Specials
ಚಾತುರ್ಮಾಸ : ಧಾರ್ಮಿಕ ಆಚರಣೆ - ವೈಜ್ಞಾನಿಕ ಆಧಾರ

ಸೇಡಂ ಶ್ರೀನಿವಾಸ,
ಪತ್ರಕರ್ತರು
ಸೋಮವಾರ, ಆಗಸ್ಟ್ 10, 20262 ನಿಮಿಷ ಓದು5 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಚಾತುರ್ಮಾಸ ಅಂದರೆ “ ನಾಲ್ಕು ತಿಂಗಳು “ ಹಿಂದೂ ಸಂಪ್ರದಾಯದಲ್ಲಿ ಆಷಾಢ ಶುದ್ದ ಏಕಾದಶಿಯಿಂದ ಕಾರ್ತಿಕ ಶುದ್ದ ಏಕಾದಶಿಯವರೆಗಿನ ನಾಲ್ಕು (೦೪) ತಿಂಗಳ ಅವಧಿಯನ್ನು ಚಾತುರ್ಮಾಸ ಎಂದು ಪರಗಣಿಸುವುದು ವಿಶೇಷ. ಪ್ರಸಕ್ತ ೨೦೨೬ ರಲ್ಲಿ ಜುಲೈ ೨೬ರಿಂದ ನವೆಂಬರ್ ೨೨ ರವರೆಗೆ ಈ ಚಾತುರ್ಮಾಸ ಅವಧಿಯಾಗಿರುತ್ತದೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಶೆಷತೆ ಹಿನ್ನಲೆಯಲ್ಲಿ “ಶ್ರೀ ವಿಷ್ಣುವಿನ ಯೋಗನಿದ್ರೆ, ಆಷಾಢ ಶುದ್ದ ಏಕಾದಶಿ ಅಂದರೆ ದೇವಶಯನ ಏಕಾದಶಿ. ಈ ಏಕಾದಶಿ ಅತ್ಯಂತ ಪವಿತ್ರ ಮತ್ತು ವಿಶೇಷ. ಈ ದಿನದಿಂದ ವಿಷ್ಣು ೦೪(ನಾಲ್ಕು) ತಿಂಗಳುಗಳ ಕಾಲ ಕ್ಷೀರ ಸಾಗರದಲ್ಲಿ ಯೋಗ ನಿದ್ರೆಗೆ ಜಾರುತ್ತಾನೆ ಎಂಬ ಬಲವಾದ ನಂಬಿಕೆ. ಕಾರ್ತಿಕ ಶುದ್ದ ಏಕಾದಶಿ ಅಂದರೆ ಪ್ರಬೋಧಿನಿ ಏಕಾದಶಿಗೆ ಎಚ್ಚರಗೊಳ್ಳುತ್ತಾನೆ.
ಸನ್ಯಾಸಿಗಳು, ಸಾಧಗಳು ಈ ನಾಲ್ಕು ತಿಂಗಳು ಸಂಚಾರ ನಿಲ್ಲಿಸಿ ಒಂದು ಕಡೆ ನೆಲೆಸಿ ಧ್ಯಾನ, ಅಧ್ಯಯನ, ಪ್ರವಚನ ಮೂಲಕ ಧರ್ಮ ಪ್ರಚಾರಕ್ಕೆ ಹೆಚ್ಚಿನ ಹೆಚ್ಚು ಸಮಯ ಮೂಲಕ ಪ್ರತಿಯೊಬ್ಬರಲ್ಲಿ ಜ್ಞಾನಾರ್ಜನೆ ಮೂಡಿಸುವುದು ವಿಶೇಷ ಅವಧಿ ಇದಾಗಿದೆ.
ವೃತ-ನಿಯಮಗಳು ಈ ಅವಧಿಯಲ್ಲಿ ಅನೇಕರು ಪಾಲಿಸುತ್ತಾರೆ. ಏಕಭುಕ್ತ, ನೆಲದ ಮೇಲೆ ಮಲಗುವುದು ಒಳಗೊಂಡAತೆ ದಿನಂಪ್ರತಿ ಪೂಜೆ, ಭಜನೆ, ಪುರಾಣ ಮತ್ತು ಪಾರಾಯಣಕ್ಕೆ ಒತ್ತು ನೀಡುವುದು ಸಹಜ.
ಈ ಅವಧಿಯಲ್ಲಿ ಹಬ್ಬಗಳ ಸರಣಿ. ನಾಗಪಂಚಮಿ, ವರಮಹಾಲಕ್ಷಿö್ಮÃ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ, ದೀಪಾವಳಿ ಮಹತ್ವದ ಹಬ್ಬಗಳ ಹಿನ್ನಲೆಯಲ್ಲಿ ಆಧ್ಯಾತ್ಮಿಕವಾಗಿ ತುಂಬಾ ಶ್ರೀಮಂತ ಕಾಲ ಎಂದಲ್ಲಿ ತಪ್ಪಾಗಲಿಕ್ಕಿಲ್ಲ.
ಚಾತುರ್ಮಾಸ : ವೈಜ್ಞಾನಿಕ ಮತ್ತು ಆರೋಗ್ಯ ಆಧಾರ
ಈ ಹಿಂದೆ ಋಷಿ ಮುನಿಗಳು ಕೇವಲ ನಂಬಿಕೆಗಾಗಿ ಅಲ್ಲ, ಋತುಮಾನ ಮತ್ತು ದೇಹದ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಆಯಾ ದಿನಗಳಲ್ಲಿ ಆಹಾರ ಪದ್ದತಿಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಅಂದು ಧಾರ್ಮಿಕ ನೆಲೆಗಟ್ಟಿನ ಮೇಲೆ ಆರೋಗ್ಯ ಆಹಾರ ಪದ್ದತಿಯ ನಿಯಮಗಳನ್ನು ರೂಪಿಸಿದರು. ಅದು ಇಂದು ವೈಜ್ಞಾನಿಕ ನೆಲೆಗಟ್ಟಿನ ಮೇಲೆ ನಿಯಮ ರೂಪಿಸಿಕೊಂಡಿದೆ.
ಮಳೆಗಾಲ : ರೋಗಗಳ ಕಾಲ. ಆಷಾಢದಿಂದ ಕಾರ್ತಿಕ ಮಾಸದವರೆಗೆ೩ ಭಾರತದಲ್ಲಿ ಮಳೆಗಾಲ. ನಂತರ ಗಾಳಿಯಲ್ಲಿ ತೇವಾಂಶ ಜಾಸ್ತಿ. ಬ್ಯಾಕ್ಟರಿಯಾ, ಫಂಗಸ್, ಸೊಳ್ಳೆಗಳು ಹೆಚ್ಚಾಗುತ್ತವೆ. ಜೀರ್ಣ ಶಕ್ತಿ ಮಂದವಾಗುತ್ತದೆ. ಈ ಕಾರಣದಿಂದ ಹಸಿ ತರಕಾರಿ, ಎಲೆಕೋಸು, ಹಸಿರು ಸೊಪ್ಪು, ಮೊಸರು ಕಡಿಮೆ ಮಾಡಲು ಮತ್ತು ಎಣ್ಣೆ-ಖಾರ ಕಡಿಮೆ ಒ¼ಲಗೊಂಡ ಹಗುರ ಆಹಾರಕ್ಕೆ ಒತ್ತು ನೀಡಲಾಯಿತು.
ಜೀರ್ಣಾಂಗಗಳಿಗೆ ವಿಶ್ರಾಂತಿ : ನಿರಂತರ ಹಬ್ಬ-ಊಟದಿಂದ ದೇಹಕ್ಕೆ ಹೊರೆ, ಚಾತುರ್ಮಾಸದಲ್ಲಿ ಉಪವಾಸ, ಏಕಭುಕ್ತ, ಸಾತ್ವಿಕ ಆಹಾರದಿಂದ ಜೀರ್ಣಾಂಗಗಳಿಗೆ ವಿಷಮುಕ್ತಗೊಳಿಸುವ (ಡಿಟಾಕ್ಸ್) ಸಿಗುವ ಸಾಧ್ಯತೆ ಹೆಚ್ಚು. ಇದನ್ನು ಇಂದಿನ ಇಂಟರ್‌ಮಿಟೆAಟ್ ಫಾಸ್ಟಿಂಗ್ ರೀತಿಯಲ್ಲೂ ನೋಡಬಹುದು.
