📅 ಮಂಗಳವಾರ, ಅಕ್ಟೋಬರ್ 6, 2026
Myna News Logo
ಮೈನಾ

ಸೇಡಂ

ನ್ಯೂಸ್

ಕನ್ನಡ ದಿನ ಪತ್ರಿಕೆ
Editor

ಪ್ರಧಾನ ಸಂಪಾದಕರು:

ಮಹಿಪಾಲರೆಡ್ಡಿ

Ads
Specials

ಸದಾಶಿವ ಗುರುವೇ ನಿಮಗಿದೋ ವಂದನೆ

ಬಸವರಾಜ ಚಿನಿವಾರ,

ಬಸವರಾಜ ಚಿನಿವಾರ,

ಹಿರಿಯ ಪತ್ರಕರ್ತರು

ಶನಿವಾರ, ಸೆಪ್ಟೆಂಬರ್ 19, 20262 ನಿಮಿಷ ಓದು4 ವೀಕ್ಷಣೆಗಳು
ಸುದ್ದಿ ಹಂಚಿಕೊಳ್ಳಿ:
ಸದಾಶಿವ ಗುರುವೇ ನಿಮಗಿದೋ ವಂದನೆ
ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ನಾನು ಹೆಚ್ಚು ಸದಾ ಜೊತೆ ಅವರ ಮನೆಯಲ್ಲಿ ಕಾಳ ಕಳೆದೆ. ಸದಾ ಜೊತೆಗೆ ರೂಢಗಿ ಮಲ್ಲಿಕಾರ್ಜುನ್ ಅವರೂ ಸಹ ಗೆಳೆಯರು. ನಾವು ಮೂರು ಜನ ಅವಿ ಅವರ ಮನೆಯ ಮೇಲ್ಮಹಡಿಯ ಒಂದು ಕೋಣೆಯಲ್ಲಿ ಕುಳಿತು ಓದು, ಬರಹ ಮಾಡುತ್ತಿದ್ದೆವು. ಹಲವಾರು ಸಂದರ್ಭಗಳಲ್ಲಿ ಅವರ ಮನೆಯಲ್ಲಿಯೇ ಊಟ. ದೊಡ್ಡವ್ವ, ಇಬ್ಬರು ಚಿಗವ್ವ ನಮಗೆಲ್ಲ ಬಹಳ ಹಚ್ಚಿಕೊಳ್ಳುತ್ತಿದ್ದರು. ಆಗ ದಿನಾಲೂ ಕುದಿಸಿದ ಶೇಂಗಾ, ರಸಪೂರಿತ ಮಾವಿನ ಹಣ್ಣುಗಳನ್ನು ತಿನ್ನಲು ಕೊಡುತ್ತಿದ್ದರು. ಮಾಳಿಗೆಯ ಮೇಲೆ ಕುಳಿತು ಎಲ್ಲರೂ ತಿನ್ನುತ್ತಿದ್ದೆವು. ಕೆನೆ ಕೆನೆ ಮೊಸರು, ಶಿಖರಣಿಯ ಸವಿ ಮೆರಯಲಾಗದು. ಇನ್ನು ಅವಿ ಅವರ ಹಿರಿಯಣ್ಣ ಶ್ರೀ ಈಶ್ವರ ಕತ್ತಿ ಅವರು ನನ್ನ ಪಾಲಿನ ಹಿತೈಷಿ ಎನ್ನುವುದಕ್ಕಿಂತಲೂ ಉತ್ತಮ ಮಾರ್ಗದರ್ಶಕರು. ಬಾವಿಯೊಳಗಿನ ಕಪ್ಪೆಯಂತಿದ್ದ ನನಗೆ ಸಮುದ್ರದ ಕಪ್ಪೆಯಂತೆ ಮಾಡಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಮ್‌ಎ ಸೀಟ್ ಸಿಗದೇ ಹತಾಶನಾಗಿದ್ದಾಗ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಸೀಟು ಕೊಡಿಸುವ ಮೂಲಕ ನನ್ನ ಬದುಕಿಗೆ ಸಂಜೀವಿನಿಯಾದರು. ಪ್ರೌಢಶಾಲೆಯ ದಿನಗಳಲ್ಲಿ ಅವರು ಜೇಸೀಸ್ ಸಂಸ್ಥೆ ಹುಟ್ಟುಹಾಕಿದರು. ಅವರು ಮುಧೋಳದಲ್ಲಿ ಜೇಸೀಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗ ಅವರ ಆಡಿದ ಮಾತುಗಳು ನನಗಷ್ಟೇ ಅಲ್ಲ, ಹಕ್ಕಿ ಪಾಪ್ಯಾ, ಶಂಕರ ಗಾಣಿಗೇರ್ ಅವರಿಗೂ ಸ್ಪೂರ್ತಿ ಮತ್ತು ಪ್ರೇರಣೆಯಾದವು. ಅವಿ ಅವರ ಇನ್ನೋರ್ವ ಅಣ್ಣ ಶಿವು ನಮಗೆಲ್ಲ ಯುತ್ ಜೇಸೀಸ್ ವಿಂಗ್ ಮಾಡಿ ಸದಸ್ಯರನ್ನಾಗಿ ಮಾಡಿದ. ಆಗಲೇ ನಮಗೆ ವ್ಯಕ್ತಿತ್ವ ವಿಕಸನದ ಪ್ರಾಯೋಗಿಕ ಪಾಠ ಆರಂಭಗೊAಡಿತು. ವುಮೆನ್ಸ್ ವಿಂಗ್, ಕಿಡ್ಸ್ ವಿಂಗ್ ಸಹ ಜೇಸೀಸ್‌ನಲ್ಲಿ ಇದ್ದುದರಿಂದ ಇಡೀ ಕುಟುಂಬದ ಸದಸ್ಯರು ಸಂಘಟನೆಯಲ್ಲಿ ತೊಡಗಿದ್ದರಿಂದ ನಾವು ಮತ್ತೊಬ್ಬರಿಗೆ ಯಾವ ರೀತಿ ಇರಬೇಕು ಎಂಬುದನ್ನು ಕಲಿತೆವು. ಶ್ರೀ ಕತ್ತಿ ಅವರ ಮನೆತನದ ಕುರಿತು ಹೇಳುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆಯುತ್ತದೆ. ಇಡೀ ಕುಟುಂಬದ ಸದಸ್ಯರು ಈಗಲೂ ಸಹ ನನ್ನೊಂದಿಗೆ ಅದೇ ಆತ್ಮೀಯತೆ ಹೊಂದಿದ್ದಾರೆ. ಈಗಲೂ ಸಹ ನಾನು ಅವರ ಮನೆಗೆ ಹೋಗುತ್ತೇನೆ. ಮೊದಲು ದೊಡ್ಡವ್ವ, ಚಿಗವ್ವ ಅವರು ಬಸು ಬಂದ ಎನ್ನುತ್ತಿದ್ದರು. ಈಗ ಅವರ ಕುಟುಂಬಕ್ಕೆ ಅನೇಕ ಹೊಸ ಸದಸ್ಯರು ಬಂದಿದ್ದಾರೆ. ಈಗಲೂ ಸಹ ಅವರ ಮನೆಯವರು ಅವರ ಮನೆಗೆ ಹೋದರೆ ಬಸು ಬಂದ ಎನ್ನುತ್ತಾರೆ. ನಿಜವಾಗಿಯೂ ಅವಿ ಅವರು ಸಹೋದರ ಬಾಂಧವ್ಯಕ್ಕೆ ಬಿಡಿಸದ ಬಂಧನದ ಸಂಕೋಲೆ. ಶ್ರೀಮತಿ ಅವಿ ಅವರ ತಂದೆ, ನನ್ನ ಪೂಜ್ಯ ಶಿಕ್ಷಕರಾಗಿದ್ದ ಶ್ರೀ ಕತ್ತಿ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮ ಇತ್ತು. ಅವರ ಹೆಸರಿನಲ್ಲಿ ಗ್ರಂಥ ತರುವ ಕುರಿತು ಸಿದ್ಧತೆ ಮಾಡುತ್ತಿದ್ದರು. ಆ ಕುರಿತು ನನ್ನ ಲೇಖನ ಪಡೆಯುವ ಸಲುವಾಗಿ ಶ್ರೀಮತಿ ಅವಿಯವರು ಕಾರಿನಲ್ಲಿ ಮಕ್ಕಳೊಂದಿಗೆ ಬಂದು ನಾನು ತಾತ್ಕಾಲಿಕವಾಗಿ ಇದ್ದ ಚಿಕ್ಕ ಕೋಣೆಗೆ ಆಗಮಿಸಿರು. ಆಗ ನಾನು ಇನ್ನೇನು ಒಂದು ತಂಬಿಗೆ ಎತ್ತಿ ಜಳಕ ಮಾಡುವಷ್ಟರಲ್ಲಿಯೇ ಬಾಗಿಲು ಬಡಿದರು. ಆಗ ನಾನು ಯಾರು ಎಂದು ಕೇಳಿದ. ಅವಿ ಎಂದು ಹೇಳಿದಾಗ ತಕ್ಷಣವೇ ನಾನು ಮತ್ತೆ ಬಟ್ಟೆಗಳನ್ನು ಹಾಕಿಕೊಂಡು ಬಾಗಿಲು ತೆಗೆದೆ. ಒಳಬಂದ ಅವಿ ಎಲ್ಲ ವಿಷಯ ಹೇಳಿ, ಶ್ರೀಶೈಲ್‌ನ ನಂಬರ್ ಇದೆ. ನಿನ್ನ ಫೋನ್ ನಂಬರ್ ಕೊಡು ಎಂದು ಕೇಳಿದರು. ಅದಕ್ಕೆ ನಾನು ನಿಮ್ಮ ನಂಬರ್ ಕೊಡಿ ನಾನು ಬರೆದುಕೊಳ್ಳುತ್ತೇನೆ ಎಂದು ನಾನು ಅವರ ನಂಬರ್ ಒಂದು ಚೀಟಿಯಲ್ಲಿ ಬರೆದುಕೊಂಡೆ. ಅವರು ಅಲ್ಲಿಂದ ತೆರಳಿದರು. ಜಳಕ ಮಾಡಿದ ತಕ್ಷಣವೇ ನಾನು ಅಂದೇ ಕಲಬುರ್ಗಿಗೆ ಹೋಗುವ ಸಂದರ್ಭ ಬಂತು. ತರಾತುರಿಯಲ್ಲಿ ಸಂಜೆ ಊರಿಗೆ ಹೋಗುವಾಗ ಅವರ ಫೋನ್ ನಂಬರ್ ಚೀಟಿ ಮರೆತು ಹೋದೆ. ನಂತರ ಮರಳಿ ಬಂದಾಗ ಆ ನಂಬರ್ ಚೀಟಿ ಇರಲಿಲ್ಲ. ಇತ್ತೀಚೆಗೆ ಪಿಂಟೂ ಮಾಸ್ಟರ್ (ಲಕ್ಷಾö್ಯಣಿ) ಅವರು ಶ್ರೀಮತಿ ಅವಿ ಅವರ ಫೋನ್ ನಂಬರ್ ಕೇಳಿದರು. ನಾನು ಕೊಡುವೆ ಎಂದೆ. ತಕ್ಷಣವೇ ಶ್ರೀ ಈಶ್ವರ್ ಸರ್ ಅವರ ವಾಟ್ಸಪ್‌ಗೆ ಮೆಸೇಜ್ ಮಾಡಿ ಅವಿ ಅವರ ನಂಬರ್ ಪಡೆದುಕೊಂಡೆ. ನಂತರ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದಾಗ ಗುರುಪೂರ್ಣಿಮೆಯ ಕಾರ್ಯಕ್ರಮದಿಂದ ಸಂತೋಷ ವ್ಯಕ್ತಪಡಿಸಿದರು. ಇನ್ನು ಶ್ರೀಮತಿ ಸಾವಿತ್ರಿದೇವಿ ಉದಪುಡಿ ಅವರು ಸಹಪಾಠಿಯಾಗಿ ಅಷ್ಟೇ ನನಗೆ ಪರಿಚಯ. ಅವರ ಮನೆ ಕೊಪದಟ್ಟಿಯಲ್ಲಿ ಇದ್ದುದರಿಂದ ನನಗೆ ಅವರ ಮನೆತನದ ಕುರಿತು ಹೆಚ್ಚು ಪರಿಚಯ ಇಲ್ಲ ಮತ್ತು ಅವರೊಂದಿಗೆ ಎಂದಿಗೂ ಮಾತನಾಡುವಂತಹ ಸಂದರ್ಭ ಮತ್ತು ಪ್ರಮೇಯವೇ ಬರಲಿಲ್ಲ. ಒಳ್ಳೆಯ ಪ್ರಯತ್ನವಾದಿ, ವಿಷಯ ತಿಳಿಯದೇ ಇದ್ದರೂ ತಿಳಿದುಕೊಳ್ಳುವ, ಅರಿತುಕೊಳ್ಳುವ ಹಂಬಲ. ಶಾಲೆಯಲ್ಲಿ ಸಮಯಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದರು. ವಿಷಯಗಳನ್ನು ಹೆಚ್ಚಿನ ರೀತಿಯಲ್ಲಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದರು. ನನಗೆ ತಿಳಿಯುತ್ತಿಲ್ಲ ಎಂದು ಹಣೆಗೆ ಕೈ ಹಚ್ಚಿಕೊಂಡು ಕುಳಿತುಕೊಳ್ಳುವ ಜಾಯಮಾನ ಹೊಂದಿರಲಿಲ್ಲ. ಕಲಿಕೆಯ ನಿರಂತರ ಪ್ರಯತ್ನವು ಅವರಲ್ಲಿ ಎದ್ದು ಕಾಣುತ್ತಿತ್ತು. ನನ್ನ ಬೌರಕ್ಕನ ಹಾಗೆ ಅವರೂ ಸಹ ಓದು, ಬರಹವನ್ನು ಹೆಚ್ಚು ಕಲಿಯಲು ಪ್ರಯತ್ನಪಡುತ್ತಿದ್ದರು. ಶಾಲಾ ತರಗತಿಗೆ ಮಾತ್ರ ಸಮಯ ಪರಿಪಾಲನೆ ಮಾಡುತ್ತಿದ್ದರು. ತಿಳಿಯದೇ ಇರುವ ವಿಷಯವನ್ನು ತಿಳಿದುಕೊಳ್ಳುವ ಅವರ ರೀತಿ ನನಗೆ ಪ್ರೇರಣೆ ಮತ್ತು ಸ್ಫೂರ್ತಿ ಆಗಿತ್ತು. ಶ್ರೀಮತಿ ವಿಶಾಲಾಕ್ಷಿ ಶೇರಿಗಾರ್ ಅವರೊಂದಿಗೆ ನಾನು ಮಾತನಾಡದೇ ಇದ್ದರೂ ಸಹ ಅವರ ಮನೆಯ ಹತ್ತಿರವೇ ರಾಜೇಂದ್ರ ಕಲ್ಯಾಣಿ, ವಿಷ್ಣುಪಂತ ಕಲಾಲ್, ಸುರೇಶ್ ಕಲಾಲ್ ಮುಂತಾದವರ ಮನೆಗಳು ಇದ್ದವು. ಹೀಗಾಗಿ ಅವರು ನನಗೆ ಹೆಚ್ಚು ಚಿರಪರಿಚಿತರು. ಸ್ಪಷ್ಟ, ನಿಖರ ಅರಳು ಹುರಿದಂತಹ ಮಾತುಗಳು ಅವರಿಂದ ಬರುತ್ತಿದ್ದವು. ಜೋರಾದ ಅಂತ:ಕರಣದ ಅವರ ಮಾತುಗಳು ನನಗೆ ಹೆಚ್ಚು ಹಿಡಿಸುತ್ತಿದ್ದವು. ಓದು ಮತ್ತು ಬರಹದಲ್ಲೂ ಸಹ ಉತ್ತಮ ಸ್ಥಿತಿಯಲ್ಲಿದ್ದರು. ಆಟ, ಪಾಠಗಳಲ್ಲಿ ಕ್ರಿಯಾಶೀಲರಾಗಿದ್ದರು. ನಾನು ಕಲ್ಯಾಣಿ ಮತ್ತು ಕಲಾಲ್ ಅವರೊಂದಿಗೆ ಮಾತನಾಡಿದರೆ ಸಾಕು, ವಿಶಾಲಾಕ್ಷಿ ಅವರೊಂದಿಗೆ ಮಾತನಾಡಿದಷ್ಠೇ ಖುಷಿಯಾಗುತ್ತಿತ್ತು. ನನಗೆ ನೋಡಿದ ತಕ್ಷಣ ಹಸನ್ಮುಖಿಯಾಗುತ್ತಿದ್ದರು. ಇದರಿಂದ ಅವರೊಂದಿಗೆ ಮಾತನಾಡಿದಷ್ಟೇ ಸಂತೋಷ ನನಗಾಗುತ್ತಿತ್ತು. ಇನ್ನು ಶ್ರೀಮತಿ ತಾರಾದೇವಿ ಉದಪುಡಿ ಅವರು ಸಹ ಕೊಪದಟ್ಟಿಯವರು. ಹೀಗಾಗಿ ಅವರ ಮನೆತನಕ್ಕೂ ನಮ್ಮ ಮನೆತನಕ್ಕೂ ಅಷ್ಟೊಂದು ಸಂಪರ್ಕ ಇರಲಿಲ್ಲ. ಮೂರು ವರ್ಷಗಳ ಅವಧಿಯಲ್ಲಿ ಅವರೊಂದಿಗೆ ಎಂದಿಗೂ ಮಾತನಾಡಲಿಲ್ಲ. ಅಂತ:ಕರಣದ ಭಾಷೆಯೇ ಅವರೊಂದಿಗೆ ನಾನು ಹೆಚ್ಚು ಒಡನಾಟ ಹೊಂದಿದ್ದೆ. ಸೂಕ್ಷö್ಮ ಸಂವೇಧನೆಯ ಮನಸ್ಸು. ಓದು, ಬರಹದಲ್ಲೂ ಯಾರಿಗಿಂತಲೂ ಕಡಿಮೆ ಇಲ್ಲದವರು. ಸೌಂದರ್ಯದ ಗಣಿಯೇ ಆಗಿದ್ದರೂ ಸಹ ಎಂದಿಗೂ ಜಂಭ ಕೊಚ್ಚಿಕೊಳ್ಳಲಿಲ್ಲ. ಎಂದಿಗೂ ವಿವಾದಗಳನ್ನು ಹುಟ್ಟುಹಾಕಿಕೊಳ್ಳದ, ಯಾರ ಮನಸ್ಸು ನೋಯಿಸದ ಶಾಂತ ಸಾಗರ ಅವರಾಗಿದ್ದರು. ನಾನು ಕೊಪದಟ್ಟಿಗೆ ನನ್ನ ರಬಕವಿ ಮಾವನೊಂದಿಗೆ ನಮ್ಮ ಸಂಬAಧಿಕರಾದ ಶ್ರೀ ಭೋಜ್ ಮಾಮಾ ಅವರ ಮನೆಗೆ ಬರುತ್ತಿದ್ದೆ. ಆಗ ಉದಪುಡಿ ಸಹೋದರಿಯರ ನೆನಪು ಹಳ್ಳ ದಾಟುತ್ತಿದ್ದಂತೆಯೇ ಬರುತ್ತಿತ್ತು. ನನಗೆ ಕೊಪದಟ್ಟಿ ಎಂದಾಗ ಪರಸು ಉದಪುಡಿ ಹೆಚ್ಚು ಆತ್ಮೀಯ ಗೆಳೆಯ. ಆತನೊಂದಿಗೆ ಹೆಚ್ಚು ಹರಟೆ ಹೊಡೆಯುತ್ತಿದ್ದೆ. ಆತನೂ ಸಹ ನನಗೆ ವಿವಿಧ ತೆರನಾದ ಹುಣಚಿ ಬೋಟುಗಳನ್ನು ನನಗೆ ಕೊಡುತ್ತಿದ್ದ. ನಗಾರಿ ಬೋರಂಗಿ, ಹಸಿರು ಬೋರಂಗಿ ಮುಂತಾದ ಬೋರಂಗಿಗಳನ್ನು ನನಗೆ ಹಿಡಿದುಕೊಡುತ್ತಿದ್ದ. ನನಗೆ ಈಜು ಎಂದರೆ ಪಂಚ ಪ್ರಾಣ. ಒಂದನೇ ತರಗತಿಯಿಂದಲೇ ನನಗಿಂತ ಕಿರಿಯ ನೀಲಿ ಮಲ್ಲು ಜೊತೆ ಅವರ ಬಾವಿಗೆ ಜಳಕಕ್ಕೆ ಹೋಗುತ್ತಿದ್ದೆವು. ನನ್ನ ಪ್ರೌಢಶಾಲೆಯ ಎದುರೇ ತೋಟದ ಬಾವಿಯಲ್ಲಿ ಈಜು ಕಲಿತು ನಿರಂತರವಾಗಿ ಈಜುತ್ತಿದ್ದೆ. ಮುಂದೆ ೪ನೇ ತರಗತಿಗೆ ಶ್ರೀ ಶಂಕರ ಗಾಣಿಗೇರ್ ಗೆಳೆತನ ಶುರುವಾಯಿತು. ಆಗ ಆತನೊಂದಿಗೆ ಯರಗಟ್ಟಿ ರಸ್ತೆಯಲ್ಲಿರುವ ಹನಗಂಡಿಯವರ ತೋಟದ ಬಾವಿಯಲ್ಲಿ ಈಜುತ್ತಿದ್ದೆವು. ಒಂದು ಹಂತದಲ್ಲಿ ಶಂಕರ ಸಾಹಸಜೀವಿ. ಪ್ರತಿಯೊಂದರಲ್ಲಿಯೂ ಅಪಾಯಕಾರಿ ನಿರ್ಧಾರ ಕೈಗೊಳ್ಳುತ್ತಿದ್ದ. ಒಂದು ದಿನ ಪಕ್ಕದ ಆವಿನವರ್ ಬಾವಿಗೆ ಈಜಲು ಕರೆದುಕೊಂಡು ಹೋದ. ಆ ಬಾವಿ ಇಡೀ ಊರಿನಲ್ಲಿಯೇ ದೊಡ್ಡದು. ಬಾವಿಯ ಯಾತರ ನೀರಿನ ಮಟ್ಟದಿಂದ ಸುಮಾರು ೩೫ ಅಡಿ ಆಳವಾಗಿತ್ತು. ಮೇಲಿಂದ ಕೆಳಗೆ ಯಾವುದೇ ಭಯವಿಲ್ಲದೇ ಜಿಗಿಯುತ್ತಿದ್ದ. ನನಗೆ ಮಾತ್ರ ಆ ಆಳದವರೆಗೆ ಮೇಲಿನಿಂದ ಜಿಗಿಯಲು ಅಂಜುತ್ತಿದ್ದೆ. ಒಂದು ದಿನ ನನಗೆ ಯಾತರ ಮೇಲೆ ನಿಲ್ಲಿಸಿ, ತಾನು ನೀರಿಗೆ ಜಿಗಿದ. ನೀರಿನಲ್ಲಿ ಈಜುತ್ತ ಬಸು ಜಿಗಿ ಏನೂ ಆಗುವುದಿಲ್ಲ ಎಂದು ಸ್ಫೂರ್ತಿ ತುಂಬಿದ. ಅವನ ಒಂದೇ ಮಾತಿಗೆ ಇದ್ದರೂ ಅಷ್ಟೇ ಸತ್ತರೂ ಅಷ್ಟೇ ಎಂದು ಆಳವಾದ ಬಾವಿಗೆ ದುಮುಕಿದೆ. ಇದರಿಂದ ಇಬ್ಬರೂ ಖುಷಿ ಪಟ್ಟೆವು. ಅಂತಹ ಎತ್ತರ ಯಾತರ ಮೇಲಿಂದ ಜಿಗಿಯುವುದೇ ನಮಗೆ ಹವ್ಯಾಸವಾಗಿ ಹೋಗಿತ್ತು. ಒಂದು ದಿನ ಆವಿನಾರ ಮತ್ತು ಹನಗಂಡಿ ಅವರ ಬಾವಿಗಳಲ್ಲಿ ಈಜಲು ಅವಕಾಶ ಸಿಗಲಿಲ್ಲ. ಅಂದು ಶಂಕರನೂ ಸಹ ಊರಿಗೆ ಹೋಗಿದ್ದ. ನಾನು