📅 ಮಂಗಳವಾರ, ಅಕ್ಟೋಬರ್ 6, 2026
Myna News Logo
ಮೈನಾ

ಸೇಡಂ

ನ್ಯೂಸ್

ಕನ್ನಡ ದಿನ ಪತ್ರಿಕೆ
Editor

ಪ್ರಧಾನ ಸಂಪಾದಕರು:

ಮಹಿಪಾಲರೆಡ್ಡಿ

Ads
Column

ಮನದ ಖುಷಿಗೆ ಕುಣಿಯೋಣ.....!

ಕಿರಣ್ ಪಾಟೀಲ

ಕಿರಣ್ ಪಾಟೀಲ

ಲೇಖಕರು - ಗಾಯಕರು

ಭಾನುವಾರ, ಸೆಪ್ಟೆಂಬರ್ 20, 20262 ನಿಮಿಷ ಓದು4 ವೀಕ್ಷಣೆಗಳು
ಸುದ್ದಿ ಹಂಚಿಕೊಳ್ಳಿ:
ಮನದ ಖುಷಿಗೆ ಕುಣಿಯೋಣ.....!
ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಕುಣಿಯುವ ಕಾಲಿಗೆ ಇಂಬುಕೊಟ್ಟು ರಂಗವೇದಿಕೆಯನ್ನು ಸಜ್ಜುಗೊಳಿಸಿ ಒಳಗಿನ ಚೇತನದ ಚಿಲುಮೆಗೆ ಹುರುಪನ್ನು ತುಂಬುತ್ತಿರುವ ಸೂಪರ್ ಮಮ್ಮಿ ಜಿ ಕನ್ನಡ ಅವರ ರಿಯಾಲಿಟಿ ಶೋದಲ್ಲಿ ದಾವಣಗೇರಿಯ ಅಮ್ಮ ರೂಪ ಆಯ್ಕೆಗೋಡ್ಡಿದ್ದೆ ತಡ ತೀರ್ಪುಗಾರರಲ್ಲಿ ಒಬ್ಬರಾದ ಕಾಟೆರಾ ಚಿತ್ರದ ನಿರ್ದೇಶಕರು ಖಳನಟ ಸುಧೀರ ಅವರ ಸುಪುತ್ರ ತರುಣ್ ವೇದಿಕೆಗೆ ಬಂದು ರೂಪಾ ಅಮ್ಮನನ್ನು ಬಾಚಿ ತಬ್ಬಿಕೊಂಡು ಹರ್ಷ ವ್ಯೆಕ್ತ ಪಡಿಸಿದ್ದು ನೋಡಿದರೆ ನಿಜಕ್ಕೂ ಆತನೊಬ್ಬ ಕಲಾ ಪೋಷಕ. ಮದುವೆಯಾಗಿ ಮಕ್ಕಳನ್ನು ಪಡೆದು ಚೋಟ್ರಿಯಲ್ಲಿ ಅವರಿವರ ಕೈಲಿ ಕೆಲಸಮಾಡಿಕೊಂಡು ಸ್ವಚ್ಛವೆ ನಮ್ಮ ದೇವರು ಎಂದುಕೊAಡು ತನಗೋಪ್ಪಿಸಿದ ಕೆಲಸವನ್ನು ಬಲು ನೀಟಾಗಿ ಸ್ವಚ್ಛ ಮನಸ್ಸಿಂದ ಮಾಡಿಮುಗಿಸಿ ಮುಂದಿನ ಕೆಲಸಕ್ಕೆ ಅಣಿಯಾಗುವ ರೋಪ ಅಮ್ಮ ಸೂಪರ್ ಮಮ್ಮಿ ಶೋನಲ್ಲಿ ನೃತ್ಯ ಮಾಡಿದ್ದನ್ನು ನೋಡಿ ಶಿವರಾಜಕುಮಾರ ಹಾಗೂ ವಿಜೇಯರಾಘವೇಂದ್ರ ಅವರು