📅 ಮಂಗಳವಾರ, ಅಕ್ಟೋಬರ್ 6, 2026
Myna News Logo
ಮೈನಾ

ಸೇಡಂ

ನ್ಯೂಸ್

ಕನ್ನಡ ದಿನ ಪತ್ರಿಕೆ
Editor

ಪ್ರಧಾನ ಸಂಪಾದಕರು:

ಮಹಿಪಾಲರೆಡ್ಡಿ

Ads
Column

ಕೋಪವೇ ಬುದ್ಧಿಯಾದಾಗ

ಓ ಮನಸೇ..

ಆರತಿ ಕಡಗಂಚಿ

ಆರತಿ ಕಡಗಂಚಿ

ಪ್ರಧಾನ ಸಂಪಾದಕರು

ಶನಿವಾರ, ಸೆಪ್ಟೆಂಬರ್ 19, 20262 ನಿಮಿಷ ಓದು4 ವೀಕ್ಷಣೆಗಳು
ಸುದ್ದಿ ಹಂಚಿಕೊಳ್ಳಿ:
ಕೋಪವೇ ಬುದ್ಧಿಯಾದಾಗ
ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಬೆಳಗ್ಗಿನಿಂದಲೇ ಆಕೆಗೆ ಉಸಿರಾಡಲು ಸಮಯವಿರಲಿಲ್ಲ.ಮಕ್ಕಳನ್ನು ಎಬ್ಬಿಸುವುದು, ಅವರ ತಿಂಡಿ-ತಯಾರಿ, ಶಾಲೆಗೆ ಕಳುಹಿಸುವುದು, ಬಟ್ಟೆಗಳನ್ನು ಜೋಡಿಸುವುದು, ಪಾತ್ರೆ, ಮನೆ ಸ್ವಚ್ಛತೆ, ಅಡುಗೆ, ಮನೆಯವರ ಅಗತ್ಯಗಳು… ಇದರ ನಡುವೆ ತನ್ನ ಕೆಲಸದ ಒತ್ತಡವೂ ಸೇರಿ ಒಂದರ ಹಿಂದೆ ಮತ್ತೊಂದು ಕೆಲಸ ಅವಳನ್ನು ಗಲಿಬಿಲಿಗೊಳಿಸಿತ್ತು.‘ಇದು ಇಲ್ಲಿ ಇರಬೇಕು… ಅದು ಅಲ್ಲಿರಬಾರದು… ಮಕ್ಕಳು ಸ್ವಲ್ಪ ಜವಾಬ್ದಾರಿಯಿಂದ ಇರಬೇಕು… ಮನೆಯವರು ಸಹಾಯ ಮಾಡಬೇಕು…’ಎನ್ನುವ ಆಲೋಚನೆಗಳು ಮನಸ್ಸಿನಲ್ಲಿ ಒಂದರ ಮೇಲೊಂದು ಸೇರಿದ್ದವು.ಅದರ ನಡುವೆ ಯಾರೋ ಒಂದು ವಸ್ತುವನ್ನು ತೆಗೆದುಕೊಂಡು ಸರಿಯಾದ ಜಾಗದಲ್ಲಿ ಇಡಲಿಲ್ಲ.ಸಾಮಾನ್ಯವಾಗಿ ನೋಡಿದರೆ ಅದು ದೊಡ್ಡ ವಿಷಯವೇನಲ್ಲ. ಆದರೆ ಆ ದಿನದ ದಣಿವು, ಒತ್ತಡ, ನಿರೀಕ್ಷೆ, ‘ಮನೆಯೆಲ್ಲವೂ ಅಚ್ಚುಕಟ್ಟಾಗಿರಬೇಕು’ ಎನ್ನುವ ಮನಸ್ಸಿನ ಹಠ ಎಲ್ಲವೂ ಸೇರಿ ಆ ಸಣ್ಣ ವಿಷಯವನ್ನೇ ದೊಡ್ಡದಾಗಿ ಮಾಡಿತು.ಈ ‘ಎಲ್ಲವೂ ಸರಿಯಾಗಿರಬೇಕು’ ಎನ್ನುವ ಒತ್ತಡವೇ ಮನಸ್ಸಿನ ತಾಳ್ಮೆಯನ್ನು ನಿಧಾನವಾಗಿ ಕಸಿದುಕೊಂಡಿತ್ತು. ಸಣ್ಣ ಅಸ್ತವ್ಯಸ್ತತೆ ದೊಡ್ಡ ತಪ್ಪಿನಂತೆ ಕಾಣುತ್ತದೆ. ಮಕ್ಕಳ ಮಾತು ಕಿರಿಕಿರಿಯಾಗಿ ಭಾಸವಾಗುತ್ತದೆ. ಮನೆಯವರು ಸಹಕರಿಸದಿರುವುದು ಮತ್ತಷ್ಟು ಕೋಪ ತರಿಸುತ್ತದೆ. ಮಾತು ಮಾತಿಗೆ ಸಿಟ್ಟು ಏರುತ್ತದೆ. ಕೊನೆಗೆ ಕೋಪವೇ ಬುದ್ಧಿಯ ಸ್ಥಾನವನ್ನು ಪಡೆದುಕೊಂಡಾಗ ಮನೆ, ನೆಮ್ಮದಿಯ ತಾಣವಾಗಿರಬೇಕಾದದ್ದು, ಕ್ಷಣಮಾತ್ರದಲ್ಲಿ ರಣರಂಗವಾಗಬಹುದು. ಕೆಲವೊಮ್ಮೆ ಆ ಕೋಪ ಮಾತಿನಲ್ಲೇ ನಿಲ್ಲುವುದಿಲ್ಲ. ಕೈಗೆ ಸಿಕ್ಕ ವಸ್ತುವನ್ನು ಯಾರ ಮೇಲಾದರೂ ಎಸೆಯುವಷ್ಟು ನಿಯಂತ್ರಣ ತಪ್ಪಬಹುದು.ವಸ್ತು ತಾಗಿ ಗಾಯವಾಗಿ,ರಕ್ತಸ್ರಾವವಾಗಿ ಆಸ್ಪತ್ರೆಗೆ ಕರೆದೊಯ್ಯುವ ಪರಿಸ್ಥಿತಿ ಬಂತು.ಆಸ್ಪತ್ರೆಯ ದಾರಿಯಲ್ಲಿ ಕೆಲವೇ ಕ್ಷಣಗಳ ಹಿಂದೆ ಉರಿಯುತ್ತಿದ್ದ ಆಕೆಯ ಕೋಪ ಎಲ್ಲೋ ಮಾಯವಾಗಿತ್ತು. ಅದರ ಜಾಗದಲ್ಲಿ ಭಯ, ನೋವು ಮತ್ತು ಪಶ್ಚಾತ್ತಾಪ ತುಂಬಿಕೊAಡಿತ್ತು.‘ನಾನೇಕೆ ಹೀಗೆ ಮಾಡಿದೆ?’ಪ್ರಶ್ನೆ ಆಕೆಯನ್ನು ಕಾಡುತ್ತಿತ್ತು. ಬೇಕೆಂದು ಯಾರನ್ನೂ ನೋಯಿಸಿರಲಿಲ್ಲ. ಯಾರಿಗೂ ಗಾಯವಾಗಲಿ ಎಂದು ಬಯಸಿರಲಿಲ್ಲ.ಆದರೂ ಈ ಹಿಂಸೆ ಅನುಭವಿಸಬೇಕಾಯಿತು.ಆಸ್ಪತ್ರೆಯಲ್ಲಿ ಕುಳಿತಿದ್ದ ಆಕೆಗೆ ಮನೆಯ ಸ್ವಚ್ಛತೆ, ಅಚ್ಚುಕಟ್ಟುತನ, ವಸ್ತುಗಳ ಜೋಡಣೆ ಯಾವುದೂ ದೊಡ್ಡದಾಗಿ ಕಾಣಿಸಲಿಲ್ಲ.ಅವಳ ಮನಸ್ಸಿನಲ್ಲಿ ಒಂದೇ ಒಂದು ಪ್ರಾರ್ಥನೆ ‘ಏನೂ ಆಗಬಾರದು… ದಯವಿಟ್ಟು ಏನೂ ಆಗಬಾರದು…’ಮಕ್ಕಳು ವಸ್ತುಗಳನ್ನು ಚೆಲ್ಲುತ್ತಾರೆ. ಮನೆಯವರು ಕೆಲವೊಮ್ಮೆ ಸಹಕರಿಸುವುದಿಲ್ಲ. ಕೆಲಸಗಳು ಬಾಕಿ ಉಳಿಯುತ್ತವೆ. ಮನೆ ಕೆಲವೊಮ್ಮೆ ಅಸ್ತವ್ಯಸ್ತವಾಗಿರುತ್ತದೆ.ಅದಕ್ಕಾಗಿ ಮನೆಯೇ ಅಶಾಂತಿಯ ತಾಣವಾಗಬೇಕಿಲ್ಲ.ಚೆಲ್ಲಿದ ವಸ್ತುಗಳನ್ನು ಮತ್ತೆ ಜೋಡಿಸಬಹುದು. ಕೊಳೆಯಾದ ಮನೆಯನ್ನು ಮತ್ತೆ ಸ್ವಚ್ಛಗೊಳಿಸಬಹುದು. ತಡವಾದ ಕೆಲಸವನ್ನು ಮತ್ತೆ ಮಾಡಬಹುದು.ಆದರೆ ಕೋಪದ ಕ್ಷಣದಲ್ಲಿ ಗಾಯಗೊಂಡ ದೇಹವನ್ನೂ,ಮನಸ್ಸನ್ನೂ ಹಿಂದಿನAತಾಗಿಸುವುದು ಅಷ್ಟು ಸುಲಭವಲ್ಲ ಎನ್ನುವುದು ಮನನವಾಯಿತು.ಆಸ್ಪತ್ರೆಯ ಹಾಸಿಗೆಯ ಪಕ್ಕದಲ್ಲಿ ಕುಳಿತ ಅವಳಿಗೆ ‘ಮನೆಯೆಲ್ಲವೂ ಸರಿಯಾಗಿರಬೇಕು’ ಎನ್ನುವುದಕ್ಕಿಂತ, ‘ಮನೆಯವರೆಲ್ಲರೂ ಚೆನ್ನಾಗಿರಬೇಕು’ ಎನ್ನುವ ಹಂಬಲ ದೊಡ್ಡದಾಯಿತು. ಕಣ್ಮುಂಚಿಕೊAಡು ಭಗವಂತನಲ್ಲಿ ಬೇಡಿಕೊಂಡಳು. “ವಿಘ್ನವಿನಾಶಕ ಗಣೇಶಾ, ನಿನ್ನಂತೆ ಸೂಕ್ಷ್ಮ ದೃಷ್ಟಿ ನನಗೆ ಕೊಡು; ಸಣ್ಣ ಸಂಗತಿಯ ಹಿಂದೆ ಇರುವ ದೊಡ್ಡ ಭಾವನೆಯನ್ನು ಅರ್ಥಮಾಡಿಕೊಳ್ಳುವ ದೃಷ್ಟಿ ಕೊಡು. ಎಲ್ಲರ ಮಾತನ್ನೂ ತಾಳ್ಮೆಯಿಂದ ಕೇಳಿಕೊಳ್ಳುವ ವಿಶಾಲ ಕಿವಿ ಕೊಡು. ಜೀವನದಲ್ಲಿ ಎದುರಾಗುವ ಸಣ್ಣಪುಟ್ಟ ಅಸ್ತವ್ಯಸ್ತತೆ, ತಪ್ಪು, ಗೊಂದಲಗಳನ್ನು ದೊಡ್ಡದಾಗಿಸದೆ ಸಹಿಸಿಕೊಳ್ಳುವ ದೊಡ್ಡ ಮನಸ್ಸು ಕೊಡು.