ಬಟ್ಟೆಗಳನ್ನು ಹಿಡಿದುಕೊಂಡು ನಿರಾಶನಾಗಿ ಮನೆಗೆ ಹೋಗುತ್ತಿದ್ದಾಗ ಉದಪುಡಿ ಪರಸು ಬಂದ. ಬಾ ನಮ್ಮ ಕೊಪದಟ್ಟಿಯಲ್ಲಿ ಬಾವಿ ಇದೆ ಎಂದು ಹೇಳಿ ಕರೆದುಕೊಂಡು ಹೋದ. ಆ ಬಾವಿಯಲ್ಲಿ ಈಜಿ ಬಂದೆ. ಹೀಗಾಗಿ ಆ ಉದಪುಡಿ, ಉದಪುಡಿ ಅವರಿಗೆ ಸಂಬAಧ ಇರದೇ ಇದ್ದರೂ ಸಹ ಆತನಿಂದ ನನಗೆ ಉದಪುಡಿ ಸಹೋದರಿಯರ ನನಪಿಗೆ ಕಾರಣವಾಗುತ್ತಿತ್ತು. ನನಗೆ ಇಡೀ ತರಗತಿಯಲ್ಲಿ ನನ್ನ ತಮ್ಮ ಶ್ರೀಶೈಲನ ರೀತಿ, ನಡತೆ ಹೆಚ್ಚು ಅಚ್ಚುಮೆಚ್ಚು. ಅದೇ ರೀತಿ ವಿದ್ಯಾರ್ಥಿನಿಯರ ಸಾಲಿನಲ್ಲಿ ಶ್ರೀಮತಿ ತಾರಾದೇವಿ ಉದಪುಡಿ ಅವರ ರೀತಿ ನೀತಿ ಹಿಡಿಸಿತು. ಯಾರಿಗೂ ಕೆಟ್ಟದ್ದನ್ನು ಬಯಸದೇ ವ್ಯಕ್ತಿತ್ವ ವಿಕಸನದ ಮಾರ್ಗವನ್ನು ಶ್ರೀಶೈಲ ಮತ್ತು ಶ್ರೀಮತಿ ತಾರಾದೇವಿ ಅವರು ಹೊಂದಿದ್ದರು. ನಿಜವಾಗಿಯೂ ಇಬ್ಬರು ಇಡೀ ತರಗತಿಯಲ್ಲಿ ಉಳಿದವರಿಗೂ ಮಾದರಿ ಸಹಪಾಠಿಗಳು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಶಾಲಾ ಆರಂಭದ ದಿನಗಳಲ್ಲಿ ಉದಪುಡಿ ಸಹೋದರಿಯರು ಬೆಳಿಗ್ಗೆ ಮತ್ತು ಮಧ್ಯಾಹ್ನದ ಊಟದ ನಂತರ ಶಾಲೆಗೆ ಬರುವ ಸಮಯವನ್ನು ನಾನು ಮತ್ತು ಶ್ರೀಶೈಲ್ ಇಬ್ಬರೂ ಪಾಲಿಸುತ್ತಿದ್ದೆವು. ಉದಪುಡಿ ಸಹೋದರಿಯರು ತಮ್ಮ ಮನೆ ದೂರವಾಗುತ್ತಿದ್ದುದರಿಂದ ಎಲ್ಲರಿಗಿಂತ ಮೊದಲೇ ತರಗತಿಯಲ್ಲಿ ಬಂದು ಕೂಡುತ್ತಿದ್ದರು. ಹೀಗಾಗಿ ಅವರ ರೀತಿಯಲ್ಲಿ ನಾನೂ ಮತ್ತು ಶ್ರೀಶೈಲ್ ತರಗತಿಗಳಿಗೆ ಮುಂಚಿತವಾಗಿಯೇ ಬರುತ್ತಿದ್ದೆವು. ಶ್ರೀಮತಿ ಉದಪುಡಿ ಅವರೊಂದಿಗೆ ನಾನು ಎಂದಿಗೂ ಮಾತನಾಡಿಲ್ಲ. ಹೀಗಾಗಿ ಅವರೊಂದಿಗಿನ ಸಂಪರ್ಕ ನನಗೆ ಕೇವಲ ಪ್ರೌಢಶಾಲೆಯಲ್ಲಿಯೇ ಸೀಮಿತವಾಗಿತ್ತು. ನಾನು ಇಲ್ಲಿಯವರೆಗೂ ಸಹ ಅವರಿಗೆ ಭೇಟಿ ಮಾಡಿಲ್ಲ. ಈಗ ಗುಂಪಿನಲ್ಲಿ ಅವರ ಹೆಸರು ಮತ್ತು ಫೋನ್ ನಂಬರ್ ನೋಡಿ ಬಹಳಷ್ಟು ಖುಷಿಯಾಯಿತು. ಅವರಿಗೂ ಸಹ ಗುರುಪೂರ್ಣಿಮೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸೋಣ ಎಂದು ಕೋರುವೆ. ಇನ್ನು ಶ್ರೀಮತಿ ಪರಿಮಳಾ ದೇಶಪಾಂಡೆ ಅವರು ಸಹ ನನ್ನ ಮನೆಯ ಸಮೀಪದಲ್ಲೇ ಇದ್ದವರು. ನಾನು ಬಸ್ ನಿಲ್ದಾಣಕ್ಕೆ ಹೋಗುವಾಗ ಅವರ ಮನೆಯ ಮುಂದೆಯೇ ಹಾದು ಹೋಗಬೇಕು. ಸದಾ ಮನೆಗೆಲಸದೊಂದಿಗೆ ಓದು, ಬರಹದಲ್ಲಿ ತೊಡಗಿದವರು. ಉತ್ತಮ ವಿದ್ಯಾರ್ಥಿನಿಯಾಗಿದ್ದರು. ಗೆಳತಿಯರು ಸಿಕ್ಕರೆ ಸಾಕು ಮಾತಿನ ಮಲ್ಲಿಯಾಗುತ್ತಿದ್ದರು. ಅವರು ಇತ್ತೀಚೆಗೆ ಫೋನ್‌ನಲ್ಲಿ ಮಾತನಾಡಿದರು. ನನಗೆ ಖುಷಿ ಎನಿಸಿತು. ಬಾಲ್ಯದ ಸವಿ ನೆನಪುಗಳನ್ನು ತರಿಸಿದರು. ಗುರುಪೂರ್ಣಿಮೆಯ ಕುರಿತು ಸಂತೋಷ ವ್ಯಕ್ತಪಡಿಸಿದರು. ಇನ್ನು ಶ್ರೀಮತಿ ಡುಮ್ಮನವರ್ ಅವರೂ ಸಹ ನನಗೆ ಶಾಲೆಯಲ್ಲಿ ಹೊರತುಪಡಿಸಿ ಉಳಿದಂತೆ ಹೆಚ್ಚು ಪರಿಚಯವಿಲ್ಲ. ತರಗತಿಗೆ ನಿತ್ಯವೂ ಬರುತ್ತಿದ್ದ ಅವರು ಓದು, ಬರಹದಲ್ಲಿ ತಲ್ಲೀನರು. ಎಲ್ಲ ಮಹಿಳಾ ಸಹಪಾಠಿಗಳೊಂದಿಗೆ ಉತ್ತಮ ಗೆಳೆತನ ಹೊಂದಿದ್ದರು. ತಾವಾಯಿತು, ತಮ್ಮ ಓದು ಆಯಿತು ಎನ್ನದೇ ತನ್ನ ಪರಿಚಿತರೊಂದಿಗೆ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ನಾನು ಅವರೊಂದಿಗೆ ಎಂದಿಗೂ ಮಾತನಾಡುವ ಸಮಯ ಬರಲಿಲ್ಲ. ಹೀಗಾಗಿ ಈಗ ಗುರುಪೂರ್ಣಿಮೆಯಂದು ಅವರನ್ನು ಭೇಟಿ ಮಾಡಲು ಉತ್ಸುಕನಾಗಿದ್ದೇನೆ. ಅವರಿಗೂ ಸಹ ಗುರುಪೂರ್ಣಿಮೆ ದಿನದಂದು ಹೃತ್ಪೂರ್ವಕ ಸ್ವಾಗತವನ್ನು ಬಯಸುವೆ. ಶ್ರೀಮತಿ ಮೀನಾಕ್ಷಿ ಹೂಗಾರ್ ಅವರು ನಮ್ಮ ಶಾಲೆಯಲ್ಲಿ ಆಲ್‌ರೌಂಡರ್ ಆಗಿದ್ದರು. ಕೇವಲ ಪಠ್ಯವಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲೂ ಸೈ ಎನ್ನಿಸಿಕೊಂಡಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಹೆಡ್ ಮಾಸ್ಟರ್ ಪೂಜ್ಯ ಶ್ರೀ ಹೂಗಾರ್ ಅವರ ಸುಪುತ್ರಿ. ತಂದೆಯAತೆ ಮಗಳು, ಹೀಗಾಗಿ ಇಡೀ ಶಾಲೆಗೆ ಮೆಚ್ಚಿನ ವಿದ್ಯಾರ್ಥಿಯಾಗಿದ್ದರು. ಯಾವುದೇ ಕೆಲಸ ಕಾರ್ಯಗಳನ್ನು ಅವರು ಪಾದರಸದಂತೆ ಮಾಡುತ್ತಿದ್ದರು. ಮಲ್ಲಿಗೆಯಂತಹ ಮನಸ್ಸು. ಓಡಾಡುವುದರಲ್ಲಿ ಚಿನ್ನದ ಹುಡುಗಿ ಪಿ.ಟಿ. ಉಷಾ ಅವರನ್ನು ಮೀರಿಸುವ ರೀತಿಯಲ್ಲಿ ಚುರುಕಾಗಿ ಓಡಾಡುತ್ತಿದ್ದರು. ಬಹುತೇಕ ನನ್ನ ಎಲ್ಲ ಸಹಪಾಠಿಗಳು ಅವರ ನಡೆಯ ಕುರಿತು ಅತ್ಯಂತ ಪ್ರೀತಿ, ಅಭಿಮಾನದಿಂದ ಮಾತನಾಡುತ್ತಿದ್ದರು. ಅವರೊಂದಿಗೂ ನಾನು ಎಂದಿಗೂ ಮಾತನಾಡಲಿಲ್ಲ. ಬದಲಾಗಿ ಅಂತಕರಣದ ಭಾಷೆಯಾಗಿ ಸಹಪಾಠಿಗಳೊಂದಿಗೆ ಅವರ ಇರುವಿಕೆ ಈಗಲೂ ಹೆಮ್ಮೆ ಎನಿಸುತ್ತದೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಶ್ರೀಮತಿ ಮೀನಾಕ್ಷಿ ಹೂಗಾರ್ ಅವರು ಮೇಲುಗೈಯಾಗಿದ್ದರು. ಅವರ ಸಕ್ರೀಯ ಚಟುವಟಿಕೆಗಳು ನನ್ನ ಹಲವಾರು ಸಹಪಾಠಿಗಳು ನೆನಪು ಮಾಡುತ್ತಿದ್ದರು. ಇಬ್ಬರು ಸಹಪಾಠಿಗಳಂತೂ ಅವರ ಪ್ರತಿಯೊಂದು ಚಲನವಲನಗಳನ್ನು ಬಣ್ಣಿಸುತ್ತಿದ್ದರು. ಎಷ್ಟೇ ಆದರೂ ಪೂಜ್ಯ ಹೂಗಾರ್ ಸರ ರಕ್ತವಾಗಿದ್ದರಿಂದ ಇಡೀ ತರಗತಿಯ ಎಲ್ಲ ಸಹಪಾಠಿಗಳಿಗೂ ಸಹ ಅವರು ಅಚ್ಚುಮೆಚ್ಚು. ನಿಜವಾಗಿಯೂ ನಮ್ಮ ಬೆಳವಣಿಗೆಗೆ, ಪ್ರಗತಿಗೆ, ನಮ್ಮ ಸುಂದರವಾದ ಸಂಸಾರಕ್ಕೆ ಶ್ರೀಪೂಜ್ಯ ಹೂಗಾರ್ ಸರ್ ಅವರ ಕೊಡುಗೆ ಅಪಾರವಾಗಿದೆ. ಅವರ ಇಂಗ್ಲೀಷ್ ಗ್ರಾಮರ್ ಮತ್ತು ಇಂಗ್ಲೀಷ್ ಬೋಧನೆ ನಾವು ಉನ್ನತ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು. ತಾನು ಮುಖ್ಯ ಗುರುಗಳ ಮಗಳು ಎಂದು ಎಂದಿಗೂ ಶ್ರೀಮತಿ ಮೀನಾಕ್ಷಿ ಹೂಗಾರ್ ಅವರು ಜಂಬ ಕೊಚ್ಚಿಕೊಳ್ಳಲಿಲ್ಲ. ಎಲ್ಲರೊಂದಿಗೂ ಅರಿತು ಬೆರೆಯುವಂತಹ ಚಿನ್ನದಂತಹ ಮನಸ್ಸು. ಗುರುಪೂರ್ಣಿಮೆಯ ಸಂದರ್ಭಲ್ಲಿ ನಮ್ಮ ವಿರೂಪವನ್ನು ತೆಗೆದು ಸುಂದರ ಮೂರ್ತಿಗಳನ್ನಾಗಿ ಕೆತ್ತಿದ್ದ ಪೂಜ್ಯ ಶ್ರೀ ಹೂಗಾರ್ ಸರ್ ಅವರು ದೈಹಿಕವಾಗಿ ಇರದೇ ಇರುವುದು ನಮಗೆ ದು:ಖ ತರುವಂತಹ ಸಂಗತಿ. ಆದಾಗ್ಯೂ, ಅವರನ್ನು ಅಂದು ನಾವೆಲ್ಲ ಸ್ಮರಿಸುವ ಮೂಲಕ ಅವರಿಗೆ ಗುರುದಕ್ಷಿಣೆಯಾಗಿ ನಮಿಸುವ ಕಾರ್ಯ ಮಾಡೋಣ ಎಂದು ಎಲ್ಲ ಸಹಪಾಠಿಗಳಿಗೆ ಮನವಿ ಮಾಡುವೆ. -
ಟ್ಯಾಗ್ಸ್:#Sedam#Karnataka
ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.

Ads