ಬೆಕ್ಕಸ ಬೆರಗಾಗಿ ಉತ್ತರ ಕರ್ನಾಟಕದಲ್ಲೂ ಇಂತಹ ಅದ್ಬುತ ಪ್ರತಿಭೆಗಳು ಇವೆ ಅವರನ್ನು ಉತ್ತೇಜಸಿ ಬೆಳೆಸಲು ಇಂತಹ ವೇದಿಕೆಗಳು ಇರುವುದು. ರೂಪಾ ಅಮ್ಮನನ್ನು ಕಂಡು ಒಂದು ಮಾತನ್ನು ಹೇಳಿದರು ಕಲೆ ಯಾರೋಪ್ಪನ ಸ್ವತ್ತು ಅಲ್ಲ, ಪ್ರಯತ್ನ ಪ್ರಮಾಣಿಕತೆ ಯಾರಲ್ಲಿ ಇರುತ್ತದೆಯೋ ಅವರನ್ನು ಸರಸ್ವತಿ ಕೈ ಹಿಡಿದು ಮೇಲಕ್ಕೆ ತರುತ್ತಾಳೆ ಎನ್ನುವ ಮಾತು ದಾವಣಗೇರಿಯ ರೂಪಾ ಅಮ್ಮನನ್ನು ಕಂಡು ನಿಜವೇಣಿಸಿತು ಎನ್ನುವಾಗ ವೇದಿಕೆಯ ಮೇಲಿದ್ದ ರೂಪಾ ಅಮ್ಮನ ಕಣ್ಣಲ್ಲಿ ನೀರಾಡಿತು ಅದನ್ನು ಕಂಡ ನಿರೂಪಕಿ ಅನುಶ್ರೀ ಅವರು ಸಹ ರೂಪಾ ಅವರನ್ನು ಸಮಾಧಾನಿಸಲು ಹೋಗಿ ಅವರು ಸಹ ಗಳ ಗಳನೆ ಅತ್ತು ಬಿಟ್ಟರು. ದಾವಣಗೇರಿಯಿಂದ ಬಂದಿದ್ದ ರೂಪಾ ಅವರು ಶುದ್ಧ ಗ್ರಹಿಣಿ ಅವರ ಯಜಮಾನರು ಕೂಲಿ ಕೆಲಸಮಾಡಿ ಮಕ್ಕಳನ್ನು ಸಾಕಿ ಜೊತೆಗೆ ಸೈಡಿನಲ್ಲಿ ಖಿಗಿ ಯಲ್ಲಿ ಸಿನೆಮಾದಲ್ಲಿಯ ನೃತ್ಯ ನೋಡಿ ಕಚ್ಚಾ ಪಕ್ಕಾ ಕಲಿತು ನಾನು ಒಂದು ಕೈ ನೋಡಿಯೆ ಬಿಡುವ ಎಂದು ಸೂಪರ್ ಮಮ್ಮಿ ಸ್ಟೇಜನ್ನು ಏರಿ ಹದಿನೈದು ಸ್ಪರ್ಧಾಳುಗಳಲ್ಲಿ ತಾನು ಒಬ್ಬ ಸ್ಪರ್ದಿ ಯಾಗಿ ಸೇರಿದ್ದು ನಿಜಕ್ಕೂ ನೋಡುಗರ ಮನ ಕಲುಕಿತು. ಹಾಗೆ ಇನ್ನೊಬ್ಬ ಸ್ಪರ್ದಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಸೌಮ್ಯಶ್ರೀ ಅವರು ಥೇಟ್ ಮಾಲಾಶ್ರೀ ಹಾಗೆ ಕಾಣುತ್ತಿದ್ದರು. ಇವರು ಕುಣಿದಿದ್ದು ನೋಡಿ ಸ್ವತಃ ತೀರ್ಪುಗಾರರು ಕುಳಿತಲ್ಲಿ ಕುಡ್ರ ದೆ ಸೌಮ್ಯಶ್ರೀ ಅವರ ನೃತ್ಯಕ್ಕೆ ಕುಳಿತಲ್ಲೇ ಕೈ ಕಾಲು ಆಡಿಸುತ್ತ ಅವರ ನೃತ್ಯ ಮುಗಿಯುತ್ತಿದ್ದಂತೆ ಎದ್ದು ನಿಂತು ಚಪ್ಪಾಳೆ ತಟ್ಟುತ್ತ ಸೌಮ್ಯಶ್ರೀ ಅವರ ಡ್ಯಾನ್ಸ್ಗೆ ಖುಷಿ ವ್ಯೆಕ್ತ ಪಡಿಸಿ ಆಯ್ಕೆ ಎಂದು ಗ್ರೀನ್ ಬಟನ್ ಒತ್ತಿದಾಗ ಜೂನಿಯರ್ ಮಾಲಾಶ್ರೀ (ಸೌಮ್ಯಶ್ರೀ) ವೇದಿಕೆ ಮೇಲೆ ಕುಣಿದು ಕುಪ್ಪಲಿಸಿದಳು. ಜೊತೆಗಿದ್ದ ಮಗಳು ಮತ್ತು ಯಜಮಾನರು ಓಡೋಡಿ ಬಂದು ತಬ್ಬಿ ಹರ್ಷ ಗೊಂಡಿದ್ದು ಮರೆಯಲಾದಿತೆ. ಇವರು ಈ ಮೊದಲು ಗಂಭೀರ ಕಾಯಿಲೆ ಕ್ಯಾನ್ಸರ್ ದಿಂದ ಬಳಲಿ ಗುಣಮುಖರಾಗಿ ನೃತ್ಯವೆ ನನ್ನ ನೋವಿಗೆ ಹಾಗೂ ಕಾಯಿಲೆಗೆ ಮದ್ದು (ಔಷದಿ) ಎಂದು ತಿಳಿದು ಅದನ್ನೆ ಮುಂದುವರೆಸಿದೆ ಆಗ ನನ್ನ ಮನೆಯವರು ಹಾಗೂ ಮಗಳು ಹಿಡಿ ಹಿಡಿ ತುಂಬಿ ಪ್ರೋತ್ಸಾಹ ಕೊಟ್ಟ ಘಳಿಗೆಯ ಫಲಿತಾಂಶ ಇಂದಿನ ನನ್ನ ಡ್ಯಾನ್ಸ್ ಎಂದು ಹೇಳಿದಾಗ ಈಗ ಅಳುವ ಪರಿಸ್ಥಿತಿ ನನ್ನದಾಗಿತ್ತು. ಅದೆಂತಹ ನೃತ್ಯ ಚಿಲುಮೆ ನಿಂತಲ್ಲಿ ನಿಲ್ಲದೆ ಇಡಿ ಸ್ಟೇಜನ್ನು ಬಳಸಿಕೊಂಡು ಅವರು ಮಾಡಿದ ನೃತ್ಯ ನುಜಕ್ಕೂ ಮೋಹಕವಾಗಿತ್ತು.ಮೂಡಗೇರಿಯ ಸೌಮ್ಯಶ್ರೀ ಅವರಿಗೆ ಇಂತಹದೊAದು ಕಾಯಿಲೆ ಇತ್ತೆಎಂಬುದು ಅಳಿಸಿ ಹಾಕಿತ್ತು ಅವರ ನುಗುಮೊಗದ ಡ್ಯಾನ್ಸ್. ನೋಡಿ ನಮ್ಮ ನಮ್ಮ ತಾಪತ್ರೆಯ ಎನೆ ಇರಲಿ ಅವೆಲ್ಲವನ್ನು ಮರೆಸಿ ಚಿಂತೆ ರೋಗ ರೂಜಿನಗಳನ್ನು ದೂರವಿಡುತ್ತವೆ ಎನ್ನುವುದಕ್ಕೆ ಈ ಜೂನಿಯರ್ ಮಾಲಾಶ್ರೀ ಅಲಿಯಾಸ್ ಸೌಮ್ಯಶ್ರೀ ಅಲ್ಲವೆ.
ಟ್ಯಾಗ್ಸ್:#Sedam#Karnataka
ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.

Ads