ಮನೆಯವರನ್ನು ಸಮಾಧಾನಚಿತ್ತದಿಂದ ನೋಡಿಕೊಳ್ಳುವ ಚಿತ್ತವನ್ನೂ ಕೊಡು ತಂದೆ. ನಿನ್ನ ಆಗಮನದೊಂದಿಗೆ ನಮ್ಮ ಮನೆಗಳಲ್ಲಿರುವ ಕೋಪ, ಅಸಹನೆ, ಅಹಂಕಾರ, ತಪ್ಪು ತಿಳಿವಳಿಕೆಗಳೆಂಬ ಎಲ್ಲ ವಿಘ್ನಗಳೂ ದೂರವಾಗಲಿ. ಅವಳ ಪ್ರಾರ್ಥನೆ ಮುಗಿಯುವಷ್ಟರಲ್ಲಿ ಮನಸ್ಸಿನ ಭಾರ ಸ್ವಲ್ಪ ಇಳಿದಿತ್ತು.ಮಹಿಳೆಯೇ ಎಲ್ಲವನ್ನೂ ನೋಡಿಕೊಳ್ಳಬೇಕು ಎಂಬ ಮನೋಭಾವವೂ ಬದಲಾಗಬೇಕು. ಮನೆ ಎಲ್ಲರದ್ದಾದರೆ ಅದರ ಜವಾಬ್ದಾರಿಯೂ ಎಲ್ಲರದ್ದೇ. ಮಕ್ಕಳು ತಮ್ಮ ವಸ್ತುಗಳನ್ನು ಜೋಡಿಸುವುದನ್ನು ಕಲಿಯಬೇಕು. ಮನೆಯವರು ಕೆಲಸ ಹಂಚಿಕೊಳ್ಳಬೇಕು. ಒಬ್ಬರ ಮೇಲೆಯೇ ಎಲ್ಲ ಜವಾಬ್ದಾರಿಗಳ ಭಾರ ಬಿದ್ದಾಗ ತಾಳ್ಮೆಯೂ ಒಂದು ಹಂತದಲ್ಲಿ ಸೋಲಬಹುದು. ಈ ಗಣೇಶ ಚತುರ್ಥಿ, ನಮ್ಮ ಮನೆಗಳಲ್ಲಷ್ಟೇ ಅಲ್ಲ.ನಮ್ಮ ಮನಗಳಲ್ಲೂ ವಿಘ್ನವಿನಾಶಕನನ್ನು ಪ್ರತಿಷ್ಠಾಪಿಸೋಣ. ಕೋಪದ ಬದಲು ತಾಳ್ಮೆಯನ್ನು, ಹಠದ ಬದಲು ಅರಿವನ್ನು, ಅಸ್ತವ್ಯಸ್ತತೆಯ ಬದಲು ಸಮಾಧಾನವನ್ನು, ಎಲ್ಲಕ್ಕಿಂತ ಮುಖ್ಯವಾಗಿ, ವಸ್ತುಗಳಿಗಿಂತ ಮನುಷ್ಯರನ್ನು ದೊಡ್ಡವರನ್ನಾಗಿಸುವ ಮನಸ್ಸನ್ನು ಬೇಡಿಕೊಳ್ಳೋಣ. ಗಣಪತಿ ಬಪ್ಪಾ ಮೊರೆಯಾ.
ಟ್ಯಾಗ್ಸ್:#Sedam#Karnataka
ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.

Ads