📅 ಮಂಗಳವಾರ, ಅಕ್ಟೋಬರ್ 6, 2026
Myna News Logo
ಮೈನಾ

ಸೇಡಂ

ನ್ಯೂಸ್

ಕನ್ನಡ ದಿನ ಪತ್ರಿಕೆ
Editor

ಪ್ರಧಾನ ಸಂಪಾದಕರು:

ಮಹಿಪಾಲರೆಡ್ಡಿ

Ads
Sedam

ಭಿನ್ನ.. ವಿಭಿನ್ನ

ಕಿರಣ್ ಪಾಟೀಲ

ಕಿರಣ್ ಪಾಟೀಲ

ಲೇಖಕರು - ಗಾಯಕರು

ಶನಿವಾರ, ಆಗಸ್ಟ್ 8, 20262 ನಿಮಿಷ ಓದು10 ವೀಕ್ಷಣೆಗಳು
ಸುದ್ದಿ ಹಂಚಿಕೊಳ್ಳಿ:
ಭಿನ್ನ.. ವಿಭಿನ್ನ
ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಸಮಾಜದಲ್ಲಿ ಬದುಕುವ ನಾವುಗಳು ಭಿನ್ನ ವಿಭಿನ್ನ ರೂಪದಲ್ಲಿ ಬದುಕುವುದು ಸಹಜ ಆದರೆ ಭಿನ್ನ ಸ್ವರೂಪದಲ್ಲಿ ಕಾಣಿಸಿಕೊಂಡ ಅದೆಷ್ಟೋ ಜೀವಿಗಳು ವಿಭಿನ್ನ ರೂಪಗಳನ್ನು ತಾಳುವುದು ಸಹಜ ಇದನ್ನು ನಾವು ಕಾಲಕ್ಕೆ ತಕ್ಕ ಹಾಗೆ ವಾತಾವರಣಕ್ಕೆ ಹೊಂದಿ ಕೊಳ್ಳುವ ರೀತಿಯಲ್ಲಿ ಈ ಭಿನ್ನ ಸ್ವರೂಪುಗಳನ್ನ ಹೊಂದುತ್ತೇವೆ ಅಂತಹ ಮನುಷ್ಯನು ಸಮಾಜದಲ್ಲಿ ಇರುವಷ್ಟು ಕಾಲ ನಾನು ಸ್ವರೂಪಗಳಲ್ಲಿ ಬದುಕನ್ನು ನಡೆಸುತ್ತಾನೆ. ಅದೆಷ್ಟು ಬಾರಿ ನಾವುಗಳು ಒಬ್ಬ ವ್ಯಕ್ತಿಯನ್ನು ನಾನಾ ಸಂದರ್ಭದಲ್ಲಿ ಭೇಟಿಯಾಗುತ್ತೇವೆ ಅಲ್ಲಿ ಆತನನ್ನು ಇತರರಿಗೆ ಹೋಲಿಸಿಕೊಂಡು ಮಾತ ನಾಡುವುದು ಸಹಜ ಅಲ್ಲಿ ಆತನನ್ನು ಹೀಗೆ ಹೇಳುವುದುಂಟು ಈತನು ಅವರಿಗಿಂತ ಗುಣದಲ್ಲಿ ಸ್ವಭಾವದಲ್ಲಿ ನಡತೆಯಲ್ಲಿ ವಿಭಿನ್ನವಾಗಿರುತ್ತಾನೆ ಎಂಬ ಹೋಲಿಕೆ ಯನ್ನು ಮಾಡಿಕೊಂಡು ಆತನನ್ನು ನಮ್ಮ ಮನಸ್ಸಿನೊಳಗೆ ಇರಿಸಿ ಕೊಂಡು ಸ್ನೇಹದ ಸ್ವರೂಪವನ್ನು ಪಡೆಯುತ್ತೇವೆ. ಅದೆಷ್ಟೋ ಸಂದರ್ಭದಲ್ಲಿ ನಾವುಗಳು ವಿಭಿನ್ನವಾಗಿದ್ದರು ಅಲ್ಲಿ ಸೇರಿದ ಅದೆಷ್ಟು ಜೀವಗಳು ನಮ್ಮನ್ನು ಬಿನ್ನ ಸ್ವರೂಪದಲ್ಲಿ ಕಾಣಲು ಪ್ರಯತ್ನಿಸುತ್ತಾರೆ ಆದರೆ ನಾವು ಇರುವಿಕೆಯ ಸಂದರ್ಭದಲ್ಲಿ ಅನುಸಾರವಾಗಿ ಅದೆಷ್ಟೋ ಸಾರಿ ವಿಭಿನ್ನ ರೂಪದಲ್ಲಿ ಕಾಣಲು ಪ್ರಯತ್ನಿಸುತ್ತೇವೆ ಯಾಕೆಂದರೆ ಅವರಿಗೆ ನಾವು ಇರುವಂತೆ ಕಾಣಿಸಿಕೊಳ್ಳಲು ಇಷ್ಟ ಇರುವುದಿಲ್ಲ ಅಲ್ಲಿ ಅನಿವಾರ್ಯವಾಗಿ ಭಿನ್ನ ಸ್ವರೂಪವನ್ನು ಬದಲಾಯಿಸಿ ವಿಭಿನ್ನ ರೂಪದಲ್ಲಿ ಕಾಣಿಸಿಕೊಂಡಾಗ ಹೌದು ನೀನು ಮೊದಲಿದ್ದ ಹಾಗೆ ಇದ್ದಿದ್ದೀಯ ಕೊಂಚು ಬದಲಾವಣೆಯು ನಿನ್ನಲ್ಲಿ ಇಲ್ಲ ಎಂಬ ಸಮಾಧಾನದ ಉಸಿರನ್ನು ಬಿಟ್ಟು ನಮಗೆ ಅಷ್ಟರಾಗುವ ಮಾಡಿ ಅಪ್ಪಿಕೊಳ್ಳುವುದರ ಮೂಲಕ ತಮ್ಮತ ಸೆಳೆದುಕೊಳ್ಳುತ್ತಾರೆ ಆದರೆ ಭಿನ್ನ ರೂಪದಿಂದ ವಿಭಿನ್ನ ರೂಪಕ್ಕೆ ತಾಳುವ ಮನೋಸ್ಥಿತಿ ತಲುಪುವ ಹಂತಕ್ಕೆ ನಾವು ಹೋಗುವ ಸ್ವರೂಪ ಇದೆಯಲ್ಲ ಅದು ಯಾರಿಗೂ ಬೇಡಪ್ಪ ಅನ್ನಿಸುತ್ತದೆ ಯಾಕೆಂದರೆ ಅವರು ನಮ್ಮನ್ನು ಇದ್ದಂತೆ ಕಾಣಲು ಇಷ್ಟಪಡದ ಕಾರಣ ಅವರ ಕಣ್ಣುಗಳ ದೃಷ್ಟಿಗೆ ನಾವುಗಳು ವಿಭಿನ್ನ ರೂಪಗಳನ್ನು ತಾಳಿ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ ಒಂದು ವೇಳೆ ಪ್ರಯತ್ನ ವಿಫಲವಾದರೆ ಅಲ್ಲಿ ಅವರು ನಮ್ಮಗಳ ಭಿನ್ನ ರೂಪಗಳನ್ನು ಕಾಣಲು ಇಷ್ಟಪಡುವುದಿಲ್ಲ ಅವರಿಗೋಸ್ಕರ ನಾವು ವಿಭಿನ್ನ ರೂಪ ತಾಳಬೇಕಾಗುತ್ತದೆ ಮಳೆ ಬಂದAತೆ ಛತ್ರಿಯನ್ನು ಹಿಡಿದುಕೊಂಡಾಗ ನಾವುಗಳು ತೋರಿಸಿಕೊಳ್ಳದೆ ಮನೆಯನ್ನ ತಲುಪಬಹುದು ಇದು ಸಾರ್ವಕಾಲಿಕ ಸತ್ಯದ ಮಾತಾಗಿದೆ. ಇದ್ದಂತೆ ಬದುಕುವುದಕ್ಕಾಗಿ ಮನುಷ್ಯ ರ ಸಾಹಸ ಪಡಬೇಕಾಗುತ್ತದೆ ಸಮಾಜದಲ್ಲಿ ನಾವುಗಳು ಇದ್ದಂತೆ ಬದುಕುವುದು ಕಷ್ಟ ಸಾಧ್ಯ ಇಲ್ಲಿ ಬಣ್ಣದ ಮಾತು ಹೊಗಳಿಕೆ ಸ್ವರೂಪ ಇವುಗಳನ್ನು ಬಯಸುವ ಮನುಷ್ಯರು ಇರುತ್ತಾರೆ. ಅವರಿಗೋಸ್ಕರ ಆದರೂ ನಾವು ಯಾಕೆ ಬದಲಾಗಬೇಕು ಭಿನ್ನ ಸ್ವರೂಪದಿಂದ ವಿಭಿನ್ನ ತನದಲ್ಲಿ ಬದುಕಬೇಕಲ್ಲ ಎಂಬ ಚಿಂತೆ ಒಂದು ಮೂಲೆಯಲ್ಲಿ ಸದಾ ಕಾಲವು ಕಾಡುತ್ತಲೇ ಇರುತ್ತದೆ. ನಮ್ಮತನ ನಾವುಗಳು ಅದೆಷ್ಟೋ ಸಲ ಪ್ರದರ್ಶನ ಮಾಡಲು ಹಿಂದೆಟು ಹಾಕುತ್ತೇವೆ ಯಾಕೆಂದರೆ ನಮ್ಮ ನಿಜವಾದ ಸ್ವರೂಪವು ಅವರಿಗೆ ಇಷ್ಟವಾಗದೆ ಇರಬಹುದು ಎಂಬ ಕೊಂಚು ಕಾರಣದಿಂದ ಬದಲಾದ ಹಾಗೆ ಅವರ ಮುಂದೆ ನಟಿಸುತ್ತಾ ಜೀವನ ಸಾಗಿಸುತ್ತೇವೆ. ಈ ಒದ್ದಾಟ ನಿರಂತರ ಜೀವಿಸುವ ಅವಧಿಯಲ್ಲಿ ಇದ್ದೇ ಇರುತ್ತದೆ ಮನೆಯಲ್ಲಿ ಕನ್ನಡಿಯ ಮುಂದೆ ನಿಂತು ನಮ್ಮನ್ನು ನಾವೇ ನೋಡಿಕೊಂಡಾಗ ನಮ್ಮ ನಿಜವಾದ ಸ್ವರೂಪ ನಮಗೆ ಕಾಣದೆ ಇರಲು ಅಲ್ಲಿ ಅದೆಷ್ಟು ಬಾರಿ ಯೋಚಿಸುತ್ತಲೇ ಇರುತ್ತೇವೆ ನಾವು ಇರುವ ಹಾಗೆ ಏಕೆ ಬದುಕುವುದಿಲ್ಲ ಎಂದು ಅಂದುಕೊAಡು ಇರುತ್ತೇವೆ ಆದರೆ ನಮ್ಮ ಹಾಗೆ ನಾವು ಬದುಕಲು ಈ ಸಮಾಜ ಬಿಡುವುದಿಲ್ಲ ಏನಾದರೂ ಕೊಂಕು ಬಿoಕದ ಮಾತುಗಳನ್ನು ಆಡುತ್ತಾ ಜೀವಿಸುವ ನಮ್ಮ ಸುತ್ತಲಿನ ಪರಿಸರಕ್ಕೆ ಅನಿವಾರ್ಯ ಆಗಿಯಾದರೂ ಹೊಂದಿಕೊಳ್ಳಬೇಕಾಗುತ್ತದೆ. ಮುಖಕ್ಕೆ ಬಣ್ಣ ಹಚ್ಚಿಕೊಂಡು ನಟಿಸುವುದು ನಾಟಕ ಸಿನಿಮಾ ಧಾರಾವಾಹಿಗಳಲ್ಲಿ ಕಾಣುವುದು ಸಹಜ ಆದರೆ ನಿಜ ಜೀವನದ ನಾಟಕದಲ್ಲಿ ನಾವು ಇರುವ ಹಾಗೆ ಇದ್ದು ಬಿಡಲು ನಮ್ಮ ಸುತ್ತ ಮುತ್ತಲಿನ ಜನರು ಬಿಡುವುದಿಲ್ಲ ಮುಖಕ್ಕೆ ಬಣ್ಣ ಹಚ್ಚಿಕೊಂಡೆ ಬದುಕುವುದು ಅನಿಮಾರೆ ಇಲ್ಲಿ ಸಹಜ ಸೌಂದರ್ಯಕ್ಕೆ ಸಹಜ ಗುಣಕ್ಕೆ ಬೆಲೆಯೇ ಇಲ್ಲವೇನೋ ಅನಿಸುತ್ತದೆ ಹೊಗಳಿಕೆಗೆ ಹೊಂದಿಕೊAಡಷ್ಟು ಮನುಜ ತಿಂಗಳಿಕೆಯನ್ನು ಸದಾ ಕಾಲವೂ ದೂರವೇ ಇಡುತ್ತಾನೆ ಹೀಗೇಕೆ ಎಂಬ ಯೋಚನೆಗೆ ನಮ್ಮನ್ನು ನಾವು ತೊಡಗಿಸಿ ಕೊಂಡಾಗ ಈ ಬಣ್ಣದ ಮುಖ ನನಗೆ ಅನಿವಾರ್ಯತೆ ಎಂಬುದು ಅದೆಷ್ಟೋಬಾರಿ ಒಬ್ಬನೇ ಇದ್ದಾಗ ಯೋಚಿಸಿದ್ದೇನೆ ಆದರೆ ಇದು ತಳಕು ಬಳಕಿನ ಬಣ್ಣದ ಮುಖವಾಡದ ಬದುಕನ್ನೇ ಹೊತ್ತುಕೊಂಡು ಬದುಕಬೇಕಾಗಿದೆ ಇಲ್ಲಿ ಸತ್ಯಕ್ಕೆ ಬೆಲೆ ಇಲ್ಲ ನಿತ್ಯವೂ ಸುಳ್ಳಾಡುವುದೇ ಇಲ್ಲಿ ಮೂಲ ಮಂತ್ರವಾಗಿದೆ ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ ಎಂಬುದು ಗೊತ್ತಿದ್ದರೂ ನಾವು ಸುಳ್ಳಿಗೆ ಬೆಲೆಕೊಟ್ಟಷ್ಟು ಸತ್ಯಕ್ಕೆ ಬೆಲೆ ಕೊಡುವುದಿಲ್ಲ ಇಲ್ಲಿಯೂ ಸಹ ನಮ್ಮ ನಡೆ ನುಡಿ ಮಾತುಕತೆ ಭಿನ್ನ ರೂಪದಿಂದ ವಿಭಿನ್ನ ಗ್ರೂಪಲ್ಲಿ ಸನ್ನಿವೇಶಕ್ಕೆ ತಕ್ಕ ಹಾಗೆ ಬದಲಾಗುತ್ತದೆ ಇರುತ್ತದೆ. ನಾವು ನಾವಾಗಿ ಬದುಕನ್ನು ನಡೆಸುವುದು ಯಾವಾಗ ಎಂಬುದನ್ನು ಇನ್ನಾದರೂ ತಿಳಿದುಕೊಂಡು ಜೀವಿಸುವ ಕಾಲ ಬರಬಹುದೇ ಆದರೆ ನಮ್ಮ ಹಾಗೆ ನಾವು ಬದುಕಿದರೆ ಅದೆಷ್ಟೋ ಬಾರಿ ಹುಚ್ಚನೆ ಎಂದು ಪರಿಗಣಿಸಿ ಇವರಿಗೆ ಹೊಂದಿಕೊAಡು ಬಾಳುವ ಗುಣವಿಲ್ಲ ಯಾವಾಗಲೂ ಹೀಗೆ ಇರುತ್ತಾರೆ ಎಂಬ ಅದೆಷ್ಟೋ ಕಟು ಮಾತುಗಳಿಗೆ ಗುರಿಯಾಗಬೇಕಾಗುತ್ತದೆ ಆದರೆ ಇಲ್ಲಿ ನಾವೆಲ್ಲರೂ ಒಂದನ್ನು ತಿಳಿದುಕೊಳ್ಳಬೇಕು ನಮ್ಮತನದಲ್ಲಿ ನಾವು ಬದುಕಿದರೆ ಮೊದಲು ಖುಷಿ ಪಡುವವರು ನಾವೇ ಅಂತಹ ಖುಷಿಯ ಸಂದರ್ಭಗಳನ್ನು ಇನ್ನೊಬ್ಬರಿಗೆ ನಾವು ಬದುಕಬೇಕು. ಮನುಷ್ಯ ಸಮಾಜ ಜೀವಿ ಸಮಾಜದೊಂದಿಗೆ ಆತನು ಹೊಂದಿಕೊAಡು ಹೋಗಲೇಬೇಕಾಗುತ್ತದೆ ಆದರೆ ಆತನ ಹೊಂದಾಣಿಕೆಯ ಬದುಕನ್ನ ಇಷ್ಟಪಡದ ಸಮಾಜದ ಅನೇಕ ಬಂಧು ಬಾಂಧವರು ನೆಂಟರಿಷ್ಟರು ಸ್ನೇಹಿತರು ಪರಿಚಯದವರು ನಮ್ಮನ್ನು ವಿಭಿನ್ನ ರೂಪದಲ್ಲಿ ನೋಡಲು ಇಷ್ಟಪಡುತ್ತಾರೆ ಅವರಿಗೋಸ್ಕರ ಆದರೂ ನಾವು ಭಿನ್ನ ರೂಪದಿಂದ ವಿಭಿನ್ನರೂಪಕ್ಕೆ ಕಾಲಿರಿಸಬೇಕಾಗುತ್ತದೆ ಇದು ಸಾರ್ವಕಾಲಿಕ ಸತ್ಯವಾಗಿದೆ ಇನ್ನಾದರೂ ನಮ್ಮ ಹಾಗೆ ನಾವು ಬದುಕಬೇಕು ಮುಖಕ್ಕೆ ಹಚ್ಚಿದ ಬಣ್ಣವನ್ನು ತೊಳೆದುಕೊಳ್ಳಲೇಬೇಕು ಆಗ ನಾವು ಈ ಸಮಾಜಕ್ಕೆ ಈ ಪರಿಸರಕ್ಕೆ ಬೆಲೆ ಕೊಟ್ಟ ಹಾಗೆ ಆಗುತ್ತದೆ ಅಲ್ಲವೇ..
ಟ್ಯಾಗ್ಸ್:#Sedam#Karnataka
ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.

Ads