📅 ಮಂಗಳವಾರ, ಅಕ್ಟೋಬರ್ 6, 2026
Myna News Logo
ಮೈನಾ

ಸೇಡಂ

ನ್ಯೂಸ್

ಕನ್ನಡ ದಿನ ಪತ್ರಿಕೆ
Editor

ಪ್ರಧಾನ ಸಂಪಾದಕರು:

ಮಹಿಪಾಲರೆಡ್ಡಿ

Ads
Sedam ಬ್ರೇಕಿಂಗ್ ನ್ಯೂಸ್

3.65 ಕೋಟಿ ವೆಚ್ಚದಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿ

ಐದು ಗ್ಯಾರಂಟಿಗಳನ್ನು ಬಡವರ ಮನೆ ಬಾಗಿಲಿಗೆ: ಸಚಿವ ಡಾ.ಪಾಟೀಲ ಅಭಿಮತ

ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಗುರುವಾರ, ಆಗಸ್ಟ್ 13, 20262 ನಿಮಿಷ ಓದು6 ವೀಕ್ಷಣೆಗಳು
ಸುದ್ದಿ ಹಂಚಿಕೊಳ್ಳಿ:
3.65 ಕೋಟಿ ವೆಚ್ಚದಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿ
ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಸೇಡಂ : ಚಾಲನೆ ನೀಡಲಾದ ವಿವಿಧ ರಸ್ತೆ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವುದರ ಜೊತೆಗೆ ಗುಣಮಟ್ಟದ ಕಾಮಗಾರಿ ನಡೆಯುವಂತೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಸೂಚನೆ ನೀಡಿದರು. ತಾಲೂಕಿನ ಬೀರನಳ್ಳಿ ಗ್ರಾಮದಲ್ಲಿ ಮಳಖೇಡ ಮತ್ತು ಬೀರನಳ್ಳಿ ಗ್ರಾಮಗಳ ಎಸ್ಸಿ ಕಾಲೋನಿಗಳಲ್ಲಿ ಸುಮಾರು ೨ ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಬೀರನಳ್ಳಿಯಿಂದ ಅರೆಬೊಮ್ಮನಹಳ್ಳಿಯವರೆಗೆ ೧.೬೫ ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅವರು ಮಾತನಾಡಿ, ರಾಜ್ಯದ ಜನರಿಗೆ ಚುನಾವಣೆಯಲ್ಲಿ ನಾವು ನೀಡಿದ ಎಲ್ಲ ಐದು ಗ್ಯಾರಂಟಿಗಳನ್ನು ಬಡವರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಪ್ರತಿ ವರ್ಷ ಸುಮಾರು ೫೨ ಸಾವಿರ ಕೋಟಿ ಹಣವನ್ನು ಈ ಗ್ಯಾರಂಟಿ ಯೋಜನೆಗಳಿಗಾಗಿ ನೀಡಲಾಗುತ್ತಿದೆ. ಇದರ ಜೊತೆಗೆ ರಾಜ್ಯದಲ್ಲಿ ಅನೇಕ ರೀತಿಯ ಅಭಿವೃದ್ಧಿ ಕರ‍್ಯಗಳು ಭರದಿಂದ ಸಾಗುತ್ತಿವೆ. ಗ್ಯಾರಂಟಿ ಯೋಜನೆಗಳಿಂದಾಗಿ ಯಾವುದೇ ರೀತಿಯ ಅಭಿವೃದ್ಧಿ ಕರ‍್ಯಗಳು ಕುಂಟಿತಗೊAಡಿಲ್ಲ ಎಂದರು. ರಾಜ್ಯದ ನಮ್ಮ ಕಾಂಗ್ರೆಸ್ ಸರಕಾರಕ್ಕೆ ಕಲ್ಯಾಣ ಕರ್ನಾಟ ಭಾಗದ ಮೇಲೆ ವಿಶೇಷಕಾಳಜಿ ಇದೆ ಆದ್ದರಿಂದ ಪ್ರತಿ ವರ್ಷ ಈ ಭಾಗದ ಅಭಿವೃದ್ಧಿಗೆ ೫ ಸಾವಿ ಕೋಟಿ ಹಣವನ್ನು ನೀಡಲಾಗುತ್ತಿದೆ. ಸೇಡಂ ಮತ ಕ್ಷೇತ್ರದಲ್ಲಿ ನಾವು ಕೂಡ ಅನೇಕ ಅಭಿವೃದ್ಧಿ ಕರ‍್ಯಗಳನ್ನು ಮಾಡಿದ್ದೇವೆ. ಕಾಗಿಣಾ ನದಿಕೆ ೧೨ ಬ್ರಿಡ್ಜ್ ಕಮ್ ಬ್ಯಾರೇಜ್‌ಗಳನ್ನು ನಿರ್ಮಾಣ ಮಾಡಿದ್ದೇವೆ. ರೈತರ ಹೊಲಗಳಿಗೆ ನೀರು ಕೊಡುವ ಉದ್ದೇಶದಿಂದ ಕಾಗಿಣಾ ಏತ ನೀರಾವರಿ ಯೋಜನೆ ಆರಂಭ ಮಾಡಿದ್ದೇವೆ. ರೈತರು ಇದರ ಲಾಭ ಪಡೆದುಕೊಂಡು ಹೆಚ್ಚಿನ ಲಾಭ ಪಡೆಯುವಂತಾಗಬೇಕು ಎನ್ನುವುದು ನಮ್ಮ ಸದಾಶಯವಾಗಿದೆ ಎಂದರು. ಕಾಡಾ ನಿಮಗ ಮಾಜಿ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಜಿಪಂ ಮಾಜಿ ಸದಸ್ಯ ಧೂಳಪ್ಪ ದೊಡ್ಡಮನಿ, ಕೃಷಿಕ ಸಮಾಜ ತಾಲೂಕು ಅಧ್ಯಕ್ಷ ಬಸವರಾಜ ರೇವಗೊಂಡ ಮಾತನಾಡಿದರು. ಹಾಪ್ ಕಾಮ್ಸ್ ಮಾಜಿ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ್ ಊಡಗಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಶ್ವನಾಥ ಪಾಟೀಲ್ ಬೊಮ್ನಳ್ಳಿ, ಲೋಕೋಪಯೋಗಿ ಇಲಾಖೆ ಎಇಇ ವಿಶ್ವನಾಥ ಮಾವಿನಗಿಡ, ಚನ್ನಬಸಪ್ಪ ಹಾಗರಗಿ, ಚಂದ್ರಶೇಖರ ಹರ್ನಾಳ, ಜಗದೇವಪ್ಪ ಪಾಟೀಲ್, ರಾಮಯ್ಯ ಪೂಜಾರಿ, ಮಹೇಶ ಪಾಟೀಲ್ ತರನಳ್ಳಿ, ಮಂಜುನಾಥ ಸಾಹು, ದೇವೀಂದ್ರಪ್ಪ ಬಿಜನಳ್ಳಿ, ವಿಲಾಸ ಗೌತಮ್ ಸೇರಿದಂತೆ ಅನೇಕರಿದ್ದರು. ಸೇತುವೆ ಕಾಮಗಾರಿಗೆ ಚಾಲನೆ ಸೇಡಂ : ತಾಲೂಕಿನ ಮುಗನೂರ-ಸೂರವಾರ ರಸ್ತೆಯ ಸೇತುವೆ ನಿರ್ಮಾಣ ಕಾಮಗಾರಿಗೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಚಾಲನೆ ನೀಡಿದರು. ನಂತರ ಮಾತನಾಡಿ, ಈ ಸೇತುವೆ ನಿರ್ಮಾಣದಿಂದ ಕುಕ್ಕುಂದಾ, ಯಡಗಾ, ಮುಗನೂರು, ಸೂರವಾರ, ಹಾಬಾಳ (ಟಿ), ಲೋಹಾಡ ಗ್ರಾಮಗಳಿಗೆ ಸಂಪರ್ಕ ಸಾಧ್ಯವಾಗಲಿದೆ. ಆದ್ದರಿಂದ ಸುಮಾರು ೨.೫ ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಗುಣಮಟ್ಟದ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ, ಗುತ್ತಿಗೇದಾರರಿಗೆ ಸೂಚನೆ ನೀಡಲಾಗಿದೆ ಎಂದರು. ತೋಟಗಾರಿಕೆ ಮಹಾ ಮಂಡಳಿ ಮಾಜಿ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ್ ಊಡಗಿ, ಕಾಡಾ ನಿಗಮ ಮಾಜಿ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಜಿಪಂ ಮಾಜಿ ಸದಸ್ಯ ಧೂಳಪ್ಪ ದೊಡ್ಡಮನಿ, ತಹಶೀಲ್ದಾರ ಶ್ರೀಯಾಂಕಾ ಧನಶ್ರೀ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಶ್ವನಾಥ ಪಾಟೀಲ್ ಬೊಮ್ನಳ್ಳಿ, ಲೋಕೋಪಯೋಗಿ ಇಲಾಖೆ ಇಇ ಪ್ರಭಯ್ಯ ಮಠ, ಎಇಇ ವಿಶ್ವನಾಥ ಮಾವಿನಗಿಡ ಸೇರಿದಂತೆ ಅನೇಕರಿದ್ದರು.
ಟ್ಯಾಗ್ಸ್:#Sedam#Karnataka
ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.

Ads