ಸಂಚಾರ ನಿಷೇಧಿಸಲು ಹಿಂದೆ ರಸ್ತೆಗಳು ಕೆಸರು, ಕಾಡುಗಳಲ್ಲಿ ಕ್ರೂರ ಪ್ರಾಣಿಗಳ, ಹಾವು-ಕೀಟಗಳ ಭಯ, ಸನ್ಯಾಸಿಗಳು ಊರಿಂದ ಉರಿಗೆ ಹೊದರೆ ರೋಗ ಹರಡುವ ಸಾಧ್ಯತೆ ಇತ್ತು. ಒಂದೇ ಕಡೆ ಇದ್ದು ಸಾಧನೆ ಮಾಡುವುದರಿಂದ ಉತ್ತಮ ಆರೋಗ್ಯ, ಸಮಾಜಕ್ಕೂ ಅನುಕೂಲ.
ಒಟ್ಟಾರೆ ಚಾತುರ್ಮಾಸವು “ ದೇಹವನ್ನು ಶುದ್ದಮಾಡಿ, ಮನಸ್ಸನ್ನು ದೇವರ ಕಡೆಗೆ ತಿರುಗಿಸುವ ವ್ಯಜ್ಞಾನಿಕ ಕಾಲಮಾನ.
ಧರ್ಮ ಆರೋಗ್ಯ ಮತ್ತು ಸಮಾಜ ಮೂರನ್ನೂ ಒಟ್ಟಿಗೆ ನೋಡುವ ಭಾರತೀಯ ಬುದ್ದಿವಂತಿಕೆ ಈ ಚಾತುರ್ಮಾಸ ಆಚರಣೆಯಲ್ಲಿ ಕಾಣುತ್ತದೆ.
ಈ ಹಿಂದಿನ ಚಾತುರ್ಮಾಸ ಅವಧಿಯಲ್ಲಿ ಎಲ್ಲಾ ಮಠಗಳ ಪೀಠಾಧಿಪತಿಗಳು ಸಮಾಜಕ್ಕೆ ಅನೇಕ ಸಂದೇಶಗಳ ಮೂಲಕ ಆಶೀರ್ವದಿಸಿ ಅನುಗ್ರಹಿಸಿದ್ದಾರೆ. ಗೋವು ಕುಟುಂಬದ ಸದಸ್ಯ, ಅಧರ್ಮ ಅಧೋಗತಿಗೆ ಕಾರಣ, ಭೋಗದಲ್ಲಿ ಭಗವಂತನ್ನು ಮರೆಯದಿರಲು ಎಚ್ಚರಿಸಿದ್ದಾರೆ. ನಿಷ್ಕಾಮ ಕರ್ಮದಿಂದ ಭಗವಂತನ ಅನುಗ್ರಹ ಸಾಧ್ಯ, ನಮ್ಮೊಳಗಿನ ಆನಂಧ ಅನುಭವಿಸಲು ಭಗವಂತನ ಸ್ಮರಣೆ ಅಗತ್ಯ. ಬಾಲ್ಯಾವಸ್ಥೆಯಲ್ಲಿ ಧರ್ಮಾಚರಣೆ ಅಗತ್ಯ ಎಂದು ತಿಳಿಹೇಳಿದ್ದಾರೆ. ಹನಮಂತನ ಭಕ್ತಿ-ಶಕ್ತಿ ಮತ್ತು ಆದರ್ಶ ಅನುಕರಣೀಯ, ದೇಹ ಬಟ್ಟೆಯಿದ್ದಂತೆ ಸಾವಿಗೆ ಹೆದರುವುದು ಬೇಡ. ಅಗತ್ಯ ವಿದ್ದಷ್ಟು ಮಾತ್ರ ಸಂಪಾದಿಸಲು ಕಿವಿ ಮಾತು ಹೇಳಿದ್ದಾರೆ.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads