Literature
ಕಗ್ಗ ದರ್ಶನ

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರು
ಶನಿವಾರ, ಸೆಪ್ಟೆಂಬರ್ 19, 20262 ನಿಮಿಷ ಓದು3 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
೧೪೬.ರಾಯ ಮುದಿದಶರಥನನಾಡಿಸುತ ಕೈಕೇಯಿ
ಸ್ವೀಯ ವಶದಲಿ ಕೋಸಲವನಾಳಿದಂತೆ
ಮಾಯೆ ಬೊಮ್ಮನ ಬಿನದವಡಿಸಿ ನಮ್ಮೀ
ಜಗವ ಕಾಯುವಳು ತನ್ನಿಚ್ಛೆ ಮಂಕುತಿಮ್ಮ.
ಈ ಪದ್ಯದಲ್ಲಿ ಮಾಯೆಯ ಶಕ್ತಿ ಮತ್ತು ಅದರ ಮೂಲಕ ಜಗತ್ತಿನ ನಡೆಯನ್ನು ವಿವರಿಸಲಾಗಿದೆ. ಮನುಷ್ಯನು ತಾನೇ ಎಲ್ಲವನ್ನೂ ಮಾಡುತ್ತಿದ್ದೇನೆ, ತನ್ನ ಇಚ್ಛೆಯಂತೆ ಬದುಕುತ್ತಿದ್ದೇನೆ ಎಂದುಕೊಳ್ಳುತ್ತಾನೆ. ಆದರೆ ಅವನ ಆಸೆ, ಮೋಹ, ಭ್ರಮೆ, ಅಹಂಕಾರ ಮುಂತಾದವುಗಳ ರೂಪದಲ್ಲಿ "ಮಾಯೆ" ಅವನನ್ನು ತನ್ನ ಅಧೀನದಲ್ಲಿಟ್ಟುಕೊಂಡು ಗೊಂಬೆಯAತೆ ಆಡಿಸುತ್ತದೆ. ಕೈಕೇಯಿಯು ದಶರಥನನ್ನು ತನ್ನ ವಶಕ್ಕೆ ತೆಗೆದುಕೊಂಡತೆ,ಮಾಯೆಯು ಮನುಷ್ಯನನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ ಎಂಬುದು ಪದ್ಯದ ಭಾವ. "ರಾಯ ಮುದಿದಶರಥನನಾಡಿಸುತ ಕೈಕೇಯಿ"-ಕೈಕೇಯಿಯು ರಾಜನಾದ ದಶರಥನನ್ನೇ ತನ್ನ ಇಚ್ಛೆಯಂತೆ ನಡೆಸಿದಳು. "ಸ್ವೀಯ ವಶದಲಿ ಕೋಸಲವನಾಳಿದಂತೆ"- ದಶರಥನ ಮೇಲೆ ಪ್ರಭಾವ ಬೀರಿ,ಕೋಸಲ ರಾಜ್ಯದ ವ್ಯವಹಾರಗಳನ್ನೂ ತನ್ನ ನಿಯಂತ್ರಣಕ್ಕೆ ತಂದಳು. "ಮಾಯೆ ಬೊಮ್ಮನಬಿನದವಡಿಸಿ ನಮ್ಮೀಜಗವ"- ಇದೇ ರೀತಿಯಲ್ಲಿ ಮಾಯೆಯು ಮನುಷ್ಯ ರನ್ನು ಗೊಂಬೆಗಳAತೆ ಆಡಿಸುತ್ತದೆ. "ಕಾಯುವಳು ತನ್ನಿಚ್ಛೆ ಮಂಕುತಿಮ್ಮ"- ಮಾಯೆ ತನ್ನ ಇಚ್ಛೆಯಂತೆ ನಮ್ಮ ಜಗತ್ತಿನ ಚಲನವಲನಗಳನ್ನು ನಡೆಸುತ್ತದೆ. ರಾಯನಾದ ದಶರಥನನ್ನೇ ತನ್ನ ಮಾತಿನಂತೆ ನಡೆಸಿ, ಕೈಕೆಯಿಯು ಕೋಸಲ ರಾಜವನ್ನು ತನ್ನ ಹೊಸದಲ್ಲಿ ಇಟ್ಟುಕೊಂಡು ಆಳಿದಳು. ಅದೇರೀತಿಯಾಗಿ ಈ ಜಗತ್ತನ್ನು ನಡೆಸುವ ಮಾಯೆಯು, ಮನುಷ್ಯರನ್ನು ಗೊಂಬೆಗಳAತೆ ಆಡಿಸುತ್ತಾ, ತನ್ನ ಇಚ್ಛೆಯಂತೆ ಜಗತ್ತಿನ ವಿವರಗಳನ್ನು ನಡೆಸುತ್ತಾಳೆ ಎನ್ನುವುದಾಗಿದೆ. ಇದನ್ನು ಭಗವದ್ಗೀತೆಯಲ್ಲಿ ನೋಡಿದರೂ, "ದೇವೀಹ್ಯೇಷಾ ಗುಣಮಯೀ ಮಮ ಮಯಾ ದುರತ್ಯಯಾ ಮಾಮೇವ ಯೇ ಪ್ರಪದ್ಯಂತೇ ಮಾಯಾಮೇತಾಂ ತರಂತಿ ತೇ"ಎಂದರೆ, ಸತ್ವ,ರಜಸ್ಸು, ಮತ್ತು ತಮಸ್ಸು ಎಂಬ ಮೂರು ಗುಣಗಳಿಂದ ಕೂಡಿರುವ ನನ್ನ ಈ ದೈವಿ ಮಾಯೆಯನ್ನು ದಾಟುವುದು ಬಹಳ ಕಷ್ಟ.ಆದರೆ ನನ್ನನ್ನೇ ಶರಣಾಗುವರು ಈ ಮಾಯೆಯನ್ನು ದಾಟುತ್ತಾರೆ. ಕೈಜೇಯಿಯು ದಶರಥನನ್ನು ತನ್ನ ವಶಕ್ಕೆ ತೆಗೆದುಕೊಂಡು, ತನ್ನ ಇಚ್ಛೆಯಂತೆ ನಡೆಸಿದಂತೆ, ಮಾಯೆಯು ಮನುಷ್ಯನನ್ನು ತನ್ನ ಅಧೀನದಲ್ಲಿಟ್ಟುಕೊಂಡು ನಡೆಸುತ್ತದೆ. ಮಾಯೆಯು ಬಹಳ ಪ್ರಬಲವಾದದ್ದು. ಅದು ಮನುಷ್ಯನ ಬುದ್ಧಿ, ಆಸೆ ಮತ್ತು ಕರ್ಮಗಳ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಮನುಷ್ಯನು ತನ್ನನ್ನು ತಾನು ಸ್ವತಂತ್ರನೆAದು ಭಾವಿಸಿದರೂ ಮಾಯೆಯ ಪ್ರಭಾವಕ್ಕೆ ಒಳಗಾಗಿ ಅದರಂತೆ ನಡೆಯುತ್ತಾನೆ. ಹೀಗಾಗಿ ಮಾಯೆ ಬೋಮ್ಮನ ಬಿನದ ವಡಿಸಿ ನಮ್ಮ ಈ ಜಗವ ಕಾಯುವಳು ಎಂಬುದು ಗೀತೆಯಲ್ಲಿಯೂ ಹೇಳಲಾಗಿದೆ. ಈ ಪದ್ಯದಲ್ಲಿ ಡಿವಿಜಿಯವರು ಮಾಯೆಯ ಪ್ರಭಾವಕ್ಕೆ ಒಳಗಾದ ಮನುಷ್ಯನ ಅಸಹಾಯಕತೆಯನ್ನು ರೂಪಕದ ಮೂಲಕ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.ಕೈ ಕೇಯಿಯು ರಾಜ ದಶರಥನನ್ನೇ ತನ್ನ ಮಾತಿನಂತೆ ನಡೆಸಿ, ಕೋಸಲ ರಾಜ್ಯದ ಮೇಲೆ ತನ್ನ ಪ್ರಭಾವ ಬೀರಿದ ಪ್ರಸಂಗವನ್ನು ಕವಿ ಉದಾರಣೆಯಾಗಿ ಬಳಸಿದ್ದಾರೆ. ಅದೇ ರೀತಿ ಮಾಯೆಯು ಮನುಷ್ಯನನ್ನು ಗೊಂಬೆಯAತೆ ಆಡಿಸುತ್ತಾ, ಅವನ ಜೀವನವನ್ನು ತನ್ನ ಇಚ್ಛೆಯಂತೆ ನಡೆಸುತ್ತದೆ ಎಂಬುದು ಪದ್ಯದ ಕೇಂದ್ರ ವಿಷಯವಾಗಿದೆ.ಮಾಯೆ ಎಂದರೆ ಕೇವಲ ಭ್ರಮೆಯಲ್ಲ; ಮನುಷ್ಯನನ್ನು ಬಂಧಿಸುವ ಆಸೆ, ಮೋಹ, ಅಹಂಕಾರ, ಕಾಮನೆ ಮತ್ತು ಲೌಕಿಕ ಆಕರ್ಷಣಗಳ ಸಂಕೇತವಾಗಿದೆ. ಮನುಷ್ಯನು ತನ್ನ ನಿರ್ಧಾರಗಳೇ ತನ್ನ ಜೀವನವನ್ನು ರೂಪಿಸುತ್ತವೆ ಎಂದು ಭಾವಿಸಿದರೂ, ಅವನ ಒಳಗಿನ ಆಸೆಯ ಮೋಹಗಳು ಅವನನ್ನು ಪ್ರಭಾವಿಸುತ್ತವೆ. ಇಲ್ಲಿ ಕವಿ ಪುರಾಣದ ಒಂದು ಪ್ರಸಿದ್ಧ ಘಟನೆಯನ್ನು ಆಧಾರವಾಗಿಸಿಕೊಂಡು, ಸಾರ್ವಕಾಲಿಕವಾದ ಮಾನವ ಸತ್ಯವನ್ನು ಹೇಳಿದ್ದಾರೆ.ಕೈ ಕೇಯಿ-ದಶರಥನ ಸಂಬAಧವನ್ನು, ಮಾಯೆ-ಮನುಷ್ಯ ಸಂಬAಧಕ್ಕೆ ಹೋಲಿಸಿರುವುದು ಈ ಕಗ್ಗದ ವೈಶಿಷ್ಟವಾಗಿದೆ. 'ಬೊಮ್ಮನ ಬಿನದವಡಿಸಿ'ಎಂಬ ರೂಪಕವು ಮನುಷ್ಯನ ಮೇಲೆ ಮಾಯೆಯ ಹಿಡಿತವನ್ನು ಅತ್ಯಂತ ಸರಳವಾಗಿ ಮತ್ತು ಪರಿಣಾಮಕಾರಿಯಾಗಿ ವ್ಯಕ್ತಪಡಿಸುತ್ತದೆ. ಒಟ್ಟಿನಲ್ಲಿ ಈ ಪದ್ಯವು ಮನುಷ್ಯನು ಮಾಯೆಯ ಬಂದನದಿAದ ಹೊರಬಂದು, ವಿವೇಕ ಮತ್ತು ಆತ್ಮಜ್ಞಾನದಿಂದ ಬದುಕಬೇಕು ಎಂಬ ಸಂದೇಶವನ್ನು ನೀಡುತ್ತದೆ.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads