Sedam
ಇದು ಅಮ್ಮನ ಕಕ್ಕುಲಾತಿ..

ಡಾ. ಶೈಲಜಾ ಎನ್. ಬಾಗೇವಾಡಿ
ಪ್ರಾಧ್ಯಾಪಕರು
ಶನಿವಾರ, ಆಗಸ್ಟ್ 8, 20262 ನಿಮಿಷ ಓದು10 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ನಮ್ಮಮ್ಮ ಅಂದ್ರೆ ನಂಗಿಷ್ಟ- ವಸುಧೇಂದ್ರ ಅವರ ಪ್ರಬಂಧ ಸಂಕಲನವು ೧೨ ಸುಲಲಿತ ಪ್ರಬಂಧಗಳ ಸುಂದರ ಹೂಗುಚ್ಛದಂತಿದೆ. ಪುಸ್ತಕದ ಮೊದಲ ಆಕರ್ಷಣೆ ಎಂದರೆ ಅದರ ಮುಖಪುಟ ವಿನ್ಯಾಸ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಲಭಿಸಿದೆ, ೨೧೦೦೦ ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಹೀಗೆ ಪುಸ್ತಕದ ಹೆಚ್ಚುಗಾರಿಕೆಯ ಪಟ್ಟಿ ದೊಡ್ಡದಿದೆ. ಇದು ಪುಸ್ತಕದ ಹೊರನೋಟವಾದರೆ, ಇನ್ನು ಅದರ ತಿರುಳು ಕೂಡ ಅಷ್ಟೇ ಸ್ವಾರಸ್ಯಕರವಾಗಿದೆ.
ಶೀರ್ಷಿಕೆಯೆ ಸೂಚಿಸುವಂತೆ ಪ್ರಬಂಧಗಳು ಹೆಚ್ಚಾಗಿ ಅವರ ಅಮ್ಮನ ಜೊತೆಗಿನ ಒಡನಾಟ, ಅಮ್ಮನ ಹಾಸ್ಯ ಪ್ರಜ್ಞೆ, ಅವರ ನೇರ ನುಡಿ, ಮುಗ್ದತೆ ಎಲ್ಲವನ್ನೂ ಹೇಳುತ್ತ ತಮ್ಮ ಸಾಫ್ಟವೇರ್ ಜಗತ್ತು, ಸಂಡೂರು, ಬೆಂಗಳೂರು,ಹೊರ ದೇಶಗಳ ಪರಿಚಯವನ್ನು ಬಹು ಸೊಗಸಾಗಿ ತಮ್ಮದೇ ಬಳ್ಳಾರಿ ಬಾಷೆಯಲ್ಲಿ ನಿರೂಪಿಸಿದ್ದಾರೆ. ಶೀರ್ಷಿಕೆಯ ಮೊದಲ ಪ್ರಬಂಧವೆ ಅಂತಃಕರಣವನ್ನು ತಟ್ಟುತ್ತದೆ. ತಾಯಿ ಮಕ್ಕಳ ಕರುಳು ಬಳ್ಳಿಯ ಸಂಬAಧ, ಬಾಲ್ಯದಲ್ಲಿ ಅಮ್ಮನ ಕಾಳಜಿ ಕಕ್ಕುಲಾತಿ ಅನುಭವಿಸಿದ ಮಕ್ಕಳು ಬೆಳೆದು ದೊಡ್ಡವರಾದಾಗ, ಮತ್ತೆ ಅದನ್ನೇ ಅವರಿಂದ ಬಯಸುವ ತಾಯಿ. ಈ ಎಲ್ಲಾ ಸೂಕ್ಷ್ಮ ವಿಷಯವನ್ನು ತಮ್ಮ ಅನುಭವದ ಮೂಲಕ ಎಳೆ ಎಳೆಯಾಗಿ ಹೇಳಿದ್ದಾರೆ.
ಒಂದು ಪ್ರಬಂಧ ದಲ್ಲಿ ಅವರ ಅಮ್ಮನಿಗಿರುವ ಸ್ಟೀಲ್ ಪಾತ್ರೆ ಹುಚ್ಚು, ಅದನ್ನು ಸಾಕಾರಗೊಳಿಸಿದ ಪರಿ,ಅಮ್ಮನ ಮುಖದಲ್ಲಿ ಮೂಡಿದ ತೃಪ್ತ ಭಾವ ಕಂಡು ಖುಷಿ ಪಡುವ
ಲೇಖಕ. ಅಮ್ಮನ ಚಿಕ್ಕ ಚಿಕ್ಕ ಬೇಡಿಕೆಗಳನ್ನು ಪೂರ್ಣ ಗೊಂಡಾಗ ಸಂಭ್ರಮಿಸುವ ಪರಿ ಎಲ್ವವು ಅನನ್ಯ.
ಇನ್ನೊಂದು ಪ್ರಮುಖ ಪ್ರಬಂಧ 'ನಮ್ಮದಲ್ಲದ ಪಾತ್ರ' ದಲ್ಲಿ, ಮನುಷ್ಯನಿಗೆ ತನ್ನದೇ ಆದ ಇತಿ ಮಿತಿ ಇರುತ್ತದೆ. ಅದನ್ನು ಮೀರಲು ಸಾದ್ಯವಿಲ್ಲ. ಎಲ್ಲವನ್ನು ನಾನೇ ಮಾಡುತ್ತೇನೆ ಎಂಬ ಅಹಂ ನಿಂದ ಹೊರಬಂದು, ಸತ್ಯದ ಅನಾವರಣ ಮಾಡಿದ್ದಾರೆ. ಎಲ್ಲದರಲ್ಲೂ ಮೂಗುತೂರಿಸುವ ಜನಕ್ಕೆ ಈ ಮಾತು ಅನ್ವರ್ಥಕ. ನಮ್ಮ ಪಾತ್ರ ನಾವು ಸರಿಯಾಗಿ ನಿಭಾಯಿಸಿದರೆ ಸಾಕು ಲೋಕದ ಗೊಡವೆ ನಮಗ್ಯಾಕೆ ಎಂಬAತಿದೆ. ಅವರ ಇತರ ಪ್ರಬಂಧಗಳಲ್ಲಿ ಹೊಸ ಕಾರಿನ ಅನುಭವ, ಆಫಿಸ್ ಗೆ ಬರುವ ಅತಿಥಿಗಳ ಒಡನಾಟ, ವಿದೇಶಿ ಜನರ ಚೇಷ್ಟೆಗಳು, ವಿದೇಶಿ ಪ್ರವಾಸ ಎಲ್ಲವೂ ಸಾಫ್ಟವೇರ್ ಜಗತ್ತನ್ನು ಪರಿಚಯಿಸುತ್ತವೆ. ಮುಸ್ಸಂಜೆ ಮರಳಿ ಪ್ರಬಂಧದಲ್ಲಿ ಹಿರಿಯ ಜೀವಿಗಳ ತವಕ ತಲ್ಲಣ, ನಗರದ ಯಾಂತ್ರಿಕ ಬದುಕಿನಲ್ಲಿ ಅವರು ಆತಂಕ ಪಡುವ ಪರಿ, ಧಾವಂತದ ಬದುಕಿನಲ್ಲಿ ವಯಸ್ಕರು ಹಿಂದೆ ಬೀಳುತ್ತಿದ್ದಾರೆ, ಕಾಣೆಯಾಗುತ್ತಿದ್ದಾರೆ ಎಂಬ ಭಾವ.ಅವರ ಮುಸ್ಸಂಜೆ ಕಾಲವನ್ನು ಕಳೆಯಲು ಮೆಟ್ರೋ ನಗರಗಳು ಸುರಕ್ಷಿತವೆ? ಎಂಬ ಪ್ರಶ್ನೆ ಕಾಡುವಂತಿದೆ.ಒಟ್ಟಾರೆ ಇಳಿವಯಸ್ಸಿನಲ್ಲಿ ಸ್ಪಂದಿಸುವ, ಹಂಚಿಕೊಳ್ಳುವ ಮನಸ್ಸು ಗಳು ಜೊತೆಗೆ ಇಲ್ಲವಾದರೆ. ಯಾವ ಊರು, ಕೇರಿಯಾದರು ವೃದ್ದಾಪ್ಯ ಶಾಪವೆ ಸರಿ ಎನ್ನುವಂತೆ ಹಲವಾರು ಉದಾಹರಣೆ ನೀಡಿದ್ದಾರೆ. ಈ ಬರಹ ಹೆಚ್ಚು ಆಲೋಚನೆಗೆ ಎಡೆ ಮಾಡಿಕೊಡುತ್ತದೆ
ವಸುಧೇಂದ್ರ ಅವರ ಲಲಿತ ಪ್ರಬಂಧಗಳು ಸುಲಲಿತವಾಗಿದ್ದು, ಅಬಾಲ ವೃದ್ಧರಾದಿಯಾಗಿ ಓದಿ ಆನಂದ ಪಡುವಂತಿವೆ. ಹಾಗಾಗಿ ವಿದ್ಯಾರ್ಥಿ ಸ್ನೇಹಿ ಪುಸ್ತಕಗಳು ಹೆಚ್ಚು ಮುದ್ರಣ ಮಾಡಿ, ಓದುವ ಗೀಳು ಕೂಡ ಹೆಚ್ಚಿಸುವ ಪ್ರಯತ್ನ ಛಂದ ಪ್ರಕಾಶನದು. ಒಟ್ಟಾರೆ ಸಂಗ್ರಹ ಯೋಗ್ಯ ಮತ್ತು ಉತ್ತಮ ಅಭಿರುಚಿಯ ಲಲಿತ ಪ್ರಬಂಧಗಳನ್ನು ಹೊಂದಿದೆ.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads