೊಟ್ಟು ನೋಡೋಣ. ಮೌನವಾಗಿರುವವನನ್ನೂ ಒಮ್ಮೆ ವೇದಿಕೆಯ ಮೇಲೆ ನಿಲ್ಲಿಸಿ ನೋಡೋಣ. ಬಹುಶಃ ನಾವು ಹುಡುಕುತ್ತಿರುವ ಮತ್ತೊಬ್ಬ ಪ್ರತಿಭಾವಂತ ಅಲ್ಲೇ ಇರಬಹುದು. ಅಲ್ಲವೆ?
ಟ್ಯಾಗ್ಸ್:#Sedam#Karnataka
ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.

Ads